ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ: ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣ

Published 10 ಮೇ 2024, 16:13 IST
Last Updated 10 ಮೇ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದ ರಾಜ್ಯದ 52 ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಒಂದರಿಂದ ಒಂಬತ್ತರ ಒಳಗೆ ಇದೆ. 

62 ಖಾಸಗಿ, 13 ಅನುದಾನಿತ ಹಾಗೂ ಮೂರು ಸರ್ಕಾರಿ ಶಾಲೆಗಳು ಸೇರಿದಂತೆ 78 ಶಾಲೆಗಳು ಈ ಬಾರಿ ಶೂನ್ಯ ಫಲಿತಾಂಶ ದಾಖಲಿಸಿವೆ. ಹೆಚ್ಚಿನ ಶಾಲೆಗಳು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸೇರಿವೆ. 34ನೇ ಸ್ಥಾನ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲೇ 18 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಯಾದಗಿರಿ ಒಂಬತ್ತು, ಬೆಳಗಾವಿ ಆರು ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ ಐದು ಶಾಲೆಗಳಿವೆ. 

ಬೆಂಗಳೂರು ಉತ್ತರದಲ್ಲಿ ಎರಡು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, ಕ್ರಮವಾಗಿ ಎರಡು ಮತ್ತು ಏಳು ವಿದ್ಯಾರ್ಥಿಗಳು ಇದ್ದಾರೆ. ಬೆಂಗಳೂರು ದಕ್ಷಿಣದ ಮತ್ತೊಂದು ಶಾಲೆಯಲ್ಲೂ ಏಳು ಮಕ್ಕಳು ಪ್ರವೇಶ ಪಡೆದಿದ್ದರು. ಈ ಎಲ್ಲವೂ ಖಾಸಗಿ ಶಾಲೆಗಳು.

ನಿಯಮದ ಪ್ರಕಾರ ಯಾವುದೇ ಅನುದಾನಿತ ಶಾಲೆ ಮಾನ್ಯತೆ ಪಡೆಯಲು ಕನಿಷ್ಠ 25 ಮಕ್ಕಳು ಇರಬೇಕು. ಶೂನ್ಯ ಫಲಿತಾಂಶ ಪಡೆದ ಮಕ್ಕಳ ಸಂಖ್ಯೆ ಗಮನಿಸಿದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯ ನವೀಕರಣದ ಮಾನದಂಡಗಳನ್ನು ಪಾಲಿಸಿಲ್ಲ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯ ನಿರ್ಬಂಧವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT