‘ಅಧಿಕಾರಿಗಳು ಸೂರ್ಯನಿಗೆ ಟಾರ್ಚ್ ಬಿಡ್ತಾರೆ’
‘ಕೆಲವು ಅಧಿಕಾರಿಗಳು ಭೂಮಿ ಮೇಲೆ ಇದ್ದಾರೊ, ಎಲ್ಲಿದ್ದಾರೊ ಗೊತ್ತಾಗುವುದಿಲ್ಲ. ಸೂರ್ಯನಿಗೆ ಟಾರ್ಚ್ ಬಿಡ್ತಾರೆ. ಕಪ್ಪನ್ನು ಬಿಳಿ, ಬಿಳಿಯನ್ನು ಕಪ್ಪು ಎಂದು ಮಾಡುತ್ತಾರೆ. ಹೀಗಾಗಿ, ಕಂದಾಯ ಇಲಾಖೆಯಲ್ಲಿ ಅರೆನ್ಯಾಯಿಕ ಅಧಿಕಾರ ಇರುವವರು ನೀಡುವ ಆದೇಶಗಳಲ್ಲಿ ಸದುದ್ದೇಶ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪ್ರಯತ್ನ ಆರಂಭವಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪ ವಿಭಾಗಾಧಿಕಾರಿ (ಎ.ಸಿ) ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.