ಬೆಂಗಳೂರು: ಎಲ್ಲ ವರ್ಗದ ಜನರಿಗೆ ಶಿಕ್ಷಣ ಖಾತ್ರಿಯಾದಾಗ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಮೆಂಡಾ ಫೌಂಡೇಷನ್, ಸೆಲ್ಕೊ ಸೋಲಾರ್ ಶನಿವಾರ ಹಮ್ಮಿಕೊಂಡಿದ್ದ ‘ಶಿಕ್ಷಣ ಮತ್ತು ಸುಸ್ಥಿರತೆ’ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮೆಂಡಾ ಫೌಂಡೇಷನ್ ಹಾಗೂ ಸೆಲ್ಕೊ ಸೋಲಾರ ಸಂಸ್ಥೆಗಳ ಕಾರ್ಯ ಮಾದರಿಯಾಗಿದೆ. ಅದೇ ರೀತಿ ಸ್ವಯಂ ಸೇವಾ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.

ಕೇಂದ್ರ, ರಾಜ್ಯ ಸರ್ಕಾರಗಳು, ಮಠಗಳು, ಮಿಷನರಿಗಳು ಶಿಕ್ಷಣಕ್ಕೆ ಸಾಕಷ್ಟು ಆದ್ಯತೆ ನೀಡಿದರೂ ದೇಶದಲ್ಲಿ ಸಂಪೂರ್ಣ ಸಾಕ್ಷರತೆ ಸಾಧ್ಯವಾಗಿಲ್ಲ. ಈ ಕುರಿತು ಸಾಕಷ್ಟು ಅಧ್ಯಯನ, ಚರ್ಚೆಯ ಅಗತ್ಯವಿದೆ. ನಗರ ಪ್ರದೇಶಗಳ ಶಾಲೆಗಳಿಗೆ ಇರುವ ಸೌಕರ್ಯ ಗ್ರಾಮೀಣ ಶಾಲೆಗಳಲ್ಲೂ ಸಿಗಬೇಕು. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಶಾಸಕರು, ಸಂಸದರು ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.

ಸೆಲ್ಕೊ ಸಿಇಒ ಮೋಹನ ಭಾಸ್ಕರ ಹೆಗಡೆ, ಉಪ ಪ್ರಧಾನ ವ್ಯವಸ್ಥಾಪಕರಾದ ಗುರುಪ್ರಸಾದ್ ಶೆಟ್ಟಿ, ಸುದೀಪ್ತ ಘೋಷ್, ಶೇಖರ ಶೆಟ್ಟಿ, ಸಂಹಿತಾ ಭಟ್ಟಾಚಾರ್ಯ, ಪ್ರದ್ಯುಮ್ನ ಉಪಾಧ್ಯಾಯ, ಮುಖ್ಯ ವ್ಯವಸ್ಥಾಪಕ ಪಾರ್ಥಸಾರಥಿ, ಶಿಕ್ಷಣ ತಜ್ಞರಾದ ವಸಂತ ಕುಮಾರ್ ಶೆಟ್ಟಿ, ನಾಗರತ್ನಾ, ಗಣಪತಿ ಹೆಗಡೆ, ಸಹನಾ ಹೆಗಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.