ವುಹಾನ್: ಕೋವಿಡ್–19ನಿಂದಾಗಿ ಮೊಟ್ಟ ಮೊದಲ ಸಾವು ಚೀನಾದ ವುಹಾನ್‌ನಲ್ಲಿ ಸಂಭವಿಸಿ ಭಾನುವಾರಕ್ಕೆ ಒಂದು ವರ್ಷ ಆಗುತ್ತದೆ.

ವುಹಾನ್ ವೆಟ್ ಮಾರ್ಕೆಟ್‌ಗೆ ನಿಯಮಿತವಾಗಿ ಹೋಗುತ್ತಿದ್ದ 61 ವರ್ಷದ ವ್ಯಕ್ತಿ ಕಳೆದ ವರ್ಷ ಜನವರಿ 11ರಂದು ಮೃತಪಟ್ಟಿದ್ದನ್ನು ಚೀನಾ ದೃಢಪಡಿಸಿತ್ತು. ಜಗತ್ತನ್ನೇ ನಡುಗಿಸಿರುವ ಈ ವೈರಸ್‌ನ ಮೂಲ ಯಾವುದು ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಗುತ್ತಿಲ್ಲ!

ಕೊರೊನಾ ವೈರಸ್ ಕಾಣಿಸಿಕೊಂಡ ಬಗೆ, ಅದ ಪ್ರಸರಣ, ತಡೆಗಟ್ಟುವ ವಿಧಾನದ ಬಗ್ಗೆ ಮೊದಲಿನಿಂದಲೂ ಚೀನಾ ಗೋಪ್ಯತೆ ಕಾಪಾಡಿಕೊಂಡು ಬರುತ್ತಿದೆ. ಇನ್ನೊಂದೆಡೆ, ಈ ವೈರಸ್‌ನ ಮೂಲ ಎಲ್ಲಿ ಎಂಬುದು ವೈಜ್ಞಾನಿಕ ಕ್ಷೇತ್ರದ ಪಾಲಿಗೆ ಒಗಟಾಗಿಯೇ ಉಳಿದಿದೆ.

ವೈರಸ್‌ನ ಮೂಲ ಪತ್ತೆಗೆ ಸಹಕರಿಸುವಂತೆ ಅಂತರರಾಷ್ಟ್ರೀಯ ಸಮುದಾಯದ ಮನವಿಗೆ ಚೀನಾದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಅದು ಈ ನಿಟ್ಟಿನಲ್ಲಿ ನಡೆದ ತನಿಖೆಯ ದಾರಿ ತಪ್ಪಿಸುವ ಕೆಲಸವನ್ನೇ ಮುಂದುವರಿಸಿದೆ. ಇದು ಸಹಜವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

20 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರೆ, ಇದಕ್ಕೂ ಹತ್ತಾರು ಪಟ್ಟು ಹೆಚ್ಚು ಜನರು ಈ ವೈರಸ್ ದಾಳಿಯಿಂದ ಸುಧಾರಿಸಿಕೊಳ್ಳಲು ಇನ್ನೂ ಹೆಣಗುತ್ತಿದ್ದಾರೆ. ಜಾಗತಿಕ ಆರ್ಥಿಕತೆಗೆ ಬಲವಾದ ಪೆಟ್ಟು ನೀಡಿರುವ ಈ ಪಿಡುಗು, ದೇಶ–ದೇಶಗಳ ನಡುವೆ ಜನರ ಸಂಚಾರಕ್ಕೂ ಸಂಚಕಾರ ತಂದಿದೆ.

ಪ್ರಾಣಿಗಳಿಂದ ಮನುಷ್ಯನಿಗೆ ಈ ವೈರಸ್ ಹಬ್ಬಿತು ಎಂಬ ವಾದ ಇದೆ. ಈ ರೀತಿ ಪ್ರಸರಣ ಹೇಗಾಯಿತು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಡೆಸುವ ಪ್ರಯತ್ನಕ್ಕೆ ಚೀನಾ ಕೈಜೋಡಿಸುತ್ತಿಲ್ಲ.

ಬಹುತೇಕ ವನ್ಯಜೀವಿಗಳ ಮಾಂಸ ಮಾರಾಟ ಮಾಡುವ ಹಸಿ ಮಾರುಕಟ್ಟೆ ವುಹಾನ್‌ನಲ್ಲಿದೆ. ಇಲ್ಲಿ ಮೊದಲು ಕಾಣಿಸಿಕೊಂಡ ಈ ಪರಾವಲಂಬಿ ಜೀವಿ, ಎಲ್ಲೆಡೆ ಪ್ರಸರಣಗೊಂಡು ಕೊನೆಗೆ ಜಗತ್ತೇ ತನ್ನ ಮುಂದೆ ಮಂಡಿಯೂರುವಂತೆ ಮಾಡಿದೆ ಎಂಬ ವಾದ ಇದೆ.

ಇನ್ನೊಂದೆಡೆ, ವುಹಾನ್‌ನ ಪ್ರಯೋಗಾಲಯವೊಂದರಲ್ಲಿ ಈ ವೈರಸ್ ಅನ್ನು ಸೃಷ್ಟಿಸಿ, ಹರಡುವಂತೆ ಮಾಡಲಾಗಿದೆ ಎಂಬ ವಾದಗಳೂ ಕೇಳಿ ಬಂದವು. ಈ ವಾದವನ್ನು ಗಟ್ಟಿಯಾಗಿ ಪ್ರತಿಪಾದಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಹರಿಹಾಯ್ದದ್ದೂ ಈಗ ಇತಿಹಾಸ.

‘ಕೊರೊನಾ ವೈರಸ್‌ನ ಮೂಲವನ್ನು ಎಷ್ಟು ಶೀಘ್ರವಾಗಿ ಪತ್ತೆ ಮಾಡುತ್ತೇವೆಯೋ ಅಷ್ಟು ಬೇಗ ಅದರಿಂದಾಗುವ ಪರಿಣಾಮವನ್ನು ತಗ್ಗಿಸಲು ಸಾಧ್ಯವಾಗುತ್ತದೆ’ ಎಂದು ಇಕೊಹೆಲ್ತ್ ಅಲೈಯನ್ಸ್ ಎಂಬ ಎನ್‌ಜಿಒದ ಅಧ್ಯಕ್ಷ ಪೀಟರ್ ದಜಾಕ್ ಹೇಳುತ್ತಾರೆ. ಈ ಸಂಸ್ಥೆ ಸೋಂಕು ರೋಗಗಳ ಪ್ರಸರಣವನ್ನು ತಡೆಯುವ ಕುರಿತು ಸಂಶೋಧನೆ, ಮಾಹಿತಿ ಹಂಚುವ ಕಾರ್ಯದಲ್ಲಿ ತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.