ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೀಟಿಗರ ಮನಗೆದ್ದ ಚಿತ್ರ: ಆಟೊ ದೂಡಿದ ಪೊಲೀಸಪ್ಪ

Last Updated 5 ಡಿಸೆಂಬರ್ 2019, 12:29 IST
ಅಕ್ಷರ ಗಾತ್ರ

ಬೆಂಗಳೂರು:ಬೆಂಗಳೂರು ಸಿಟಿ ಪೊಲೀಸರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಲಾಗಿರುವ ಭಾವಚಿತ್ರವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಆಟೊರಿಕ್ಷಾದ ಹ್ಯಾಂಡ್ಲ್ ಹಿಡಿದ ಪೊಲೀಸಪ್ಪ, ಹಿಂದಿನಿಂದ ಅದನ್ನು ದೂಡುತ್ತಿರುವ ಚಾಲಕ ಚಿತ್ರದಲ್ಲಿದ್ದಾರೆ. ಫೋಟೊ ಗಮನಿಸಿದಾಗ, ರಸ್ತೆಬದಿ ಕೆಟ್ಟು ನಿಂತ ಆಟೊರಿಕ್ಷಾವನ್ನು ಸೂಕ್ತ ಸ್ಥಳಕ್ಕೆ ಕೊಂಡೊಯ್ಯಲು ಪೊಲೀಸ್ ಕಾನ್‌ಸ್ಟೆಬಲ್ ಸಹಾಯಹಸ್ತ ಚಾಚಿದಂತೆ ಭಾಸವಾಗುತ್ತೆ.

ಬೆಂಗಳೂರು ಸಿಟಿ ಪೊಲೀಸರು ಮಾಡಿರುವ ಟ್ವೀಟ್‌ನಲ್ಲಿ ಘಟನೆಯ ಬಗ್ಗೆ ಯಾವ ವಿವರವೂ ಇಲ್ಲ.ಆ ಟ್ವೀಟ್‌ನಲ್ಲಿರುವ ಮೂರು ಶಬ್ದಗಳೆಂದರೆ...

Photo.. (ಚಿತ್ರ)
Story.... (ಕತೆ)
Happy ending... (ಸುಖಾಂತ್ಯ)

ಬೆಂಗಳೂರು ಸಿಟಿ ಪೊಲೀಸರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಅವರು, ‘ಜೀವರಹಿತ ದೇಹವನ್ನು ಸಾಗಿಸುವುದರಿಂದ ಹಿಡಿದು ಆಟೊವನ್ನು ದೂಡುವುದರವರೆಗೂ... ಪೊಲೀಸರು ಯಾವಾಗಲೂ ಸಿದ್ದರಿರುತ್ತಾರೆ... ಧನ್ಯವಾದಗಳು...’ ಎಂದು ಹೇಳಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಬೆಂಗಳೂರು ಪೊಲೀಸರ ಸೇವಾ ಮನೋಭಾವವನ್ನುಹೊಗಳಿದ್ದಾರೆ.
ವಿನೀಲ್‌ ಕುಮಾರ್ ಸರೋದೆ ಎಂಬುವವರು, ‘ಆಟೋ ಡ್ರೈವರ್‌ ಮತ್ತು ಪೊಲೀಸ್‌ ನಡೆಯುತ್ತಾ ಮಾತುಕತೆ ನಡೆಸುತ್ತಿರುವುದನ್ನು ಇಷ್ಟಪಡುತ್ತಿದ್ದೇನೆ. ಪ್ರತಿಯೊಬ್ಬರೂ ಬೆಳೆಯಲು ಮತ್ತೊಬ್ಬರ ಸಹಾಯಕ್ಕೆ ಕೈಚಾಚಬೇಕು’ ಎಂದಿದ್ದಾರೆ.

ವೈಟ್‌ಫಿಲ್ಡ್‌ನಲ್ಲಿ ನೆಲಸಿರುವ ಪೌಲ್ ಎಂಬುವವರು, ‘ತಪ್ಪು ಮಾಡಿದ ಆಟೊ ಡ್ರೈವರ್‌ಗಳಿಗೆ ಬೆಂಗಳೂರು ಪೊಲೀಸರು ಹೆಚ್ಚು ದಂಡ ವಿಧಿಸುತ್ತಿದ್ದರೆಂಬ ಸುದ್ದಿಗಳನ್ನು ಓದುತ್ತಿದ್ದೆ. ಆದರೆ, ಈ ಬಾರಿ ಪೊಲೀಸರು ಸಹಾಯಕ್ಕೆ ಮುಂದಾಗಿದ್ದಾರೆ. ದಯಮಾಡಿ ವೈಟ್‌ಫಿಲ್ಡ್‌ನಲ್ಲಿ ಇದೇ ರೀತಿಯ ಕೆಲಸ ಮಾಡಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT