ಚಿಕ್ಕಬಳ್ಳಾಪುರ: ‘ಮೀಸಲಾತಿ ನೀಡಲುಜನಸಂಖ್ಯೆಗಿಂತ ಬಡತನವೇ ಮುಖ್ಯಮಾನದಂಡ ಆಗಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

ತಾಲ್ಲೂಕಿನ ನಂದಿ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಆರ್ಥಿಕವಾಗಿ ಹಿಂದುಳಿದವರು ಎನ್ನುವ ಕಾರಣಕ್ಕೆ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಆ ಸಮಾಜದರು ನಮ್ಮಲ್ಲಿ ಎಷ್ಟು ಜನರು ಇದ್ದಾರೆ ಎನ್ನುವ ಚರ್ಚೆ ಮಾಡಿದರೆ ಅದು ಎಲ್ಲಿಗೊ ಹೋಗುತ್ತದೆ’ ಎಂದರು.

‘ಮೀಸಲಾತಿಗಾಗಿಪಂಚಮಸಾಲಿ ಮತ್ತು ಕುರುಬ ಸಮಾಜ ಹೋರಾಟ ನಡೆಸುತ್ತಿವೆ. ಜನಸಂಖ್ಯೆ ಆಧಾರದಲ್ಲಿ ಶೇ 12ರಷ್ಟು ಮೀಸಲಾತಿ ನೀಡುವಂತೆ ಒಕ್ಕಲಿಗರು ಸಹ ಆಗ್ರಹಿಸುತ್ತಿದ್ದಾರೆ. ಒಕ್ಕಲಿಗ ಸಮಾಜದ ಜಾತಿ, ಉಪಜಾತಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಮಾಹಿತಿ ಪಡೆದು ಆ ಆಧಾರದಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಸಮುದಾಯದ ಸ್ವಾಮಿಗಳಲ್ಲಿ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.