ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವನ್ಯಜೀವಿ ಸಾವು: ವರದಿಗೆ ಸೂಚನೆ

Published 1 ಸೆಪ್ಟೆಂಬರ್ 2024, 16:31 IST
Last Updated 1 ಸೆಪ್ಟೆಂಬರ್ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ಕಾಡಂಚಿನ ತೋಟಗಳಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿ ವನ್ಯಜೀವಿಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.

‘ವನ್ಯಜೀವಿಗಳು ಸಹಜವಾಗಿ ಮತ್ತು ಅಸಹಜವಾಗಿ ಮೃತಪಟ್ಟ ಪ್ರಕರಣಗಳಲ್ಲಿ ಮತ್ತು ಅವುಗಳ ಮರಣೋತ್ತರ ಪರೀಕ್ಷೆ ವರದಿಗಳನ್ನು ಅರಣ್ಯ ಸಚಿವರ ಕಚೇರಿಗೆ ಕೂಡಲೇ ಕಳುಹಿಸಬೇಕು’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಕಾಡಂಚಿನ ಹೊಲ– ತೋಟಗಳಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದರಿಂದ ಆನೆಗಳು ಮೃತಪಡುತ್ತಿರುವ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿವೆ. ಬೇಲಿಗಳಲ್ಲಿ ಹಾಕಿರುವ ಉರುಳಿಗೆ ಸಿಲುಕಿ ಚಿರತೆಗಳು ಸಾಯುತ್ತಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಬೇಕಿದೆ. ಇಂತಹ ಪ್ರಕರಣಗಳ ಬಗ್ಗೆ ಕೂಡಲೇ ಮಾಹಿತಿ ನೀಡುವುದಲ್ಲದೆ, ಈವರೆಗಿನ ಪ್ರಕರಣಗಳ ಸ್ಥಿತಿಗತಿ ಬಗ್ಗೆಯೂ ವರದಿ ನೀಡಿ’ ಎಂದು ಖಂಡ್ರೆ ಹೇಳಿದ್ದಾರೆ.

ಐದು ವರ್ಷಗಳಲ್ಲಿ ದಾಖಲಾದ ಇಂತಹ ಪ್ರಕರಣಗಳು, ಪ್ರಕರಣಗಳ ಸ್ಥಿತಿಗತಿ, ಶಿಕ್ಷೆಯಾದ ಪ್ರಮಾಣ ಮತ್ತಿತರ ವಿವರಗಳನ್ನು ಒಳಗೊಂಡ ವಲಯವಾರು ವರದಿಯನ್ನು 10 ದಿನಗಳ ಒಳಗೆ ಸಲ್ಲಿಸಿ ಎಂದೂ ಅವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT