ಕೆಎಂಎಫ್‌ಗೆ ಪ್ರಬಲ ಅಧ್ಯಕ್ಷ ಬೇಕು
‘ಈ ಸಲ ಜಿಲ್ಲೆಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ. ಅದರಲ್ಲೂ ಸಾರ್ವಜನಿಕ ಸೇವೆಯಲ್ಲಿ ಹೆಚ್ಚಿನ ಬದ್ಧತೆ ಇರುವ ಡಿ.ಕೆ. ಸುರೇಶ್ ಅವರಂತಹ ಪ್ರಬಲರು ಅಧ್ಯಕ್ಷರಾಗಬೇಕು. ಕೆಎಂಎಫ್‌ನಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ಹಳೆ ಮೈಸೂರು ಭಾಗದಲ್ಲೇ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ಹಾಗಾಗಿ, ಈ ಭಾಗದವರೇ ಅಧ್ಯಕ್ಷರಾದರೆ ಒಳ್ಳೆಯದು. ಉತ್ತರ ಕರ್ನಾಟಕ ಭಾಗದವರು ಅಧ್ಯಕ್ಷರಾದರೆ, ಈ ಭಾಗದ ಸಮಸ್ಯೆ ಅವರಿಗೆ ತಿಳಿಯುವುದಿಲ್ಲ. ಹಾಗಾಗಿ, ಈ ಭಾಗದವರೇ ಆಗಬೇಕು’ ಎಂದು ಪ್ರಶ್ನೆಯೊಂದಕ್ಕೆ ಯೋಗೇಶ್ವರ್ ಉತ್ತರಿಸಿದರು.