ಬೆಂಗಳೂರು: ರಾಜ್ಯದಲ್ಲಿ 1.17 ಲಕ್ಷ ಸಾರ್ವಜನಿಕ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ಟಿ) ಆ್ಯಂಡ್ ಎಮರ್ಜೆನ್ಸಿ ಬಟನ್ ಅಳವಡಿಸಲಾಗಿದೆ. ಇದು ಒಟ್ಟು ಸಾರ್ವಜನಿಕ ವಾಹನಗಳ ಶೇ 19ರಷ್ಟಿದೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ಅಳವಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು ‘ನಿರ್ಭಯ’ ಯೋಜನೆಯಡಿ ರೂಪಿಸಿತ್ತು. ರಾಜ್ಯದಲ್ಲಿ ಸಾರಿಗೆ ಇಲಾಖೆಯು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ತೆರೆದು 2024ರ ಜೂನ್ನಲ್ಲಿ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗಿತ್ತು.

ಬಸ್, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿಕ್ಯಾಬ್, ಮೋಟಾರ್ ಕ್ಯಾಬ್, ಒಪ್ಪಂದದ ಆಧಾರದಲ್ಲಿ ಸಂಚರಿಸುವ ವಾಹನ, ರಾಷ್ಟ್ರೀಯ ರಹದಾರಿ (ಪರ್ಮಿಟ್) ಹೊಂದಿದ ಸರಕು ಸಾಗಣೆ ವಾಹನಗಳಿಗೆ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ಅಳವಡಿಸುವ ಕಾರ್ಯ ಆರಂಭವಾಗಿತ್ತು.

‘ಕರ್ನಾಟಕದಲ್ಲಿ 6.04 ಲಕ್ಷ ಸಾರ್ವಜನಿಕ ವಾಹನಗಳಿವೆ. ಒಂದು ವರ್ಷದಲ್ಲಿ 1.17 ಲಕ್ಷ ವಾಹನಗಳಿಗೆ ಈ ಬಟನ್ ಅಳವಡಿಸಲಾಗಿದೆ. ಈ ಬಟನ್ಗಳ ಮೂಲಕ 18 ನೈಜ ದೂರುಗಳು ಕಮಾಂಡ್ ಸೆಂಟರ್ಗೆ ರವಾನೆಯಾಗಿವೆ. ಮೂರು ಪ್ರಕರಣ ಗಳನ್ನು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಗೆ (ಇಆರ್ಎಸ್ಎಸ್) ಕಳುಹಿಸಿ ಕೊಡಲಾಗಿದೆ. ಪೊಲೀಸರು ಆ ಪ್ರಕರಣ ಗಳನ್ನು ಪರಿಶೀಲಿಸುತ್ತಾರೆ. ವಾಹನದ ಮಾಲೀಕರೊಂದಿಗೆ ಮಾತನಾಡಿ ನಾಲ್ಕು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಉಳಿದ 11 ಪ್ರಕರಣಗಳು ಸ್ಥಳದಲ್ಲಿಯೇ ಮುಕ್ತಾಯವಾಗಿವೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಆಯುಕ್ತ (ಆಡಳಿತ) ಪಿ.ಪಿ. ಉಮಾಶಂಕರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಿಎಲ್ಟಿಸಿ, ಬಟನ್ ಯಾಕೆ?: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಸಾರಿಗೆ ವಿಭಾಗದ ಭಾರಿ ಪ್ರಯಾಣಿಕ ವಾಹನಗಳು ಅತಿ ವೇಗದಲ್ಲಿ ಚಲಿಸಿದಾಗ ಅಪಘಾತ ಉಂಟಾ ಗುವ ಸಾಧ್ಯತೆಗಳಿರುತ್ತವೆ.ವಿಎಲ್ಟಿಸಿ ಆಧಾರಿತ ಜಿಪಿಆರ್ಎಸ್ ವ್ಯವಸ್ಥೆಯ ಉಪಕರಣ ಅಳವಡಿಸಿ ದಾಗ ವಾಹನದ ವೇಗ, ನಿಗದಿ ಪಡಿಸಿದ ಸ್ಥಳಗಳಲ್ಲಿ ಸರಿಯಾದ ಸಮಯಕ್ಕೆ ತಲುಪುತ್ತಿದೆಯೇ? ಆ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿವೆಯೇ? ಸೂಚಿತ ಮಾರ್ಗದಲ್ಲಿಯೇ ಸಂಚರಿಸುತ್ತಿವೆಯೇ ಎಂದು ಪತ್ತೆ ಹಚ್ಚಲು ಸಹಾಯವಾಗುತ್ತದೆ.

ವಾಹನಗಳನ್ನು ಕದ್ದು ಸಾಗಾಟ ಮಾಡಿದಾಗ ಪತ್ತೆಹಚ್ಚಲು ಸುಲಭ ವಾಗಲಿದೆ. ರಹದಾರಿ ನಿಬಂಧನೆ ಗಳನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇರಿಸಲು ಸಾಧ್ಯ ವಾಗಲಿದೆ. ಪ್ರಯಾಣಿಕರಿಗೆ ತೊಂದರೆ ಉಂಟಾದರೆ, ಮಹಿಳೆಯರಿಗೆ ಸಾರ್ವಜನಿಕ ವಾಹನಗಳಲ್ಲಿ ಕಿರುಕುಳ ಉಂಟಾದರೆ ಎಮರ್ಜೆನ್ಸಿ ಬಟನ್ ಒತ್ತಿದಲ್ಲಿ ಕಮಾಂಡ್ ಕೇಂದ್ರಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಕಿರುಕುಳ ನೀಡಿದವರನ್ನು ಕೂಡಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವರ್ಷದಲ್ಲಿ ಪೂರ್ಣ

‘ಸಾರ್ವಜನಿಕ ಸಾರಿಗೆ ವಾಹನಗಳಿಗೆ ಬಲವಂತವಾಗಿ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ಅಳವಡಿಸಲು ಸಾಧ್ಯವಿಲ್ಲ. ವಾಹನ ಸದೃಢ (ಫಿಟ್ನೆಸ್) ಪರೀಕ್ಷೆಗೆ ಬಂದಾಗಲಷ್ಟೇ ಅಳವಡಿಸಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಎಲ್ಲ ಸಾರ್ವಜನಿಕ ವಾಹನಗಳಲ್ಲಿ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ಇರಲಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಿರುವ ರೀತಿ, ಕಮಾಂಡ್ ಸೆಂಟರ್ಗಳು ದೇಶದಲ್ಲಿಯೇ ಮಾದರಿಯಾಗಿವೆ. ಹಾಗಾಗಿ ಈಗಾಗಲೇ ಐದು ರಾಜ್ಯಗಳ ಸಾರಿಗೆ ಅಧಿಕಾರಿಗಳು ನಮ್ಮಲ್ಲಿಗೆ ಭೇಟಿ ನೀಡಿ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ವ್ಯವಸ್ಥೆಯನ್ನು ನೋಡಿಕೊಂಡು ಹೋಗಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವರ್ಷದಲ್ಲಿ 83,554 ಬಾರಿ ಬಳಕೆ’

ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಇರುವ ಎಮರ್ಜೆನ್ಸಿ ಬಟನ್ಗಳನ್ನು ಒಂದು ವರ್ಷದಲ್ಲಿ 83,554 ಜನರು ಬಳಸಿದ್ದಾರೆ. 18 ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಜನರು ಪರಿಶೀಲಿಸುವುದಕ್ಕಾಗಿ ಸುಮ್ಮನೆ ಒತ್ತಿರುವುದಾಗಿದೆ. ಸಾರ್ವಜನಿಕರು ಅಗತ್ಯ ಸಂದರ್ಭ ಹೊರತುಪಡಿಸಿ ಪರೀಕ್ಷೆ ನಡೆಸಲು, ಕುತೂಹಲ ತಣಿಸಲು ಈ ಬಟನ್ ಒತ್ತಬಾರದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಆಯುಕ್ತ (ಆಡಳಿತ) ಪಿ.ಪಿ. ಉಮಾಶಂಕರ್ ತಿಳಿಸಿದ್ದಾರೆ.

ದೋಷ ಕಂಡರೆ ಸಂಪರ್ಕಿಸಿ

ವಿಎಲ್ಟಿ ಸಾಧನಗಳ ತಂತಿ ತುಂಡಾಗಿರುವುದು, ಅಸಮರ್ಪಕ ಜೋಡಣೆ ಮಾಡಿರುವುದು, ಸ್ವಿಚ್ ಆನ್ ಆಗದೇ ಇರುವುದು ಮುಂತಾದ ದೋಷಗಳು ಕಂಡು ಬಂದರೆ surakshamitr-ka@cda.inಗೆ ಮೇಲ್ ಕಳುಹಿಸಬಹುದು. ಇಲ್ಲವೇ ಮೊಬೈಲ್: 9059955319 ಸಂಪರ್ಕಿಸಿ ಪರಿಹಾರ ಪಡೆದು ಕೊಳ್ಳಬಹುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.