ವಿಜಯಪುರ: ಕೃಷ್ಣಾ ನ್ಯಾಯಾಧೀಕರಣ ಎರಡನೇ ತೀರ್ಪು ಪ್ರಕಟವಾಗಿ 11 ವರ್ಷವಾಗಿದೆ. ಆಂಧ್ರಪ್ರದೇಶದ ತಕರಾರಿನಿಂದಾಗಿ ಕೇಂದ್ರ ಸರ್ಕಾರ ಇನ್ನೂ ತೀರ್ಪಿನ ಅನುಷ್ಠಾನದ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಕರ್ನಾಟಕದಲ್ಲಿ ಈ ಬೃಹತ್ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ಕೊಡುವುದೇ ಸರ್ಕಾರದ ಮುಂದೆ ದೊಡ್ಡ ಸವಾಲು. ಈ ಎರಡೂ ಪ್ರಕ್ರಿಯೆಗಳುಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ದೊಡ್ಡ ತೊಡಕಾಗಿವೆ.

ಯುಕೆಪಿ ಹಂತ ಮೂರರ ಅಡಿ ರಾಜ್ಯಕ್ಕೆ ಹಂಚಿಕೆಯಾದ 170 ಟಿಎಂಸಿ ಅಡಿ ನೀರಿನಲ್ಲಿ ಕೃಷ್ಣೆಯ ಪಾಲು ಸುಮಾರು 130 ಟಿಎಂಸಿ ಅಡಿ. ಆ ನೀರನ್ನು ಸಂಗ್ರಹಿಸಲು ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್ ಎತ್ತರದಿಂದ 524.256 ಮೀಟರ್ಗೆ ಎತ್ತರಿಸಬೇಕು. ಹೀಗೆ ಎತ್ತರಿಸಿದಾಗ ಸಂಗ್ರಹವಾಗುವ ಹೆಚ್ಚುವರಿ ನೀರು ಸುಮಾರು 100 ಟಿಎಂಸಿ ಅಡಿ. ಇನ್ನೂ 30 ಟಿಎಂಸಿ ಅಡಿ ನೀರನ್ನು ನದಿ ಹರಿವಿದ್ದಾಗ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಯುಕೆಪಿ ಹಂತ 3ರ ಅನುಷ್ಠಾನಕ್ಕೆ ಆಲಮಟ್ಟಿ ಜಲಾಶಯ ಎತ್ತರಿಸುವುದೊಂದೇ ಪರಿಹಾರ. ಜಲಾಶಯವನ್ನು ಎತ್ತರಿಸುವುದರಿಂದ ಉಂಟಾಗುವ ಮುಳುಗಡೆ ಸರ್ಕಾರಕ್ಕೆ ಬಹು ದೊಡ್ಡ ಆರ್ಥಿಕ ಹೊಡೆತ ನೀಡಲಿದೆ. ಇದರಿಂದಾಗಿ ಜಲಾಶಯ ಎತ್ತರಿಸುವ ಯಾವುದೇ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದಿಲ್ಲ.

ಗ್ರಾಮಗಳ ಸ್ಥಳಾಂತರ, ಜಮೀನು ಮುಳುಗಡೆ, ಭೂಸ್ವಾಧೀನ, ಪುನರ್ವಸತಿ ಕೇಂದ್ರಗಳ ರಚನೆ, ನೀರಾವರಿ ಯೋಜನೆಯ ಕಾಲುವೆಗಳ ಜಾಲ ನಿರ್ಮಾಣ ಸೇರಿ ನಾನಾ ಕೆಲಸಕ್ಕೆ ಬೇಕಾಗುವ ಜಮೀನು ಬರೋಬ್ಬರಿ 1,33,867 ಎಕರೆ! ಇಷ್ಟು ಭಾರಿ ಪ್ರಮಾಣದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದೇ ಸದ್ಯದ ಸರ್ಕಾರದ ಮುಂದಿರುವ ದೊಡ್ಡ ಸವಾಲು.

ಹೊಸ ಭೂಸ್ವಾಧೀನ ಕಾಯ್ದೆಯ ಪ್ರಕಾರ ಗ್ರಾಮೀಣ ಭಾಗದಲ್ಲಿನ ಭೂಮಿಯ ಮೌಲ್ಯದ (ಸಬ್ ರಿಜಿಸ್ಟ್ರಾರ್ ನೋಂದಣಿ) ನಾಲ್ಕು ಪಟ್ಟು ಪರಿಹಾರ ಕೊಡಬೇಕಿದೆ. ಸದ್ಯದ ಸ್ಥಿತಿಯಲ್ಲಿ ಯುಕೆಪಿ ಹಂತ-1 ಮತ್ತು 2ಕ್ಕೆ ನೀಡಿದ ಹಾಗೆ ಏಕರೂಪದ ಪರಿಹಾರ ಕೊಡುವುದು ಸಾಧ್ಯವಿಲ್ಲ. ರೈತರ ಬೇಡಿಕೆಗಳು ಹೆಚ್ಚಾಗಿವೆ. ಭೂಮಿಯ ಮೌಲ್ಯ ಹೆಚ್ಚಾಗಿರುವುದರಿಂದ ಪರಿಹಾರದ ಮೌಲ್ಯವೂ ಹೆಚ್ಚಾಗಿದೆ. ಇದರಿಂದಾಗಿ ಇಡೀ ಯೋಜನೆಯ ವೆಚ್ಚವೇ ನಿಗದಿಗಿಂತ ಐದು ಪಟ್ಟು ಹೆಚ್ಚಾಗಿದೆ.

2012ರಲ್ಲಿ ₹17,207 ಕೋಟಿ ಇದ್ದ ಯೋಜನಾ ಮೊತ್ತ, 2017ರಲ್ಲಿ₹51,148 ಕೋಟಿಗೆ ಏರಿದೆ. ಇನ್ನೂ ಈ ಬೆಲೆ 2022ಕ್ಕೆ ಸುಮಾರು ₹75 ಸಾವಿರ ಕೋಟಿಗೆ ಏರಬಹುದು ಎಂದು ಅಂದಾಜಿಸಲಾಗಿದೆ.

ಗೆಜೆಟ್ ನೋಟಿಫಿಕೇಶನ್: ಕೃಷ್ಣಾ ನ್ಯಾಯಾಧೀಕರಣ ಪ್ರಾಧಿಕಾರ 2ರ ತೀರ್ಪು2010ರ ಡಿ.30ರಂದು ಪ್ರಕಟಗೊಂಡ ನಂತರ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿಲ್ಲ. ಆಂಧ್ರಪ್ರದೇಶವು ತೆಲಂಗಾಣ ಆಗಿ ವಿಭಜನೆಯಾಯಿತು. ಆಂಧ್ರಕ್ಕೆ ನಿಗದಿಪಡಿಸಿದ 190 ಟಿಎಂಸಿ ಅಡಿ ನೀರಿನಲ್ಲಿ ಆಂಧ್ರ, ತೆಲಂಗಾಣ ಹಂಚಿಕೆ ಮಾಡಿಕೊಳ್ಳಬೇಕಿತ್ತು. ಗೆಜೆಟ್ ಅಧಿಸೂಚನೆ ಆದರೆ, ಆಂಧ್ರಪ್ರದೇಶಕ್ಕೆ ಇಷ್ಟು ದಿನಗಳ ಕಾಲ ಕೃಷ್ಣಾ ಜಲಾನಯನದಲ್ಲಿ ದೊರೆಯುತ್ತಿದ್ದ ಹೆಚ್ಚುವರಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಈ ಹೆಚ್ಚುವರಿ ನೀರು ಕರ್ನಾಟಕ ಹಾಗೂ ಮಹಾರಾಷ್ಟ್ರ ಬಳಕೆ ಮಾಡುವುದರಿಂದ ತಕರಾರು ತೆಗೆದಿರುವ ಆಂಧ್ರವು ಸುಪ್ರಿಂಕೋರ್ಟ್ ಮೆಟ್ಟಿಲೇರಿ ಅಧಿಸೂಚನೆ ಹೊರಡಿಸದಂತೆ ಅಡ್ಡಗಾಲು ಹಾಕಿದೆ.

ವಿಚಾರಣೆ ಅಂತಿಮ ಹಂತದಲ್ಲಿದ್ದಾಗ ಈಚೆಗೆ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳು ಹಿಂದಕ್ಕೆ ಸರಿದಿದ್ದರಿಂದ ಹೊಸ ನ್ಯಾಯಮೂರ್ತಿಗಳ ಬೆಂಚ್ ನಿಗದಿಯಾಗಬೇಕಿದೆ. ಮತ್ತೊಮ್ಮೆ ವಿಚಾರಣೆ ನಡೆದು ತೀರ್ಪು ಹೊರಬಂದ ನಂತರವಷ್ಟೇ ಗೆಜೆಟ್ ನೋಟಿಫಿಕಶೇನ್. ಇದು ಇನ್ನೂ ಮೂರ್ನಾಲ್ಕು ವರ್ಷ ಮುಂದುವರೆಯಲಿದೆ. ಸದ್ಯ ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಸುಪ್ರಿಂಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡುತ್ತಿವೆ. ಅಷ್ಟರೊಳಗೆ ಭೂಸ್ವಾಧೀನ, ಗ್ರಾಮಗಳ ಸ್ಥಳಾಂತರ ಸೇರಿ ನಾನಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ.

ಯುಕೆಪಿ ಅಡಿಯ 9 ಯೋಜನೆಗಳು

ಲಭ್ಯವಾಗಿರುವ 130 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಯುಕೆಪಿಯಡಿ 9 ಯೋಜನೆಗಳನ್ನು ರೂಪಿಸಲಾಗಿದೆ.

ಮುಳವಾಡ ಏತ ನೀರಾವರಿ ಯೋಜನೆ ಹಂತ 3 (2,27,966 ಹೆಕ್ಟೇರ್ ನೀರಾವರಿ), ಚಿಮ್ಮಲಗಿ ಏತ ನೀರಾವರಿ (87,067), ಇಂಡಿ ಏತ ನೀರಾವರಿ ಯೋಜನೆ ವಿಸ್ತರಣೆ (20,6690 ಹೆಕ್ಟೇರ್), ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ (61,741 ಹೆಕ್ಟೇರ್), ರಾಂಪೂರ ಏತ ನೀರಾವರಿ ಯೋಜನೆ ವಿಸ್ತರಣೆ (13923 ಹೆಕ್ಟೇರ್), ಮಲ್ಲಾಬಾದ ಏತ ನೀರಾವರಿ ಯೋಜನೆ (33730 ಹೆಕ್ಟೇರ್), ಕೊಪ್ಪಳ ಏತ ನೀರಾವರಿ ಯೋಜನೆ (48,436 ಹೆಕ್ಟೇರ್), ಹೆರಕಲ್ ಏತ ನೀರಾವರಿ ಯೋಜನೆ (15,344 ಹೆಕ್ಟೇರ್), ಭೀಮಾ ಫ್ಲಾಂಕ್ (21,572 ಹೆಕ್ಟೇರ್) ಪ್ರದೇಶ ಸೇರಿ ಒಟ್ಟಾರೇ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳು ಸೇರಿದಂತೆ ಒಟ್ಟು 5,30,475 ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಚಿಮ್ಮಲಗಿ ಹಾಗೂ ಮುಳವಾಡ ಹಂತ-3 ರ ಯೋಜನೆಗಳ ಮುಖ್ಯ ಕಾಲುವೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹೊಸ ಕಾಲುವೆಗಳ ಮೂಲಕ ಜಿಲ್ಲೆಯ ಸುಮಾರು 120ಕ್ಕೂ ಹೆಚ್ಚು ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.

ನ್ಯಾಯಾಧೀಕರಣ ಹಂಚಿಕೆ ಮಾಡಿದ ನೀರನ್ನು ಬಳಸಿಕೊಳ್ಳುವಂತಾಗಬೇಕಾದರೆಪ್ರಧಾನಿ ಮಧ್ಯಪ್ರವೇಶಿಸಿ ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಲು ನೆರವಾಗಬೇಕು, ಕೋರ್ಟ್, ಗೆಜೆಟ್ ಎಂದು ಸುತ್ತುತ್ತಾ ತಿರುಗಿದರೆ ನಮ್ಮ ತಲೆಮಾರಿನಲ್ಲಂತೂ ಯೋಜನೆ ಪೂರ್ಣಗೊಳ್ಳಲ್ಲ

– ಬಸವರಾಜ ಕುಂಬಾರ, ಅಧ್ಯಕ್ಷ, ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ, ನಿಡಗುಂದಿ

ಆಲಮಟ್ಟಿಜಲಾಶಯವನ್ನು519 ರಿಂದ 524 ಮೀಟರ್ಗೆ ಎತ್ತರಿಸಿದಾಗ 22 ಹಳ್ಳಿಗಳು ಬಾದಿತವಾಗುತ್ತವೆ. ಈ ಹಳ್ಳಿಗಳಿಗೆ ಹೊಸ ಭೂಸ್ವಾಧೀನ ಕಾಯ್ದೆಯನುಸಾರ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾರ್ಯತ್ವರಿತವಾಗಿ ಕೈಗೆತ್ತಿಕೊಳ್ಳಬೇಕು,ಎಲ್ಲ ಸೌಲಭ್ಯಗಳನ್ನು ನೀಡಬೇಕು

– ಜಿ.ಸಿ. ಮುತ್ತಲದಿನ್ನಿ, ಸಂತ್ರಸ್ತ ಮತ್ತು ಸಂಚಾಲಕ,ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆ, ಬೇನಾಳ ಆರ್ಎಸ್, ವಿಜಯಪುರ

ತೆವಳುತ್ತ ಸಾಗುತ್ತಿದೆ ‘ಭದ್ರಾ ಮೇಲ್ದಂಡೆ’

ಚಿತ್ರದುರ್ಗ: ಮಧ್ಯ ಕರ್ನಾಟಕದ ಬಯಲುಸೀಮೆ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರೂಪುಗೊಂಡ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತೆವಳುತ್ತ ಸಾಗುತ್ತಿದೆ. ಒಂದೂವರೆ ದಶಕದಲ್ಲಿ ಅರ್ಧದಷ್ಟು ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ.

ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಯ ಆಯ್ದ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 29.9 ಟಿಎಂಸಿ ಅಡಿ ನೀರನ್ನು ಮೀಸಲಿಡಲಾಗಿದೆ. ತುಂಗಾ ನದಿಯ 17.4 ಟಿಎಂಸಿ ಅಡಿ ನೀರು ಹಾಗೂ ಭದ್ರಾ ಜಲಾಶಯದ 12.5 ಟಿಎಂಸಿ ಅಡಿ ನೀರನ್ನು ಇದಕ್ಕೆ ಹಂಚಿಕೆ ಮಾಡಲಾಗಿದೆ. ಜಲಾಶಯ ನಿರ್ಮಿಸದೇ ಇಷ್ಟೊಂದು ಪ್ರಮಾಣದ ನೀರನ್ನು ಬಳಕೆ ಮಾಡಲು ರೂಪಿಸಿದ ಬಹುದೊಡ್ಡ ಯೋಜನೆ ಇದಾಗಿದೆ.

ನಾಲ್ಕು ಜಿಲ್ಲೆಗಳ 5.57 ಲಕ್ಷ ಎಕರೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. 367 ಕೆರೆಗಳಿಗೆ ಶೇ 50ರಷ್ಟು ನೀರು ತುಂಬಿಸಲಾಗುತ್ತದೆ. ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ನಾಲೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಭದ್ರಾ ಜಲಾಶಯದಿಂದ ಅಜ್ಜಂಪುರದವರೆಗಿನ 40 ಕಿ.ಮೀ. ಉದ್ದದ ನಾಲೆ ನಿರ್ಮಾಣ ಪೂರ್ಣಗೊಂಡಿದೆ. ಚಿತ್ರದುರ್ಗ ಮತ್ತು ತುಮಕೂರು ಶಾಖಾ ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. 2003ರಲ್ಲಿ ಈ ಯೋಜನೆಗೆ ₹ 2 ಸಾವಿರ ಕೋಟಿ ಮೀಸಲಿಡಲಾಗಿತ್ತು. 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿತು. 2015ರಲ್ಲಿ ಯೋಜನೆ ಪರಿಷ್ಕರಣೆ ಮಾಡಲಾಗಿದ್ದು, ₹12,340 ಕೋಟಿ ಅಂದಾಜು ವೆಚ್ಚ ತಯಾರಿಸಲಾಯಿತು. 2021ರಲ್ಲಿ ಯೋಜನಾ ವೆಚ್ಚವನ್ನು ₹ 21 ಸಾವಿರ ಕೋಟಿಗೆ ಏರಿಕೆ ಮಾಡಲಾಗಿದೆ. ಈವರೆಗೆ ₹ 4,866 ಕೋಟಿ ವೆಚ್ಚವಾಗಿದೆ.

2 ದಶಕ ಕಳೆದರೂ ತಲುಪದ ನೀರು

ಶಿವಮೊಗ್ಗ: ಮಧ್ಯ ಕರ್ನಾಟಕದ ಬರಪೀಡಿತ ತಾಲ್ಲೂಕುಗಳಿಗೆ ನೀರು ಹರಿಸಲು ರೂಪಿಸಿದ ತುಂಗಾ ಮೇಲ್ದಂಡೆ ಯೋಜನೆ ಎರಡು ದಶಕಗಳು ಕಳೆದರೂ ನಿಗದಿತ ಅಚ್ಚುಕಟ್ಟು ಪ್ರದೇಶ ತಲುಪಲು ಸಾಧ್ಯವಾಗಿಲ್ಲ.

ಶಿವಮೊಗ್ಗ, ಹೊನ್ನಾಳಿ, ಹಿರೇಕೆರೂರು,ರಟ್ಟೀಹಳ್ಳಿ, ಹಾವೇರಿ, ರಾಣೆಬೆನ್ನೂರು ತಾಲ್ಲೂಕುಗಳಿಗೆ ತುಂಗಾ ನೀರು ಹರಿಸಲು 2000–2001ರಲ್ಲಿ ಮೇಲ್ದಂಡೆ ಯೋಜನೆ ರೂಪಿಸಲಾಗಿತ್ತು. ತುಂಗಾ ನದಿಗೆ ಹಿಂದೆ ಇದ್ದ ಚೆಕ್ ಡ್ಯಾಂ ಸ್ಥಳದಲ್ಲೇ ಅಣೆಕಟ್ಟೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅಣೆಕಟ್ಟೆ ನಿರ್ಮಾಣ ನಿಗದಿಯಂತೆ 2005–06ನೇ ಸಾಲಿನಲ್ಲಿ ಪೂರ್ಣಗೊಂಡಿತ್ತು. ಆದರೆ, ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲು ಅಗತ್ಯವಿದ್ದ ಕಾಲುವೆಗಳ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿತ್ತು. ಮೊದಲ ಹಂತದಲ್ಲಿ 102 ಕಿ.ಮೀ, ಎರಡನೇ ಹಂತದಲ್ಲಿ 210 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಮಾಡಲು ಹಲವು ವರ್ಷಗಳು ಬೇಕಾಯಿತು. ಮೊದಲ ಬಾರಿ 2011ರಲ್ಲಿ ಕಾಲುವೆಗಳಿಗೆ ನೀರು ಹರಿಸಲಾಯಿತಾದರೂ ಕೊನೆಯ ಭಾಗಕ್ಕೆ ನೀರು ತಲುಪಿಸಲು ಇಂದಿಗೂ ಸಾಧ್ಯವಾಗಿಲ್ಲ.

‘ರೈಲ್ವೆ ಕ್ರಾಸಿಂಗ್, ಹೆದ್ದಾರಿಗಳನ್ನು ದಾಟಿಸುವ ಸವಾಲು, ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಸಿಗುವುದು ವಿಳಂಬವಾದ ಕಾರಣ ಯೋಜನೆಯೂ ವಿಳಂಬವಾಯಿತು’ ಎನ್ನುತ್ತಾರೆ ತುಂಗಾ ಮೇಲ್ದಂಡೆ ಎಂಜಿನಿಯರ್ ವೀರೇಶ್.

ನಾಲ್ಕು ತಿಂಗಳಷ್ಟೇ ನೀರು: ಯೋಜನೆಯಲ್ಲಿ 80,494 ಹೆಕ್ಟೇರ್ಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಸದ್ಯಕ್ಕೆ 60,800 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ. ಇನ್ನೂ ಸುಮಾರು 20 ಸಾವಿರ ಹೆಕ್ಟೇರ್ಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವುದು ಜುಲೈನಿಂದ ಅಕ್ಟೋಬರ್ವರೆಗೆ ನಾಲ್ಕು ತಿಂಗಳು ಮಾತ್ರ. ಜಲಾಶಯದ ಸಂಗ್ರಹಣ ಸಾಮರ್ಥ್ಯ ಇರುವುದು 3.24 ಟಿಎಂಸಿ ಅಡಿ. ಯೋಜನೆ ರೂಪಿಸಿರುವುದು 12.24 ಟಿಎಂಸಿ ಅಡಿ. ಹಾಗಾಗಿ ಯೋಜನೆಗೆ ಅಗತ್ಯವಾದ ನೀರು ಲಭ್ಯವಾಗುವುದು ಮಳೆಗಾಲದಲ್ಲಷ್ಟೆ. ನೀರು ಸಂಗ್ರಹಣಾ ಸಾಮರ್ಥ್ಯಕ್ಕಿಂತ ನಾಲ್ಕುಪಟ್ಟು ಅಧಿಕ ಬಳಕೆಯ ಅವೈಜ್ಞಾನಿಕ ಯೋಜನೆ ಪರಿಣಾಮ ಕೊನೆಯ ಭಾಗಕ್ಕೆ ನೀರಾವರಿ ಇಂದಿಗೂ ಮರೀಚಿಕೆಯಾಗಿದೆ.

ಸಮಾನಾಂತರಜಲಾಶಯ ಎಂಬ ಕನ್ನಡಿಯೊಳಗಿನ ಗಂಟು

ಕೊಪ್ಪಳ: ಕೊಪ್ಪಳ, ರಾಯಚೂರು, ಅವಿಭಜಿತ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾಜಲಾಶಯನಿರ್ಮಾಣಗೊಂಡು ಏಳು ದಶಕ ಸಮೀಪಿಸುತ್ತಿದೆ. ಹೂಳು ತುಂಬಿಕೊಂಡಿರುವುದರಿಂದ ಕರ್ನಾಟಕದ ಪಾಲಿನ ಪೂರ್ತಿ ನೀರು ಲಭ್ಯವಾಗುತ್ತಿಲ್ಲ.

ಕನಕಗಿರಿ ತಾಲ್ಲೂಕಿನನವಲಿಬಳಿಸಮಾನಾಂತರಜಲಾಶಯನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿ ಹಲವು ವರ್ಷವಾದರೂ ಇನ್ನೂ ಯೋಜನಾ ವರದಿಯೇ ಸಿದ್ಧಗೊಂಡಿಲ್ಲ.

135ಟಿಎಂಸಿ ಅಡಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 35 ಟಿಎಂಸಿ ಅಡಿಗೂ ಹೆಚ್ಚು ಪ್ರಮಾಣದ ಹೂಳು ತುಂಬಿದೆ. ಇದನ್ನು ತೆಗೆಯುವುದು ಬಹುವೆಚ್ಚದಾಯಕ ಎಂಬ ಕಾರಣಕ್ಕೆ 35 ಟಿಎಂಸಿ ಅಡಿ ಸಾಮರ್ಥ್ಯದಸಮಾನಾಂತರಜಲಾಶಯ ನಿರ್ಮಿಸಲು ನಿರ್ಧರಿಸಲಾಗಿದೆ.

ಜಲಾಶಯನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕಳೆದ ಬಜೆಟ್ನಲ್ಲಿ₹14.30 ಕೋಟಿ ಮೀಸಲಿರಿಸಿದ್ದು, ₹13.30 ಕೋಟಿ ಬಿಡುಗಡೆ ಮಾಡಲಾಗಿದೆ.ಸಿದ್ದರಾಮಯ್ಯ ಸರ್ಕಾರ ಇದ್ದಾಗ ಈ ಜಲಾಶಯದ ಯೋಜನಾ ವೆಚ್ಚ ₹5,800 ಕೋಟಿ ಎಂದು ಅಂದಾಜಿಸಲಾಗಿತ್ತು. ಈಗ ಯೋಜನಾ ವೆಚ್ಚ ₹12 ಸಾವಿರ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವರದಿ:ಬಸವರಾಜ್ ಸಂಪಳ್ಳಿ,ಚಂದ್ರಶೇಖರ ಕೋಳೇಕರ,ಚಂದ್ರಹಾಸ ಹಿರೇಮಳಲಿ ಮತ್ತುಜಿ.ಬಿ. ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.