ಲಂಡನ್: ಸದಾ ಅಮೆರಿಕದ ವಿರುದ್ಧ ತೊಡೆತಟ್ಟುವ ಉತ್ತರ ಕೊರಿಯಾವು ತಾನು ಹಾರಿಸಿದ ಕ್ಷಿಪಣಿಗೆ ತನ್ನ ಊರನ್ನೇ ಸುಟ್ಟುಕೊಂಡಿದ್ದ ಎಡವಟ್ಟು ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ಹಾರಾಟ ಆರಂಭಿಸಿದ 12 ನಿಮಿಷದಲ್ಲೇ ಕ್ಷಿಪಣಿ ಪತನಗೊಂಡಿದ್ದ ವಿಷಯವನ್ನು ಅಮೆರಿಕ ಬೇಹುಗಾರ ಮೂಲವನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ವರ್ಷ ಏಪ್ರಿಲ್ 28ರಂದು ಉತ್ತರ ಕೊರಿಯಾವು ‘ಹ್ವಾಸಂಗ್ 12ರ ಮಧ್ಯಮಶ್ರೇಣಿಯ ಖಂಡಾಂತರ ಕ್ಷಿಪಣಿ’ಯ (ಐಆರ್‌ಬಿಎಂ) ಪರೀಕ್ಷೆ ನಡೆಸಿತ್ತು, ಆದರೆ ನಿರೀಕ್ಷಿತ ಗುರಿ ತಲುಪದ ಹಿನ್ನೆಲೆಯಲ್ಲಿ ಮಾರ್ಗಮಧ್ಯದಲ್ಲಿ ಅದು ನಾಶಗೊಂಡಿದೆ ಎಂದು ಭಾವಿಸಲಾಗಿತ್ತು.

‘ಪರೀಕ್ಷಾರ್ಥ ಉಡಾವಣೆಗೊಂಡಿದ್ದ ಹ್ವಾಸಂಗ್ ಕ್ಷಿಪಣಿ ದೇಶದ ಟೋಕ್ಚನ್ ನಗರದ ಕೃಷಿ ಕಟ್ಟಡದ ಮೇಲೆ ಅಪ್ಪಳಿಸಿತ್ತು. ಇದರಿಂದ ಕಟ್ಟಡ ಸಂಪೂರ್ಣವಾಗಿ ನಾಶಗೊಂಡಿತ್ತು, ಕ್ಷಿಪಣಿ ಬಿದ್ದ ನಗರದಲ್ಲಿ 2 ಲಕ್ಷ ಜನರು ನೆಲೆಸಿದ್ದಾರೆ’ ಎಂದು ಅಮೆರಿಕ ಬೇಹುಗಾರಿಕಾ ಅಧಿಕಾರಿಗಳ ಹೇಳಿಕೆ ಜತೆಗೆ ಉಪಗ್ರಹ ಚಿತ್ರದ ಸಮೇತ ‘ದಿ ಡಿಪ್ಲೋಮ್ಯಾಟ್ ಮ್ಯಾಗಜಿನ್’ ವರದಿ ಮಾಡಿದೆ.

‘ಪುಂಕ್ಛಂಗ್ ವಿಮಾನ ನಿಲ್ದಾಣದಿಂದ ಉಡಾವಣೆಗೊಂಡ ಕ್ಷಿಪಣಿ ಈಶಾನ್ಯ ಭಾಗದಲ್ಲಿ 24 ಕಿ.ಮೀ. ಕ್ರಮಿಸುವಷ್ಟರಲ್ಲಿ ಪತನಗೊಂಡಿತ್ತು, 43 ಕಿ.ಮೀ ಎತ್ತರವೂ ಸಾಗಿರಲಿಲ್ಲ. ಉಡಾವಣೆಯಾದ ಒಂದು ನಿಮಿಷದಲ್ಲಿ ಕ್ಷಿಪಣಿಯ ಮೊದಲ ಹಂತದ ಎಂಜಿನ್‌ಗಳು ನಿಷ್ಕ್ರಿಯಗೊಂಡಿದ್ದವು‘ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಗೂಗಲ್‌ಅರ್ಥ್’ ಅಪ್ಲಿಕೇಷನ್ಸ್‌ನಿಂದ ತೆಗೆದ ಛಾಯಾಚಿತ್ರಗಳಲ್ಲಿ ಕ್ಷಿಪಣಿ ಸ್ಫೋಟಕ್ಕೂ ಮುನ್ನ ಹಾಗೂ ನಂತರ ಸ್ಥಳದಲ್ಲಿ ಕಂಡು ಬಂದ ಉಂಟಾದ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.