ಬೆಂಗಳೂರು: ಹಣ ಕೊಡುವುದಾಗಿ ಅಪಾರ್ಟ್ಮೆಂಟ್ಗೆ ಕರೆಸಿಕೊಂಡು ರೌಡಿಯನ್ನು ಕೊಲೆ ಮಾಡಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತದೇಹ ತಮಿಳುನಾಡಿನಲ್ಲಿ ಪತ್ತೆಯಾಗಿದೆ. ಕೊತ್ತನೂರು ನಿವಾಸಿ ಗುಣ(30) ಕೊಲೆಯಾದ ರೌಡಿಶೀಟರ್.

ಕೃತ್ಯ ಎಸಗಿದ ಬ್ರಿಜೇಶ್ ಸೇರಿ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಜ.10ರಂದು ಗುಣನನ್ನು ಅಪಾರ್ಟ್ಮೆಂಟ್ಗೆ ಕೆರಸಿಕೊಂಡು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಗುಣ ಅವರ ಪತ್ನಿ ಜೋಸ್ಫಿನ್ ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಯಾದ ಗುಣ ಕೊತ್ತನೂರು ಠಾಣೆಯ ರೌಡಿಶೀಟರ್ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತ ದೇಹ ಸಾಗಾಟ ದೃಶ್ಯ ಸೆರೆ:
ಪ್ರಕರಣ ದಾಖಲಿಸಿಕೊಂಡ ಬಾಗಲೂರು ಠಾಣೆ ಪೊಲೀಸರು ಅಪಾರ್ಟ್ಮೆಂಟ್ಗೆ ತೆರಳಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಮೃತದೇಹ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿತ್ತು.

ಗುಣ ಅವರನ್ನು ಕೊಲೆ ಮಾಡಿ ಮೃತದೇಹ ಯಾರಿಗೂ ಸಿಗಬಾರದೆಂದು ಹೊರಗೆ ತೆಗೆದುಕೊಂಡು ಬಿಸಾಡಲು ಹೋಗಿರುವುದು ಗೊತ್ತಾಗಿದೆ. ಬಳಿಕ ತನಿಖೆ ನಡೆಸಿದಾಗ ಗುಣ ಮೃತದೇಹ ತಮಿಳುನಾಡಿನ ಪೆನ್ನಾಂಗಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.