ಹುಬ್ಬಳ್ಳಿ:'ಕನ್ನಡಪರ ವಿವಿಧ ಸಂಘಟನೆಗಳು ಡಿ. 31ರಂದು ರಾಜ್ಯ ಬಂದ್ ಕರೆ ನೀಡಿದ್ದು ಸರಿಯಲ್ಲ. ಬಂದ್ ನಿಂದ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ನಾವೇ ನಷ್ಟ ಹೊಂದುತ್ತೇವೆ. ಕೋವಿಡ್'ನಿಂದ ಸಂಕಷ್ಟದಲ್ಲಿದ್ದ ಕೂಲಿ ಕಾರ್ಮಿಕರು, ಬಡ ವರ್ಗದವರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಬಂದ್ ಬೇಡ' ಎಂದು ಎಂದುಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಎಂಇಎಸ್ ನಿಷೇಧಿಸುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, 'ಎಂಇಎಸ್ ಒಂದು ರಾಜಕೀಯ ಪಕ್ಷ. ಸಾಧಕ ಬಾಧಕ ನೋಡಿ ನಿಷೇಧ ಮಾಡುವ ಕುರಿತುಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದರು.

ಸಮಾಜ ವಿದ್ರೋಹಿಗಳಿಂದ ಗೊಂದಲ ಸೃಷ್ಟಿ

'ಕೆಲವು ಸಮಾಜ ವಿದ್ರೋಹಿಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡಿಗರು, ಮರಾಠರ ಹೆಸರಲ್ಲಿ ಗೊಂದಲ ಸೃಷ್ಟಿಸಿ ಗಲಭೆಗೆ ಕಾರಣರಾಗುತ್ತಿದ್ದಾರೆ. ಇದನ್ನು ಎರಡೂ ರಾಜ್ಯದ ಮುಖಂಡರು ಅರ್ಥ ಮಾಡಿಕೊಳ್ಳಬೇಕು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

'ಮರಾಠಿಗರು ಕರ್ನಾಟಕದಲ್ಲಿ, ಕನ್ನಡಿಗರು ಮಹಾರಾಷ್ಟ್ರದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಎಂಇಎಸ್ ಹಾಗೂ ಇತರ ಸಂಘಟನೆ ಹೆಸರಲ್ಲಿ ಬಾಂಧವ್ಯ ಕದಡುವ ಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಒಂದೇ ದೇಶದವರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಬೇಕು' ಎಂದು ಹೇಳಿದರು.

'ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹಾಗೂ ಶರದ್ ಪವಾರ್ ಜನರ ದಾರಿ ತಪ್ಪಿಸುವ ಹೇಳಿಕೆ ನೀಡಬಾರದು. ಅಧಿಕಾರದಲ್ಲಿರುವವರು ಎಲ್ಲವನ್ನೂ ನಿಭಾಯಿಸಿ ಹತೋಟಿಗೆ ತರಬೇಕು. ಇಂತಹ ವಿಷಯಗಳ ಕುರಿತು ಎರಡೂ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.