ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಗುರುತಿಸಿದ ಅನರ್ಹ ಪಡಿತರ ಚೀಟಿಗಳ ಪರಿಶೀಲನಾ ಕಾರ್ಯ ಮುಂದುವರಿದಿದೆ. ಈ ಸಂದರ್ಭದ ಲಾಭ ಪಡೆದ ಹಲವು ನ್ಯಾಯಬೆಲೆ ಅಂಗಡಿಗಳು ‘ಪಡಿತರ ಚೀಟಿಗಳು ರದ್ದಾಗುತ್ತವೆ’ ಎಂಬ ಭಯಹುಟ್ಟಿಸಿ ವಸೂಲಿ ಮಾಡುತ್ತಿವೆ ಎಂದು ಅರ್ಹ ಪಡಿತರದಾರರು ದೂರಿದ್ದಾರೆ.

ಕರ್ನಾಟಕದಲ್ಲಿ 7.76 ಲಕ್ಷ ಶಂಕಾಸ್ಪದ ಪಡಿತರ ಚೀಟಿಗಳಿವೆ ಎಂದು ಕೇಂದ್ರ ಸರ್ಕಾರ ಗುರುತಿಸಿತ್ತು. ರಾಜ್ಯದಲ್ಲಿ ಒಟ್ಟು 13.87 ಲಕ್ಷ ಅನರ್ಹ ಬಿಪಿಎಲ್ ಪಡಿತರ ಚೀಟಿಗಳು ಇರುವುದಾಗಿ ಕರ್ನಾಟಕ ಸರ್ಕಾರದ ‘ಕುಟುಂಬ ತಂತ್ರಾಂಶ’ ಪತ್ತೆ ಮಾಡಿತ್ತು. ತೀವ್ರ ಪರಿಶೀಲನೆಯ ನಂತರ 3.65 ಲಕ್ಷ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರ ಅಮಾನತು, ರದ್ದು ಹಾಗೂ ಎಪಿಎಲ್ಗೆ ಬದಲಾವಣೆ ಮಾಡಿತ್ತು. ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತವಾದ ನಂತರ 3.52 ಲಕ್ಷ ಪಡಿತರ ಚೀಟಿಗಳನ್ನು ಮರು ಸ್ಥಾಪಿಸಲಾಗಿತ್ತು. ಆದರೆ, ಪರಿಶೀಲನಾ ಕಾರ್ಯ ಮುಂದುವರಿಸಲಾಗಿದೆ.

ಪರಿಸ್ಥಿತಿಯ ಲಾಭ ಪಡೆದ ಕೆಲ ನ್ಯಾಯಬೆಲೆ ಅಂಗಡಿಗಳು ಹಾಗೂ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದು, ಬಿಪಿಎಲ್ ಚೀಟಿಗಳು ರದ್ದಾಗುವ, ಎಪಿಎಲ್ಗೆ ಪರಿವರ್ತಿತವಾಗುವ ಭಯದಿಂದ ಪಡಿತರದಾರರು ಆಹಾರ ಇಲಾಖೆ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಕಚೇರಿಗಳ ಮುಂದೆ ಪ್ರತಿ ದಿನವೂ ಬಿಪಿಎಲ್ ಪಡಿತ ಚೀಟಿ ಮರಳಿ ಪಡೆಯಲು ಸರದಿ ಸಾಲು ಬೆಳೆಯುತ್ತಲೇ ಇದೆ.

‘ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಒಂದು ದಿನ ವ್ಯಾಪಾರ ಆಗದಿದ್ದರೆ ಅಂದು ಹೊಟ್ಟೆ ತುಂಬಾ ಊಟವೂ ಇಲ್ಲ. ಮತ್ತೊಬ್ಬರಿಗೆ ಹಂಚಿಕೆಯಾದ ಆಶ್ರಯ ಮನೆಯಲ್ಲಿ ₹1,200 ಬಾಡಿಗೆ ನೀಡಿ ವಾಸ ಮಾಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುವ ಅಕ್ಕಿ ಆಸರೆಯಾಗಿದೆ. ನ್ಯಾಯಬೆಲೆ ಅಂಗಡಿಯವರು ವಾರದ ಹಿಂದೆ ಕರೆ ಮಾಡಿ, ನಿಮ್ಮ ಪಡಿತರ ಚೀಟಿ ಶಂಕಾಸ್ಪದ ಪಟ್ಟಿಯಲ್ಲಿದೆ. ನಾವು ಸರಿಪಡಿಸುತ್ತೇವೆ. ₹4,000 ತಂದು ಕೊಡಿ ಎಂದಿದ್ದಾರೆ. ಹಣವಿಲ್ಲದ ಕಾರಣ ಅಲ್ಲಿಗೆ ಹೋಗಲು ಆಗಿಲ್ಲ. ಯಾರನ್ನು ಕಾಣಬೇಕು ಎಂಬ ಮಾಹಿತಿಯೂ ಇಲ್ಲ’ ಎಂದು ಅಳಲು ತೋಡಿಕೊಂಡರು ಮೈಸೂರು ರಸ್ತೆಯ ಬ್ಯಾಟರಾಯನಪುರ ಕೊಳೆಗೇರಿಯ ನಿವಾಸಿ ಸೀತಾಳಮ್ಮ.

ಸರ್ಕಾರದ ಮಾನದಂಡಗಳ ಅನುಸಾರ ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು, ಕುಟುಂಬದಲ್ಲೊಬ್ಬರು ಆದಾಯ ತೆರಿಗೆ ಪಾವತಿದಾರರು, ಕಂಪನಿಗಳಲ್ಲಿ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಜಿಎಸ್ಟಿ ನಂಬರ್ ಹೊಂದಿದ್ದು ₹25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು, ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರು. ಅಲ್ಲದೇ ಕನಿಷ್ಠ 6 ತಿಂಗಳಿಂದ ಪಡಿತರ ಪಡೆಯದವರ ಚೀಟಿಗಳನ್ನೂ ನಿಯಮದಂತೆ ರದ್ದು ಮಾಡಲಾಗುತ್ತದೆ. ಆದರೆ, ಆಹಾರ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ಕಟ್ಟದೆ, ಕೇವಲ ರಿಟರ್ನ್ಫೈಲ್ ಮಾಡಿದವರ ಬಿಪಿಎಲ್ ಚೀಟಿಗಳನ್ನೂ ರದ್ದು ಮಾಡಿದ್ದಾರೆ.

‘ಮಗಳನ್ನು ಎಂಜಿನಿಯರಿಂಗ್ ಕೋರ್ಸ್ಗೆ ಸೇರಿಸಲು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಬ್ಯಾಂಕ್ ವ್ಯವಸ್ಥಾಪಕರು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಕೇಳಿದ್ದರು. ಅದಕ್ಕಾಗಿ ವ್ಯವಸ್ಥೆ ಮಾಡಿಕೊಂಡಿದ್ದೆವು. ಈಗ ನೋಡಿದರೆ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿರುವುದರಿಂದ ನಿಮ್ಮ ಬಿಪಿಎಲ್ ಪಡಿತರ ರದ್ದಾಗಿದೆ ಎಂದು ಹೇಳುತ್ತಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ವಾಸ್ತವ ಮನವರಿಕೆ ಮಾಡಿಕೊಟ್ಟರೂ ಎರಡು ತಿಂಗಳಿನಿಂದ ಪಡಿತರ ನೀಡಿಲ್ಲ’ ಎನ್ನುವುದು ಮೂಡಲಪಾಳ್ಯದ ಶೋಭಾ ಅವರ ದೂರು.

ಪ್ರತಿ ತಿಂಗಳು ₹535 ಕೋಟಿ ವೆಚ್ಚ

‘ಅನ್ನ ಭಾಗ್ಯ’ ಗ್ಯಾರಂಟಿ ಯೋಜನೆಯಡಿ ಪ್ರತಿ ತಿಂಗಳು 4.46 ಕೋಟಿ ಫಲಾನುಭವಿಗಳಿಗೆ 2.15 ಲಕ್ಷ ಟನ್ ಅಕ್ಕಿ ಹಂಚಿಕೆ ಮಾಡಲಾಗುತ್ತಿದೆ. ಅದಕ್ಕಾಗಿ ₹535 ಕೋಟಿ ವೆಚ್ಚ ಮಾಡಲಾಗುತ್ತಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿರುವ ಪಡಿತರ ಚೀಟಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 2.17 ಲಕ್ಷ ಟನ್ ಆಹಾರ ಧಾನ್ಯ ಹಂಚಿಕೆ ಆಗುತ್ತಿದೆ. ರಾಜ್ಯ ಸರ್ಕಾರದ ಬಿಪಿಎಲ್ ಪಡಿತರ ಚೀಟಿಗಳಿಗೆ ಭಾರತೀಯ ಆಹಾರ ನಿಗಮದಿಂದ (ಎಫ್ಸಿಐ) ಪ್ರತಿ ತಿಂಗಳು 20 ಸಾವಿರ ಟನ್ ಆಹಾರ ಧಾನ್ಯ ಖರೀದಿಸಿ ಹಂಚಲಾಗುತ್ತಿದೆ

ಪಡಿತರ ಚೀಟಿ ವಿಚಾರದಲ್ಲಿ ಯಾರಾದರೂ ಲಾಭ ನಿರೀಕ್ಷೆ ಮಾಡಿದರೆ ಆಯಾ ತಹಶೀಲ್ದಾರ್ಗಳಿಗೆ ದೂರು ಸಲ್ಲಿಸಬೇಕು. ಅಂತಹ ಅಂಗಡಿಗಳ ಪರವಾನಗಿ ರದ್ದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು
ಕೆ.ಎಚ್.ಮುನಿಯಪ್ಪ, ಆಹಾರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.