ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಪದವೀಧರ ಕ್ಷೇತ್ರ| ಅನುಕಂಪದ ಅಲೆಯಿಂದಲೇ ಗೆಲುವು: ಕಾಂಗ್ರೆಸ್‌ನ ಕುಬೇರಪ್ಪ

Last Updated 23 ಅಕ್ಟೋಬರ್ 2020, 1:27 IST
ಅಕ್ಷರ ಗಾತ್ರ

* ಮತದಾರರು ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?

ಉದ್ಯೋಗಾರ್ಹತೆ ಹಾಗೂ ಉದ್ಯೋಗಗಳ ಸಂಖ್ಯೆ ಮತ್ತು ಉದ್ಯೋಗಾವಕಾಶಗಳು ಈ ಮೂವರ ನಡುವೆ ಕಂದರ ಉಂಟಾಗಿದೆ. ಉದ್ಯೋಗಾರ್ಹತೆ ಮತ್ತು ಉದ್ಯೋಗಾವಕಾಶಗಳ ನಡುವೆ ಮಾರ್ಗ ಕಲ್ಪಿಸಲು ನನ್ನನ್ನು ಆಯ್ಕೆ ಮಾಡಬೇಕು.

* ನಿಮ್ಮ ಗೆಲುವಿಗೆ ಕಾರಣ ಆಗುವ ಅಂಶಗಳೇನು?

ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್‌ ಯಾವತ್ತೂ ವಿಧಾನ ಪರಿಷತ್ತಿನ ಮೇಲ್ಮನೆಯ ಸ್ಥಾನಗಳಿಗೆ ಹೆಚ್ಚು ಮಹತ್ವ ನೀಡಿರಲಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಸ್ಥಾನದಲ್ಲಿರುವಂಥ ಅಧಿಕಾರ ಸಿಗುವುದು ಇಲ್ಲಿಯೇ. ಪ್ರಾಶಸ್ತ್ಯದ ಮೇಲೆ ಮತ ಸಿಗುವುದು ಈ ಚುನಾವಣೆಯಲ್ಲಿ ಮಾತ್ರ. ನನ್ನ ನಲವತ್ತು ವರ್ಷಗಳ ವೃತ್ತಿ ಮತ್ತು ಸೇವೆಯಲ್ಲಿ ಅಕಾಡೆಮಿಕ್‌ಗೆ, ವಿವಿಧ ಸೆನೆಟ್‌ ಹಾಗೂ ಕೌನ್ಸಿಲ್‌ಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಯೋಜನೆಗಳನ್ನು ನಿರೂಪಿಸುವಲ್ಲಿ ಅಗತ್ಯವಿರುವ ದೂರದೃಷ್ಟಿ, ಅನುಷ್ಠಾನಕ್ಕೆ ತರಲು ಅಗತ್ಯವಿರುವ ಕ್ರಿಯಾಶೀಲ ಮನಸು ನನಗಿವೆ. ಇದೇ ನನ್ನ ಶಕ್ತಿ.

* ಮತದಾರರ ಒಲವು ಹೇಗಿದೆ?

ಒಂದೂವರೆ ವರ್ಷಗಳ ಹಿಂದೆಯೇ ಸೋನಿಯಾ ಗಾಂಧಿ ಅವರು ನನ್ನ ಹೆಸರನ್ನು ಘೋಷಿಸಿದ್ದರು. ಆಗಿನಿಂದಲೂ ಕ್ಷೇತ್ರದಲ್ಲಿ ಗುರುತಿಸಿಕೊಂಡು ಶ್ರಮಿಸುತ್ತ ಬಂದೆ. 32 ತಾಲ್ಲೂಕುಗಳನ್ನು ಓಡಾಡಿರುವೆ. ನನ್ನ ಪಕ್ಷ ಕಾಂಗ್ರೆಸ್‌ನತ್ತ ಒಲವು ಇರುವ ಪದವೀಧರರಿಗೆ ನೋಂದಣಿ ಮಾಡಿಸಿರುವೆ. ಎರಡು ಸಲ ಬಿಜೆಪಿಗೇ ಅವಕಾಶ ನೀಡಿದ್ದಾರೆ. ನಾನು ಈ ಹಿಂದೆ ಶಿಕ್ಷಕ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವೆ. ಆ ಅನುಕಂಪದ ಅಲೆಯೂ ಈ ಸಲ ಕೆಲಸ ಮಾಡುತ್ತಿದೆ. ಹೋರಾಟಗಾರನಿಗೆ ಅನ್ಯಾಯವಾಗಿದೆ. ಅವಕಾಶ ನೀಡಬೇಕು ಎಂಬ ಭಾವ ಮತದಾರರಲ್ಲಿ ಎದ್ದು ಕಾಣುತ್ತಿದೆ. ಇದು ನನ್ನನ್ನು ಗೆಲುವಿನತ್ತ ಕೊಂಡೊಯ್ಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT