ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ಪ್ರಜ್ವಲ್ ಪ್ರಕರಣದ ಬಗ್ಗೆ ಬಿಜೆಪಿಯವರು ಮೌನ ಯಾಕೆ: ಪ್ರಿಯಾಂಕ ಖರ್ಗೆ ಪ್ರಶ್ನೆ

Published 29 ಏಪ್ರಿಲ್ 2024, 6:09 IST
Last Updated 29 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಕಲಬುರಗಿ: ಹುಬ್ಬಳ್ಳಿಯ ನೇಹಾ ಕೊಲೆಯನ್ನು ಬಂಡವಾಳನ್ನಾಗಿ ಮಾಡಿಕೊಂಡ ಬಿಜೆಪಿಯವರು ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಪ್ರಕರದಣ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, 'ಹಾಸನ ಸಂಸದ ಇಂತಹ ಕೃತ್ಯಗಳಿಗೆ ಹೆಸರಾದವರು ಎಂಬ ಸತ್ಯ ಗೊತ್ತಿದ್ದರೂ, ಅವರಿಂದ ಸಾವಿರಾರು ಮಂದಿ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಬಿಜೆಪಿ ಪದಾಧಿಕಾರಿಗಳು ಪತ್ರ ಬರೆದರೂ ಅವರಿಗೆ ಟಿಕೆಟ್ ನೀಡಲಾಯಿತು ಎಂದಿದ್ದಾರೆ.

ಹುಬ್ಬಳ್ಳಿಯ ಕೊಲೆ ಪ್ರಕರಣವನ್ನು ಬಂಡವಾಳವನ್ನಾಗಿ ಮಾಡಿಕೊಂಡವರು ಈಗ ಯಾಕೆ ಮೌನವಾಗಿದ್ದಾರೆ? ಯಾಕೆ ಪ್ರತಿಭಟನೆ ನಡೆಸುತ್ತಿಲ್ಲ. ಹುಬ್ಬಳ್ಳಿ ಕೊಲೆ ಪ್ರಕರಣದಲ್ಲಿ ಮಾಡಿದ ಹಾಗೆ ಯಾಕೆ ಪ್ರತಿ ಹಳ್ಳಿಗಳಲ್ಲಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

‍‍ಪ್ರಜ್ವಲ್ ರೇವಣ್ಣ ಅವರ ಈ ವಿಷಯ ತಿಳಿದಿದ್ದರೂ ಅವರಿಗೆ ಟಿಕೆಟ್ ನೀಡಿ, ಅವರ ಪರವಾಗಿ ಪ್ರಚಾರವನ್ನೂ ಮಾಡಿದರು. ದೇಶ ಬಿಡಲೂ ಸಹಕರಿಸಿದರು. ‍ಪ್ರಜ್ವಲ್ ರೇವಣ್ಣ ದೇಶ ಬಿಟ್ಟಿರುವ ಮಾಹಿತಿ ಇದೆ. ಅವರು ದೇಶ ಬಿಡಲು ಸಹಾಯ ಮಾಡಿದವರು ಯಾರು? ಬಿಜೆಪಿಯ ಮೇಲೆ ನಾನು ನೇರ ಆರೋಪ ಮಾಡುತ್ತೇನೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT