ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿಯ ಕೆಲವು ಪ್ರದೇಶಗಳು ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರ ಮಳೆ ಬಿದ್ದಿದೆ.

ಉತ್ತರ ಕನ್ನಡ, ಹೊಸಪೇಟೆ, ಹುಬ್ಬಳ್ಳಿ–ಧಾರವಾಡ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಿದೆ.

ಹೊಸಪೇಟೆಯಲ್ಲಿ ಬುಧವಾರ ತಡರಾತ್ರಿ ಬಿರುಸಾಗಿ ಮಳೆಯಾಗಿತ್ತು. ಗುರುವಾರ ನಸುಕಿನ ಜಾವ ಆರಂಭಗೊಂಡ ತುಂತುರು ಮಳೆ ಮಧ್ಯಾಹ್ನವೂ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸುರಿದ ಅಕಾಲಿಕ ಮಳೆಯಿಂದ ಬೆಳೆಗೆ ಹಾನಿಯಾಗಿದೆ. ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಬಣವೆ ಹಾಕಲಾಗಿದ್ದ ಭತ್ತದ ರಾಶಿ ನೆನೆದು ಹಾಳಾಗಿದೆ. ಭತ್ತದ ಬಣವೆ, ಒಣಗಲು ಹರವಿದ್ದ ಅಡಿಕೆ, ಸಾಂಬಾರ ಪದಾರ್ಥಗಳು ಮಳೆ ನೀರಿನಲ್ಲಿ ತೊಯ್ದು ರೈತರಿಗೆ ನಷ್ಟವಾಗಿದೆ. ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ನಸುಕಿನಲ್ಲಿ ರಭಸದ ಮಳೆಯಾಗಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ನಸುಕಿನವರೆಗೂ ಬಿಟ್ಟುಬಿಟ್ಟು ಬಿರುಸಾಗಿ ಮಳೆಯಾಗಿದ್ದು, ಹಲವೆಡೆ ಕಾಫಿ, ಅಡಿಕೆ, ಭತ್ತ ನೀರು ಪಾಲಾಗಿದೆ.

ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಭಾಗದಲ್ಲಿ ಕಟಾವು ಮಾಡಿ ಗದ್ದೆ, ಕಣದಲ್ಲಿ ಹಾಕಿದ್ದ ಭತ್ತ ಕೊಚ್ಚಿ ಹೋಗಿದೆ. ತೋಟಗಳಲ್ಲಿ ಕಾಫಿ ಉದುರಿದೆ, ಒಣ ಹಾಕಿದ್ದ ಕಾಫಿ ಬೀಜ, ಅಡಿಕೆ ನೀರುಪಾಲಾಗಿದೆ.

ಸಿಡಿಲು ಬಡಿದು ಉಡುಪಿಯ ಬ್ರಹ್ಮಾವರದ ಸಪ್ತಮಿ ಹೋಟೆಲ್ ಬೆಂಕಿಗಾಹುತಿಯಾಗಿದ್ದು, ₹ 1 ಲಕ್ಷ ಹಾನಿ ಅಂದಾಜಿಸಲಾಗಿದೆ.

ಬೈಂದೂರು ತಾಲ್ಲೂಕಿನ ಉಪ್ಪುಂದ ಗ್ರಾಮದಲ್ಲಿ ಕೃಷ್ಣ ಪೂಜಾರಿ ಅವರ ನಿವಾಸ ಹಾಗೂ ಕಾರ್ಕಳ ತಾಲ್ಲೂಕಿನ ಮುಂಡ್ಕೂರು ಗ್ರಾಮದ ಕುದುರೆಬೆಟ್ಟುವಿನಲ್ಲಿ ಐತು ಪೂಜಾರಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಳಿ ನಂದಿನಿ ನದಿ ಉಕ್ಕಿ ಹರಿಯುತ್ತಿದ್ದು, ಇಲ್ಲಿನ ಸಣ್ಣ ಅಣೆಕಟ್ಟು ಮುಳುಗಡೆಯಾಗಿದೆ. ಇದರಿಂದ ಸುತ್ತಲ ಕೃಷಿ ಭೂಮಿ, ಅಡಿಕೆ ತೋಟ ಹಾಗೂ ರಸ್ತೆ ಜಲಾವೃತಗೊಂಡಿವೆ. ಕಟೀಲು ಸಮೀಪದ ಮೂರುಕಾವೇರಿ– ಕಿನ್ನಿಗೋಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಮಳೆಗೆ ಮಣ್ಣೆಲ್ಲ ಕೊಚ್ಚಿ ಹೋಗಿ ಸಮೀಪದ ತೋಟಕ್ಕೆ ಸೇರಿದೆ.

ದಾವಣಗೆರೆ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆಯವರೆಗೆ ಉತ್ತಮ ಮಳೆಯಾಗಿದೆ. ಹರಿಹರ ತಾಲ್ಲೂಕಿನ ಗುತ್ತೂರು ಭಾಗದಲ್ಲಿ ರಾತ್ರಿಯಿಂದ ಸುರಿದ ಮಳೆಗೆ 250ಕ್ಕೂ ಹೆಚ್ಚು ಇಟ್ಟಿಗೆ ಭಟ್ಟಿಗಳಿಗೆ ಹಾನಿಯಾಗಿದೆ. ಇಟ್ಟಿಗೆ ಭಟ್ಟಿಗಳು ಮಳೆಯಿಂದ ತೊಯ್ದು ₹ 20 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಮಾರಾಟಕ್ಕೆ ಸಿದ್ಧವಾಗಿದ್ದ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದೆ. ದಾವಣಗೆರೆ, ಚನ್ನಗಿರಿ, ನ್ಯಾಮತಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾದರೆ, ಜಗಳೂರು ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ತುಂತುರು ಮಳೆಯಾಗಿದೆ.

ಮನೆಗಳಿಗೆ ನುಗ್ಗಿದ ನೀರು: ಶಿವಮೊಗ್ಗ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ, ಗುರುವಾರ ಬೆಳಗಿನ ಜಾವ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೊಸಮನೆ ಬಡಾವಣೆ ಸೇರಿ ರಾಜಕಾಲುವೆಗಳು ಹರಿದುಹೋಗುವ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ಜನರು ಮನೆಯಿಂದ ಹೊರಬಂದು ಇಡೀ ರಾತ್ರಿ ಬೀದಿಗಳಲ್ಲೇ ಕಳೆದಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಪಾಲಿಕೆಯಿಂದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಯಿತು.

‘ಸ್ಮಾರ್ಟ್ ಸಿಟಿ ಕಾಮಗಾರಿಗಳು ಅರ್ಧಕ್ಕೆ ನಿಂತಿರುವ ಪರಿಣಾಮ ಚರಂಡಿ, ರಾಜಕಾಲುವೆಗಳಲ್ಲಿ ನೀರು ಹರಿಯದೆ ಮನೆಗಳಿಗೆ ನುಗ್ಗಿದೆ. ಹಿಂದೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಪಾಲಿಕೆಯ ಹೊಸಮನೆ ವಾರ್ಡ್ ಸದಸ್ಯೆ ರೇಖಾ ರಂಗನಾಥ್ ದೂರಿದರು.

‘ಹೊಸಮನೆ, ಸೋಮಿನಕೊಪ್ಪದಲ್ಲಿ ನೀರು ನುಗ್ಗಿ ಸುಮಾರು 15 ಮನೆಗಳ ಪರಿಕರಗಳು ಹಾಳಾಗಿವೆ. ನಷ್ಟದ ಅಂದಾಜು ತಯಾರಿಸಲಾಗುತ್ತಿದ್ದು, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಪ್ರತಿಕ್ರಿಯಿಸಿದರು.

ಹೊಸನಗರ, ತೀರ್ಥಹಳ್ಳಿಯ ಹಲವು ಕಡೆ ಸಾಕಷ್ಟು ಮಳೆ ಸುರಿದಿದೆ. ಕೆಲವು ಭಾಗಗಳಲ್ಲಿ ಕೊಯ್ಲಿಗೆ ಬಂದಿದ್ದ ಭತ್ತ ಹಾಳಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಈರುಳ್ಳಿ, ಕಡಲೆ ಬೆಳೆಗೆ ಹಾನಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಒಂದೇ ದಿನ 10 ಸೆಂ.ಮೀ ಮಳೆಯಾಗಿದ್ದು, ರಾಗಿ ಒಕ್ಕಣೆಗೂ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಆರಂಭವಾದ ಮಳೆ ಗುರುವಾರ ಬೆಳಿಗ್ಗೆವರೆಗೆ ಸುರಿದಿದೆ.

ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಯಡ್ರಾಮಿ ಮತ್ತು ವಾಡಿ, ಯಾದಗಿರಿ ಜಿಲ್ಲೆಯ ಗುರುಮಠಕಲ್, ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಕಮಲನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಕೆಲವೆಡೆ ಗುರುವಾರ ಮಳೆಯಾಯಿತು. ಇಡೀ ದಿನ ಮೋಡ ಕವಿದ ವಾತಾವರಣವಿತ್ತು.

‘ಮೂರು ದಿನ ಮೋಡ ಕವಿದ ವಾತಾವರಣ ಇರಲಿದ್ದು, ತೊಗರಿ ರಾಶಿ ಕೊಳೆಯುವ ಸಾಧ್ಯತೆಯಿದೆ. ತೊಗರಿ ಕಟಾವು ಎರಡು ದಿನ
ಗಳ ಮಟ್ಟಿಗೆ ಮುಂದೂಡುವುದು ಒಳ್ಳೆಯದು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.

ಭತ್ತ, ರಾಗಿ ಜಲಾವೃತ; ಕಾಫಿ ಕೊಳೆಯುವ ಆತಂಕ

ಮೈಸೂರು: ಕೊಡಗು, ಮೈಸೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಬುಧವಾರ ಸುರಿದ ಅಕಾಲಿಕ ಮಳೆಯಿಂದ ಭತ್ತ, ರಾಗಿ ಹಾಗೂ ಕಾಫಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು, ಒಣಗಲು ಹಾಕಿದ ಕಾಫಿ ಮಳೆಗೆ ನೆನೆದು ಕೊಳೆಯುತ್ತಿದೆ. ಕೊಯ್ಲು ಮಾಡದೇ ಉಳಿದಿರುವ ರೋಬಸ್ಟಾ ಕಾಫಿ ನೆಲಕ್ಕೆ ಉದುರುತ್ತಿದೆ. ಲಾಕ್‌ಡೌನ್ ಕಾರಣದಿಂದ ಊರಿಗೆ ತೆರಳಿದ ಕಾರ್ಮಿಕರು ವಾಪಸ್ ಬರದೇ ಇರುವುದರಿಂದ, ಕಾರ್ಮಿಕರ ಕೊರತೆಯಾಗಿ ಈ ಬಾರಿ ಕೊಯ್ಲು ಕೂಡ ವಿಳಂಬವಾಗಿದೆ. ಅದರ ನಡುವೆಯೇ ಸುರಿದ ಮಳೆ, ಬೆಳೆಗಾರರನ್ನು ಕಂಗಾಲು ಮಾಡಿದೆ.

‘ದಿಢೀರ್ ಮಳೆ ಸುರಿದರೆ ಒಣಗಲು ಹಾಕಿದ ಕಾಫಿ ಸಂರಕ್ಷಿಸಲು ಸಾಧ್ಯವಾಗುವುದಿಲ್ಲ. ಕಾಫಿಯ ಗುಣಮಟ್ಟ ಕುಸಿದರೆ ಉತ್ತಮ ಧಾರಣೆ ಸಹ ಸಿಗುವುದಿಲ್ಲ. ತೇವಾಂಶವಿದ್ದರೆ ವ್ಯಾಪಾರಸ್ಥರು ಖರೀದಿಸುವುದಿಲ್ಲ’ ಎಂದು ಸೋಮವಾರಪೇಟೆಯ ಗಿರೀಶ್ ಹೇಳಿದರು.

ಭತ್ತ, ರಾಗಿ ಜಲಾವೃತ: ಹಾಸನ ಜಿಲ್ಲೆಯ ಅರಕಲಗೂಡು, ಸಕಲೇಶಪುರ, ಬೇಲೂರು ತಾಲ್ಲೂಕಿನಲ್ಲಿ ಭತ್ತ, ರಾಗಿ ಬೆಳೆ ನೀರಿನಲ್ಲಿ ಮುಳಗಿದೆ. ಕಾಫಿಗೂ ಸಾಕಷ್ಟು ಹಾನಿಯಾಗಿದೆ. ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, ಕಟಾವು ಮಾಡಿ ಗದ್ದೆಗಳಲ್ಲಿ ಅರಿ ಹಾಕಿದ್ದ ಭತ್ತದ ಹುಲ್ಲು ಜಲಾವೃತವಾಗಿದೆ. ಆಲೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲೂ ಭತ್ತದ ಬೆಳೆ ಹಾಳಾಗಿದೆ.

ಮಂಡ್ಯ ಜಿಲ್ಲೆಯ ವಿವಿಧೆಡೆ ಒಂದು ವಾರದಿಂದ ತುಂತುರು ಮಳೆಯಾಗುತ್ತಿದ್ದು, ಭತ್ತ ಮತ್ತು ರಾಗಿಯ ಕಟಾವು ಹಾಗೂ ಒಕ್ಕಣೆ ಕಾರ್ಯಕ್ಕೆ ತೊಂದರೆಯಾಗಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಮಳೆ ಯಿಂದ, ಕಟಾವು ಮಾಡಿದ್ದ ಭತ್ತ ಮತ್ತು ರಾಗಿಗೆ ಹೆಚ್ಚಿನ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಹುರುಳಿ, ಅವರೆ, ಅಲಸಂದೆ ಬೆಳೆಗೂ ಹಾನಿಯಾಗಿದೆ. ಮೈಸೂರು ತಾಲ್ಲೂಕಿನ ತಳೂರು, ಮಾರ್ಬಳ್ಳಿ, ಗೋಪಾಲಪುರ ಗ್ರಾಮಗಳ ಹಲವೆಡೆ ಬಾಳೆ ಗಿಡಗಳು ನೆಲಕಚ್ಚಿವೆ. ದೊಡ್ಡಹುಂಡಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.