ಮೈಸೂರು: ‘ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿನ 6 ಕೃತಿಗಳಲ್ಲಿ ನನ್ನ ‘ಹಾರ್ಟ್ ಲ್ಯಾಂಪ್’ ಕಥಾಗುಚ್ಛ ಕೂಡ ಸ್ಥಾನ ಪಡೆದಿದೆ. ಮೇ 20ರಂದು ಲಂಡನ್ನಲ್ಲಿ ಪ್ರಶಸ್ತಿ ಘೋಷಣೆಯಾಗಲಿದ್ದು, ಮೂವರು ಮಕ್ಕಳೊಂದಿಗೆ ಹೋಗುತ್ತಿರುವೆ. ಪ್ಲೀಸ್, ಪ್ರೇ ಫಾರ್ ಮಿ– ಭಾರತೀಯಳಿಗೆ, ಕನ್ನಡತಿಗೆ ಬೂಕರ್ ಸಿಗಲೆಂದು ಪ್ರಾರ್ಥಿಸಿ’ ಎಂದು ಲೇಖಕಿ ಬಾನು ಮುಷ್ತಾಕ್ ಕೋರಿದರು.

ನಗರ ಜೆಎಲ್ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಬುಧವಾರ, ತಮ್ಮ ಕೃತಿ ‘ಹಸೀನಾ ಮತ್ತು ಇತರ ಕಥೆಗಳು’ ಪರಿಷ್ಕೃತ ಮುದ್ರಣದ ಬಿಡುಗಡೆಯಲ್ಲಿ ಮಾತನಾಡಿದ ಅವರು, ಬರಹದ ಯಾನವನ್ನು ಓದುಗರಿಗೆ ತೆರೆದಿಟ್ಟರು.

‘ಗಿರೀಶ್ ಕಾಸರವಳ್ಳಿ ಅವರು ಚಲನಚಿತ್ರ ಮಾಡಲು ಎರಡು ದಶಕದ ಹಿಂದೆ ಹೆಣ್ಣು ಮಕ್ಕಳ ಕಥೆಗಳನ್ನು ಹುಡುಕಿ ಸುಸ್ತಾಗಿದ್ದರು. ಆಗೊಬ್ಬರು ನನ್ನ ‘ಕರಿ ನಾಗರಗಳು’ ಕಥೆಯನ್ನು ಹುಡುಕಿಕೊಟ್ಟಿದ್ದರು. ಈ ವಿಷಯ ನನಗೂ ಗೊತ್ತಾಯಿತು. ಆಗೆಲ್ಲ, ದಿನ ರಾತ್ರಿ ಕಾಸರವಳ್ಳಿ ಕರೆ ಮಾಡುತ್ತಾರೆ ಎಂದು ಕನಸು ಕಾಣುತ್ತಿದ್ದೆ. ಒಂದು ಮುಂಜಾನೆ ಕಾಸರವಳ್ಳಿ ಕರೆ ಮಾಡಿದ್ದರು. ನನಗೇನು ಆಶ್ಚರ್ಯವಾಗಿರಲಿಲ್ಲ. ಈಗಲೂ ಹಾಗೇ ಆಗುತ್ತದೆ ಎಂದುಕೊಂಡಿರುವೆ’ ಎಂದು ನಗೆಯುಕ್ಕಿಸಿದರು.

‘ಕರಿ ನಾಗರಗಳು’ ಕಥೆ ಹಸೀನಾ ಆಗಿ 2004ರಲ್ಲಿ ಬಿಡುಗಡೆಯಾಗಿತ್ತು. ಅದರ ಪ್ರೀಮಿಯರ್ ಪ್ರದರ್ಶನದಲ್ಲಿ ನಟಿ ತಾರಾ ನನ್ನ ಕುರ್ಚಿಯ ಪಕ್ಕ ಕೈ ಹಿಡಿದು ಕೂತು ನೋಡಿದ್ದರು. ಕಣ್ಣೀರು ತುಂಬಿ ನಿಮಗೆ ರಾಷ್ಟ್ರಪ್ರಶಸ್ತಿ ಬರುತ್ತದೆ ಎಂದಿದ್ದೆ. ಐಶ್ವರ್ಯ ರೈ ಮತ್ತು ತಾರಾ ನಡುವೆ ಪೈಪೋಟಿಯಿತ್ತು. ಕೊನೆಗೆ ನಾನು ಹೇಳಿದಂತೆ ಕನ್ನಡತಿಗೆ ಪ್ರಶಸ್ತಿ ಬಂದಿತ್ತು’ ಎಂದು ನೆನೆಪು ಮಾಡಿಕೊಂಡರು.

‘ನನ್ನ ಕಥೆಗಳನ್ನು ಇಂಗ್ಲಿಷ್ಗೆ ಯಾರಾದರೂ ಅನುವಾದ ಮಾಡುತ್ತಾರೆಯೇ ಎಂದು ಪತ್ರಕರ್ತ ಬಸವ ಬಿರಾದರ್ ಮೂರು ವರ್ಷದ ಹಿಂದೆ ಅವರನ್ನು ಕೇಳಿದ್ದೆ. ಅವರು ದೀಪಾ ಭಸ್ತಿ ಅವರ ಮೊಬೈಲ್ ನಂಬರ್ ಕೊಟ್ಟಿದ್ದರು. ಮಣಿಪಾಲದಲ್ಲಿ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಯಲಿತ್ತು. ಆಗ ದೀಪಾ ಅವರು ಕರೆ ಮಾಡಿ ನಿಮ್ಮ ಕಥಾ ಸಂಕಲನ ಯುನೈಟೆಡ್ ಕಿಂಗ್ಡಮ್ ಅಲ್ಲಿಯೇ ಪ್ರಕಟವಾಗಬೇಕು, ಅನುಮತಿ ಬೇಕೆಂದು ಕೋರಿದ್ದರು. ನಾನೂ ಸಹಿ ಮಾಡಿದ್ದೆ. ಅದಕ್ಕೆ ‘ಪೆನ್’ ಪ್ರಶಸ್ತಿಯೂ ಸಿಕ್ಕಿತು. ಇದೀಗ ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿವರೆಗೂ ಬರುತ್ತದೆಂದು ಅಂದುಕೊಂಡಿರಲಿಲ್ಲ’ ಎಂದರು.

ನಂತರ ನಡೆದ ಸಂವಾದದಲ್ಲಿ ಲೇಖಕಿ ಪ್ರೀತಿ ನಾಗರಾಜ್, ‘ನೀವೆಂದಾದರೂ ಬರಹಗಾರ್ತಿ ಆಗುತ್ತೇನೆ ಎಂದುಕೊಂಡಿದ್ದಿರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮದುವೆಯಾಗುತ್ತಲೇ ಕೆಲಸ ಬಿಡಬೇಕಾಯಿತು. ಅವಿಭಕ್ತ ಕುಟುಂಬ. ಹೀಗಾಗಿ ನಿರ್ಬಂಧಗಳೂ ಹೆಚ್ಚು. ಗಂಡನಿಗೆ ಹೆಂಡತಿ, ಮಕ್ಕಳ ತಾಯಿಯಾಗಿ ಜವಾಬ್ದಾರಿ ಹೆಚ್ಚಿದ್ದವು. ಮೂರು ವರ್ಷ ಮನೆಯಲ್ಲಿಯೇ ಇದ್ದೆ. ಆಮೇಲೆ ಬರಹವನ್ನು ಮುಂದುವರಿಸಿದೆ’ ಎಂದರು.

ಸಂವಾದದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ವಿಜ್ಞಾನ ಲೇಖಕಿ ಪದ್ಮಾ ಶ್ರೀರಾಮ, ‘ಮೈಸೂರು ಲಿಟ್ರರಿ ಫೋರಂ ಚಾರಿಟಬಲ್ ಟ್ರಸ್ಟ್’ನ ಶುಭಾ ಸಂಜಯ ಅರಸ್, ಪ್ರಕಾಶಕ ಅಭಿರುಚಿ ಗಣೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.