ಇಸ್ಲಾಮಾಬಾದ್: ಪಾಕಿಸ್ತಾನದ ನೈರುತ್ಯ ಭಾಗದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾನುವಾರ ರಾತ್ರಿ ಹೆಲಿಕಾಪ್ಟರ್ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಆರು ಮಂದಿ ಸೇನಾ ಅಧಿಕಾರಿಗಳು ಮೃತಪಟ್ಟಿದ್ದಾರೆ.
ಮೃತರಲ್ಲಿ ಇಬ್ಬರು ಮೇಜರ್ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪಾಕ್ ಸೇನೆ ತಿಳಿಸಿದೆ.
ಇದೇ ಪ್ರಾಂತ್ಯದಲ್ಲಿ ಆಗಸ್ಟ್ 1ರಂದು ಇಂತಹದೇ ದುರಂತ ಸಂಭವಿಸಿ ಲೆಫ್ಟಿನೆಂಟ್ ಜನರಲ್ ಸಹಿತ ಆರು ಮಂದಿ ಮೃತಪಟ್ಟಿದ್ದರು.