ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೂಚಿಸ್ತಾನ: ಗುಂಡಿನ ದಾಳಿಗೆ ಬಲಿಯಾದ 6 ಮಂದಿಯ ಶವ ಪತ್ತೆ

Published 12 ಫೆಬ್ರುವರಿ 2024, 14:07 IST
Last Updated 12 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ಕರಾಚಿ: ಬಲೂಚಿಸ್ತಾನದ ಪ್ರಕ್ಷುಬ್ಧ ಪ್ರದೇಶದ ವ್ಯಾಪ್ತಿಯ ಕಿಲ್ಲಾ ಅಬ್ದುಲ್ಲಾ ಬಳಿ ಗುಂಡಿನ ದಾಳಿಗೆ ಬಲಿಯಾದ ಆರು ಮಂದಿಯ ಶವಗಳು ಪಾಕಿಸ್ತಾನ ಭದ್ರತಾ ಪಡೆಗಳಿಗೆ ಸೋಮವಾರ ಬೆಳಿಗ್ಗೆ ಸಿಕ್ಕಿವೆ.

ತುರ್ಬತ್‌ನ ಹೋಶಬ್‌ನಲ್ಲಿ ಕಳೆದ ತಿಂಗಳು ಅಪಹರಣಕ್ಕೆ ಒಳಗಾಗಿದ್ದ ಐವರು ಕಾರ್ಮಿಕರ ಶವಗಳು ಇವು ಇರಬಹುದೇ ಎಂದು ಮೊದಲು ಶಂಕಿಸಲಾಯಿತು. ಆದರೆ, ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ನಂತರ ಸ್ಪಷ್ಟಪಡಿಸಿದರು.

’ಆ ಪ್ರದೇಶದ ಬುಡಕಟ್ಟು ಜನರ ಶವಗಳು ಇವಾಗಿರಬಹುದು. ಎದುರಾಳಿ ತಂಡಗಳ ನಡುವೆ ಕಾದಾಟ ನಡೆದು, ಗುಂಡೇಟು ಬಿದ್ದಿರುವ ಸಾಧ್ಯತೆ ಇದೆ‘ ಎಂದು ಪೊಲೀಸ್ ಸೂಪರಿಂಟೆಂಡೆಂಟ್‌ ಅಕ್ಬರ್‌ ಬಲೋಚ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT