ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣವು, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ದೇಶಗಳಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ನಡೆಸುವ ಜಾಲದ ಕರಾಮತ್ತನ್ನು ಬಹಿರಂಗಗೊಳಿಸಿದೆ.

ಭಾರತಕ್ಕೆ ಪ್ರತಿ ವರ್ಷ ಬಂದು ಸೇರುವ ಚಿನ್ನದ ಪ್ರಮಾಣದಲ್ಲಿ ಶೇ 25–30ರಷ್ಟು ಕಳ್ಳಸಾಗಣೆ ಮೂಲಕ ದೇಶವನ್ನು ಪ್ರವೇಶಿಸುತ್ತಿದೆ. ಈ ಚಿನ್ನವು ದೂರದ ಕೆರೀಬಿಯನ್ ಹಾಗೂ ಆಫ್ರಿಕಾದ ದೇಶಗಳಿಂದ ಹೊರಟು ದುಬೈ ತಲುಪುತ್ತದೆ. ಅಲ್ಲಿಂದ ವಿಮಾನಗಳ ಮೂಲಕ ಭಾರತವನ್ನು ಪ್ರವೇಶಿಸುತ್ತದೆ ಎನ್ನುತ್ತದೆ ರೆವೆನ್ಯೂ ಗುಪ್ತಚರ ನಿರ್ದೇಶಾನಲಯದ (ಡಿಆರ್ಐ) ತನಿಖಾ ವರದಿ.

2024 ಮತ್ತು 2025ರಲ್ಲಿ ಮುಂಬೈನಲ್ಲಿ ಪತ್ತೆಯಾದ ಪ್ರಕರಣದ ಜಂಟಿ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಡಿಆರ್ಐ ಅಧಿಕಾರಿಗಳು, ಅದರ ಜಾಡು ಹಿಡಿದುಕೊಂಡು ಬೆಂಗಳೂರಿನವರೆಗೂ ಬಂದಿದ್ದಾರೆ. ಅವರ ಶಂಕೆಯಂತೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಎರಡೇ ದಿನಗಳ ಅಂತರದಲ್ಲಿ ಕಳ್ಳಸಾಗಣೆ ಮಾಡಿದ್ದ ಒಟ್ಟು 18 ಕೆ.ಜಿ.ಗಿಂತಲೂ ಹೆಚ್ಚು ಚಿನ್ನ ಪತ್ತೆಯಾಗಿದೆ.

‘ಸಾಮಾನ್ಯವಾಗಿ ಕೆ.ಜಿಗಿಂತಲೂ ಸಣ್ಣ ಪ್ರಮಾಣದಲ್ಲಿ ಚಿನ್ನವನ್ನು ಬ್ಯಾಗೇಜ್ಗಳಲ್ಲಿ ಅಡಗಿಸಿ, ಪೇಸ್ಟ್, ಹಾಳೆ, ಯಂತ್ರೋಪಕರಣಗಳ ಬಿಡಿಭಾಗಗಳ ರೂಪದಲ್ಲಿ ಕಳ್ಳಸಾಗಣೆ ಮಾಡಲಾಗುತ್ತದೆ. ಆದರೆ ಒಮ್ಮೆಗೇ 10–15 ಕೆ.ಜಿ.ಯಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡುವುದು ಅಪರೂಪ. ಅತ್ಯಂತ ವ್ಯವಸ್ಥಿತ ಜಾಲದಿಂದಷ್ಟೇ ಈ ಮಟ್ಟದ ಕಳ್ಳಸಾಗಣೆ ನಡೆಸಲು ಸಾಧ್ಯವಾಗುತ್ತದೆ’ ಎನ್ನುತ್ತವೆ ಸಿಬಿಐ ಮೂಲಗಳು.

‘ರಾಜತಾಂತ್ರಿಕರಿಗೆ, ಅತಿಗಣ್ಯರಿಗೆ ಮತ್ತು ಶಿಷ್ಟಾಚಾರದ ಸವಲತ್ತು ಇರುವ ವ್ಯಕ್ತಿಗಳಿಗಷ್ಟೇ ವಿಮಾನ ನಿಲ್ದಾಣಗಳಲ್ಲಿ ಅಂತರರಾಷ್ಟ್ರೀಯ ಟರ್ಮಿನಲ್ಗಳಿಂದ ಹೊರಬರುವಾಗ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಿಂದ ವಿನಾಯಿತಿ ಸಿಗುತ್ತದೆ. ದೊಡ್ಡಮಟ್ಟದ ಕಳ್ಳಸಾಗಣೆಗೆ ಈ ಜಾಲವು, ಅಂತಹ ವಿನಾಯಿತಿ ಇರುವವರನ್ನೇ ಬಳಸಿಕೊಳ್ಳುತ್ತದೆ. ರನ್ಯಾ ರಾವ್ ಪ್ರಕರಣವೂ ಇಂಥದ್ದೇ ಒಂದು’ ಎಂಬುದು ಮೂಲಗಳ ವಿವರಣೆ.

‘2024ರ ಏಪ್ರಿಲ್ನಲ್ಲಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ರಾಜತಾಂತ್ರಿಕ ಮಹಿಳಾ ಅಧಿಕಾರಿಯೊಬ್ಬರನ್ನು, ಖಚಿತ ಮಾಹಿತಿ ಮೇರೆಗೆ ಡಿಆರ್ಐ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಆ ಮಹಿಳೆ ಬೆಲ್ಟ್, ರುಮಾಲು, ಒಳಉಡುಪು ಮತ್ತು ಹಾಳೆಗಳ ರೂಪದಲ್ಲಿ ದುಬೈನಿಂದ ಮುಂಬೈಗೆ 25 ಕೆ.ಜಿಯಷ್ಟು ಚಿನ್ನವನ್ನು ದೇಹದ ಮೇಲೆ ಹೊತ್ತು ಕಳ್ಳಸಾಗಣೆ ಮಾಡಿದ್ದರು. ಆನಂತರ ಅಂತಹ ಹಲವು ಪ್ರಕರಣಗಳನ್ನು ಪತ್ತೆ ಮಾಡಿ, ಚಿನ್ನವನ್ನು ವಶಕ್ಕೆ ಪಡೆಯಲಾಯಿತು’ ಎನ್ನುತ್ತಾರೆ ತನಿಖಾಧಿಕಾರಿಗಳು.

‘ವ್ಯವಸ್ಥಿತ ಜಾಲವೊಂದು ಇದನ್ನು ನಡೆಸುತ್ತಿದೆ ಎಂಬುದು ಗೊತ್ತಾಗಿತ್ತು. ಈ ಸಂಬಂಧ ಇಂಟರ್ಪೋಲ್ ಮೂಲಕ ಹಲವು ನೋಟಿಸ್ಗಳನ್ನೂ ಹೊರಡಿಸಲಾಗಿದೆ. ಖಚಿತ ಸುಳಿವಿನ ಆಧಾರದಲ್ಲಿ ರನ್ಯಾ ರಾವ್ ಅವರನ್ನು ತಪಾಸಣೆಗೆ ಒಳಪಡಿಸಿದಾಗ, ಅವರೂ ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದರು. ರನ್ಯಾ ಪ್ರಕರಣಕ್ಕೂ ಈ ಹಿಂದಿನ ಪ್ರಕರಣಗಳಿಗೂ ಸಾಮ್ಯತೆ ಇರುವುದು ಪತ್ತೆಯಾಗಿದೆ’ ಎಂಬುದು ಅವರ ಮಾಹಿತಿ.

‘ಹೀಗೆ ತಂದ ಚಿನ್ನವನ್ನು ಯಾರು ಮಾರಾಟ ಮಾಡುತ್ತಿದ್ದಾರೆ, ದುಬೈ–ಅಬುಧಾಬಿಯಲ್ಲಿ ಕೈಬದಲಿಸಲು ವ್ಯವಸ್ಥೆ ಮಾಡುತ್ತಿರುವವರು ಯಾರು, ಇಲ್ಲಿ ಅದನ್ನು ಖರೀದಿಸುತ್ತಿರುವವರು ಯಾರು ಎಂಬ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ. ಆದರೆ ಹೀಗೆ ಕಳ್ಳಸಾಗಣೆ ಆಗಿ ಬರುವ ಚಿನ್ನದ ಬಹುಪಾಲು, ಆಭರಣಗಳ ರೂಪದಲ್ಲಿ ರಫ್ತಾಗುತ್ತಿದೆ ಎಂಬುದು ಗೊತ್ತಾಗಿದೆ. ಹೀಗಾಗಿ ಚಿನ್ನಾಭರಣ ರಫ್ತಿನಲ್ಲಿ ತೊಡಗಿರುವ ಕೆಲ ಉದ್ಯಮಿಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ’ ಎನ್ನುತ್ತಾರೆ ತನಿಖಾಧಿಕಾರಿಗಳು.

ರನ್ಯಾ ರಾವ್ಗೆ ಸ್ವಾಮೀಜಿ ‘ಕೃಪೆ’

ಚಿನ್ನವನ್ನು ಕಳ್ಳ ಸಾಗಣೆ ಮೂಲಕ ಬೆಂಗಳೂರಿಗೆ ತರಲು ರನ್ಯಾ ರಾವ್ ಅವರಿಗೆ ಪ್ರಭಾವಿ ರಾಜಕಾರಣಿಗಳ ಜತೆಗೆ ಸ್ವಾಮೀಜಿಯೊಬ್ಬರ ‘ಕೃಪೆ’ಯೂ ಇತ್ತು ಎಂಬ ಸಂಗತಿಯನ್ನು ಡಿಆರ್ಐ ಹಾಗೂ ಸಿಬಿಐನ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಕರಾವಳಿ ಮೂಲದ ಸ್ವಾಮೀಜಿ ಅವರೇ ಪ್ರಮುಖ ಸಂಚುಕೋರ ಎಂಬ ವಿಚಾರವು ಗೊತ್ತಾದ ಬಳಿಕ ತನಿಖಾಧಿಕಾರಿಗಳು ಪ್ರಕರಣದ ಬೆನ್ನು ಹತ್ತಿದ್ದಾರೆ.

‘ಪ್ರಕರಣದಲ್ಲಿ ಸ್ವಾಮೀಜಿಯೊಬ್ಬರ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸ್ವಾಮೀಜಿಯವರ ಬೆಂಗಳೂರು ನಿವಾಸದಲ್ಲೂ ಶೋಧ ನಡೆಸಿ, ದಾಖಲೆ ಹಾಗೂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ‘ರೆಡ್ ಕಾರ್ನರ್’ ನೋಟಿಸ್ ಜಾರಿಗೂ ಸಿದ್ಧತೆ ನಡೆಸಲಾಗಿದೆ. ಅದಾದ ಮೇಲೆ ತನಿಖಾ ತಂಡವು ದುಬೈಗೆ ತೆರಳಿ, ಸ್ವಾಮೀಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ’ ಎಂದು ಮೂಲಗಳು ಖಚಿತ ಪಡಿಸಿವೆ.

‘ಎರಡು ವರ್ಷಗಳ ಹಿಂದೆ ದುಬೈಗೆ ತೆರಳಿದ್ದ ಸ್ವಾಮೀಜಿ, ಅಲ್ಲಿಯೇ ನೆಲಸಿದ್ದಾರೆ. ದುಬೈನಲ್ಲೇ ಕಚೇರಿ ಸಹ ತೆರೆದಿದ್ದಾರೆ. ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸ್ವಾಮೀಜಿಯೇ ರನ್ಯಾ ಅವರನ್ನು ಪರಿಚಯಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಚಿನ್ನ ಸಾಗಣೆಗೆ ಸಂಬಂಧಿಸಿದಂತೆ ಸ್ವಾಮೀಜಿ ದುಬೈನಲ್ಲೇ ಕುಳಿತು ರನ್ಯಾ ರಾವ್ ಹಾಗೂ ತರುಣ್ ರಾಜು ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರು. ಸ್ವಾಮೀಜಿ ಅವರೇ ಮಧ್ಯವರ್ತಿಗಳ ಮೂಲಕ ಚಿನ್ನದ ಬಿಸ್ಕತ್ಗಳನ್ನು ತಲುಪಿಸುತ್ತಿದ್ದರು ಎಂಬುದಕ್ಕೆ ದಾಖಲೆಗಳು ಸಿಕ್ಕಿವೆ. ಆ ಮಾಹಿತಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಕಳ್ಳಸಾಗಣೆಯ ಪರಿ...

1 ಆಫ್ರಿಕಾದ ಕೆನ್ಯಾ, ದಕ್ಷಿಣ ಅಮೆರಿಕದ ಬ್ರೆಜಿಲ್, ಕೊಲಂಬಿಯಾ ಮತ್ತು ಕೆರೀಬಿಯನ್
ದ್ವೀಪ ರಾಷ್ಟ್ರಗಳ ಗಣಿಗಳಿಂದ ತೆಗೆಯಲಾದ ಚಿನ್ನ ಕಳ್ಳಸಾಗಣೆ ಯಾಗುತ್ತದೆ. ನೈರೋಬಿ ವಿಮಾನ ನಿಲ್ದಾಣದಿಂದ ದುಬೈ ಮತ್ತು ಅಬುಧಾಬಿ ಮೂಲಕ ಬೇರೆ ದೇಶಗಳಿಗೆ ಹೋಗುವ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಸಾಗಿಸುತ್ತಾರೆ.

2 ದುಬೈ ಅಥವಾ ಅಬುಧಾಬಿ ತಲುಪಿದ ನಂತರ, ನಿಲ್ದಾಣದಿಂದಲೇ ಬೇರೆ ದೇಶಗಳಿಗೆ ಹೋಗುವ ವಿಮಾನಗಳನ್ನು ಹಿಡಿಯುವ (ಟ್ರಾನ್ಸಿಟ್) ಅವಧಿಯಲ್ಲಿ ಈ ಪ್ರಯಾಣಿಕರು ಸರ್ವಿಸ್ ಹೋಟೆಲ್ ಅಥವಾ ವಿಮಾನ ನಿಲ್ದಾಣದ ಮೊಗಸಾಲೆಯಲ್ಲಿ ಉಳಿಯುತ್ತಾರೆ. ಆ ಸಮಯದಲ್ಲೇ ವಿಮಾನ ನಿಲ್ದಾಣ ಅಥವಾ ವಿಮಾನಯಾನ ಸಂಸ್ಥೆ ಅಥವಾ ಭದ್ರತಾ ಸಿಬ್ಬಂದಿಗೆ ಕಳ್ಳಸಾಗಣೆಯ ಚಿನ್ನವನ್ನು ಹಸ್ತಾಂತರಿಸುತ್ತಾರೆ.

3 ಕಳ್ಳಸಾಗಣೆ ಮಾಡುವ ಉದ್ದೇಶದಿಂದಲೇ ದುಬೈ ಅಥವಾ ಅಬುಧಾಬಿಗೆ ಹೋಗುವ ಭಾರತೀಯ ಪ್ರಯಾಣಿಕರು, ವಿಮಾನ ನಿಲ್ದಾಣದಲ್ಲಿ ಇಳಿದು ಹೊರ ಹೋಗುತ್ತಾರೆ. ಕೆಲ ತಾಸು ಅಥವಾ ದಿನ ಹೊರಗೆ ಉಳಿದು ವಿಮಾನ ನಿಲ್ದಾಣಕ್ಕೆ ಮರಳುತ್ತಾರೆ. ಅಲ್ಲಿ ತಪಾಸಣೆ ಮುಗಿದ ಬಳಿಕ ಚಿನ್ನವನ್ನು ಪಡೆಯುತ್ತಾರೆ.

4 ಭಾರತಕ್ಕೆ ಬಂದಿಳಿದ ನಂತರ ರಾಜತಾಂತ್ರಿಕ, ಅತಿಗಣ್ಯರು ಮತ್ತು ಶಿಷ್ಟಾಚಾರ ನಿಯಮಗಳಡಿ ಸಿಗುವ ಸೌಲಭ್ಯ ಮತ್ತು ವಿನಾಯಿತಿ ಮೂಲಕ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಂಡು ಹೊರಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.