ಬೆಂಗಳೂರು: ‘ನಟಿ ರಶ್ಮಿಕಾ ಮಂದಣ್ಣನಂಥವರಿಗೆ ಬುದ್ಧಿ ಕಲಿಸಬೇಕು’ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ನಟ್ಟು ಬೋಲ್ಟು ಟೈಟ್’ ಎಂಬ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸಿನಿಮಾದವರು ಬಾಯಿ ಮುಚ್ಚಿಕೊಂಡು ಇರಬೇಕು’ ಎಂದು ಸಿಡಿಮಿಡಿಗೊಂಡರು.

‘ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಬೆಳೆದವರು. ಕಳೆದ ವರ್ಷ ಚಿತ್ರೋತ್ಸವಕ್ಕೆ ಆಹ್ವಾನ ಮಾಡಿದ್ದೆವು. ನಾನು ಹೈದರಾಬಾದ್ನಲ್ಲಿ ಇರೋದು. ನನಗೆ ಸಮಯ ಇಲ್ಲ ಎಂದು ಹೇಳಿದ್ದರು. ಕನ್ನಡದಿಂದ ಬೆಳೆದ ಇವರು ಹತ್ತಾರು ಬಾರಿ ಕರೆದರೂ ಇಷ್ಟು ಉದ್ಧಟತನದಿಂದ ಮಾತನಾಡುತ್ತಾರೆಂದರೆ ಇಂಥವರಿಗೆ ನಾವು ಬುದ್ಧಿ ಕಲಿಸಬೇಕಲ್ಲವೇ’ ಎಂದರು.

‘ಸಿನಿಮಾಗಳಿಗೆ ನೀಡುವ ಸಹಾಯಧನದ ಬಗ್ಗೆ ಯೋಚಿಸುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ನಾನು ಪತ್ರ ಬರೆಯುತ್ತೇನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಡಿ.ಕೆ. ಶಿವಕುಮಾರ್ ವಿರುದ್ಧ ಮಾತನಾಡುತ್ತಾನೆ. ಇಲ್ಲಿನ ದುಡ್ಡು ದೋಚಿಕೊಂಡು ಹೋದವನು. ಇವತ್ತು ನಮ್ಮ ಬಗ್ಗೆ ಮಾತನಾಡುತ್ತಾನೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.