ವನ್ಯಜೀವಿ ಮಂಡಳಿ: ನಾಳೆ ಚರ್ಚೆ ಸಂಭವ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆ ಇದೇ 3ರಂದು ಗುಜರಾತ್‌ನ ಜುನಾಘಡ್ ಜಿಲ್ಲೆಯ ಸಾಸನ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವನ್ಯಜೀವಿ ಅನುಮೋದನೆಯ ಪ್ರಸ್ತಾವ ಚರ್ಚೆಗೆ ಬರುವ ಸಂಭವ ಇದೆ. ಈ ಯೋಜನೆಗೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಕಳೆದ ತಿಂಗಳು ಒಪ್ಪಿಗೆ ನೀಡಿತ್ತು.