ಜ್ಯೋತಿಷಿ ಮನೆಯಲ್ಲಿ ಶೋಧ
ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಸದ್ಯ ದುಬೈನಲ್ಲಿ ನೆಲಸಿರುವ ‘ಹೆಲಿಕಾಪ್ಟರ್ ಜ್ಯೋತಿಷಿ’ಯೊಬ್ಬರ ಮನೆಯಲ್ಲಿ ಡಿಆರ್‌ಐ ಮತ್ತು ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ತಮ್ಮ ಹೆಸರಿನ ಜತೆಗೆ ಸ್ವಾಮೀಜಿ ಎಂದು ಸೇರಿಸಿಕೊಳ್ಳುವ ಈ ಜ್ಯೋತಿಷಿ ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿ ಮನೆ ಮತ್ತು ಕಚೇರಿ ಹೊಂದಿದ್ದಾರೆ. ಅವರ ಬ್ಯಾಂಕ್ ಖಾತೆ ವಹಿವಾಟುಗಳು, ವಿದೇಶಿ ಪ್ರಯಾಣದ ಮಾಹಿತಿ ಮತ್ತು ಕರೆ ವಿವರಗಳನ್ನು ತನಿಖಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.