ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಆಂಥೊನಿ ಅಲ್ಬನೀಸ್ ಅವರ ನೇತೃತ್ವದ ಲೇಬರ್ ಪಕ್ಷವು ಗೆಲುವು ಸಾಧಿಸಿದೆ. ಈ ಮೂಲಕ ಅಲ್ಬನೀಸ್ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ 21 ವರ್ಷಗಳಲ್ಲಿ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಪ್ರಧಾನಿ ಇವರಾಗಿದ್ದಾರೆ.

ವಿಜಯೋತ್ಸವದಲ್ಲಿ ಮಾತನಾಡಿದ ಅಲ್ಬನೀಸ್ ಅವರು, ‘ಇಂದು ಆಸ್ಟ್ರೇಲಿಯಾ ಜನರು ದೇಶದ ಮೌಲ್ಯಗಳಿಗಾಗಿ ಮತ ಹಾಕಿದ್ದಾರೆ’ ಎಂದು ಹೇಳಿದರು.

150 ಸದಸ್ಯಬಲದ ಸಂಸತ್ತಿನಲ್ಲಿ ಲೇಬರ್ ಪಕ್ಷವು 85 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ವಿರೋಧ ಪಕ್ಷವಾದ ಕನ್ಸರ್ವೇಟಿವ್ 41 ಕ್ಷೇತ್ರಗಳಲ್ಲಿ, 9 ಕ್ಷೇತ್ರಗಳಲ್ಲಿ ಇತರರು ಜಯ ಸಾಧಿಸುವ ಸಾಧ್ಯತೆ ಇದೆ. 15 ಕ್ಷೇತ್ರಗಳಲ್ಲಿ ಯಾರು ಗೆಲುವಿನ ನಗೆ ಬೀರಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ‘ಎಬಿಸಿ’ ಸುದ್ದಿಸಂಸ್ಥೆ ಅಂದಾಜಿಸಿದೆ.

ಅಲ್ಬನೀಸ್ ಅವರ ಸ್ಥಿರವಾದ ನಾಯಕತ್ವವು ಅವರನ್ನು ಗೆಲುವಿನೆಡೆಗೆ ಕರೆತಂದಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಜಾಗತಿಕ ಅನಿಶ್ಚಿತತೆ ಸಂದರ್ಭದಲ್ಲಿ ಆಸ್ಟ್ರೇಲಿಯಾ ಜನರು ಆಶಾವಾದ ಮತ್ತು ದೃಢನಿಶ್ಚಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ
ಆಂಥೊನಿ ಅಲ್ಬನೀಸ್ ಆಸ್ಟ್ರೇಲಿಯಾ ಪ್ರಧಾನಿ

ಆಸ್ಟ್ರೇಲಿಯಾ ಪ್ರಧಾನಿಯಾಗಿ ಪುನರ್ ಆಯ್ಕೆಯಾದ ಅಲ್ಬನೀಸ್ ಅವರಿಗೆ ಅಭಿನಂದನೆಗಳು. ಭಾರತ–ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ
ನರೇಂದ್ರ ಮೋದಿ ಭಾರತ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.