ಬೀಜಿಂಗ್: ಚೀನಾದ ಶಾಂನ್‌ಡಾಂಗ್ ಪ್ರಾಂತ್ಯದ ಚೀನಾದ ಗಣಿಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿದ್ದ 11 ಗಣಿ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.

ಶಾನ್‌ಡೊಂಗ್ ಪ್ರಾಂತ್ಯದ ಕಿಕ್ಸಿಯಾ ನಗರದದಲ್ಲಿ ಭಾಗಶಃ ನಿರ್ಮಿಸಲಾದ ಚಿನ್ನದ ಗಣಿಯಲ್ಲಿ ಜ.10ರಂದು ಸ್ಫೋಟ ನಡೆದಿತ್ತು. ಈ ಸಂದರ್ಭದಲ್ಲಿ 22 ಗಣಿ ಕಾರ್ಮಿಕರು ಭೂಗರ್ಭದಲ್ಲಿ ಸಿಲುಕಿದ್ದರು. ರಕ್ಷಣಾಧಿಕಾರಿಗಳು ಎಲ್ಲಾ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಂಡಿದ್ದು, ಭಾನುವಾರ ಬೆಳಿಗ್ಗೆ ಇಬ್ಬರು ಕಾರ್ಮಿಕರನ್ನು ಹೊರತೆಗೆದಿದ್ದಾರೆ. ಇದುವರೆಗೆ ಒಟ್ಟು 11 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

ಒಟ್ಟು 633 ಜನರು 407 ರಕ್ಷಣಾ ಉಪಕರಣಗಳೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

‘ಗಣಿಯೊಳಗೆ ಸಿಲುಕಿರುವವರು ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದಾರೆ’ ಎಂದು ಭಾನುವಾರ ಮುಂಜಾನೆ ರಕ್ಷಿಸಲಾದ ಕಾರ್ಮಿಕನೊಬ್ಬ ಮಾಹಿತಿ ನೀಡಿದ್ದಾನೆ.

ಭಾನುವಾರಕ್ಕೂ ಮುನ್ನ ಭೂಗರ್ಭದಲ್ಲಿ ಸಿಲುಕಿರುವ 10 ಗಣಿ ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಅವರೆಲ್ಲರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿದೆ. ಕಾರ್ಮಿಕರಲ್ಲಿ ಒಬ್ಬಾತ ಮೃತಪಟ್ಟಿರುವ ಸಾಧ್ಯತೆ ಇದ್ದು, ಮತ್ತೊಬ್ಬ ಕೋಮಾ ಸ್ಥಿತಿಯಲ್ಲಿದ್ದಾನೆ ಎಂದೂ ಮೂಲಗಳು ತಿಳಿಸಿವೆ.

ಚೀನಾದ ಗಣಿಗಳಲ್ಲಿ ನಡೆಸಲಾಗುವ ಸ್ಫೋಟಗಳಲ್ಲಿ ಕಾರ್ಮಿಕರು ಸಾವನ್ನಪ್ಪುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ನೈರುತ್ಯ ಚೀನಾದ ಕಲ್ಪಿದ್ದಲ್ಲು ಗಣಿಯಲ್ಲಿ ಸೆಪ್ಟೆಂಬರ್‌ನಲ್ಲಿ 16 ಕಾರ್ಮಿಕರು ಕಾರ್ಬನ್ ಮಾನಾಕ್ಸೈಡ್ ಸೇವನೆಯಿಂದ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.