ಕರಾಚಿ: ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಲು ಪ್ರತಿಭಟನಕಾರರು ಭಾನುವಾರ ಯತ್ನಿಸಿದ್ದಾರೆ.

ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದು ಕನಿಷ್ಠ 10 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಖಮೇನಿ ಸಾವು ದೃಢಪಡುತ್ತಿದ್ದಂತೆ ರಸ್ತೆಯಲ್ಲಿ ಜಮಾಯಿಸಿದ್ದ ಶಿಯಾ ಸಂಘಟನೆಯ ಹಲವರು ರಾಯಭಾರ ಕಚೇರಿಯತ್ತ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದಾಗ ಘರ್ಷಣೆ ಉಂಟಾಗಿದೆ.

‘ಪೊಲೀಸರ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಲಾಠಿ ಪ್ರಯೋಗಿಸಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇದ್ದಾಗ ಅಶ್ರುವಾಯು ಸಿಡಿಸಿ, ರಬ್ಬರ್ ಗುಂಡುಗಳನ್ನು ಹಾರಿಸಿದೆವು. ಆದರೂ ರಾಯಭಾರ ಕಚೇರಿಗೆ ನುಗ್ಗಲು ಕೆಲವರು ಯತ್ನಿಸಿದಾಗ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು’ ಎಂದು ಎಸ್ಎಸ್ಪಿ ಅಸದ್ ರೆಜಾ ತಿಳಿಸಿದ್ದಾರೆ.

‘ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಸಿಂಧ್ ಆಂತರಿಕ ವ್ಯವಹಾರಗಳ ಸಚಿವ ಜಿಯಾವುಲ್ ಹಸನ್ ಲ್ಯಾಂಗರ್ ತಿಳಿಸಿದ್ದಾರೆ.

ರಾಯಭಾರ ಕಚೇರಿ ಭದ್ರತೆಗಿದ್ದ ಅಮೆರಿಕದ ಗಾರ್ಡ್ಗಳ ದಾಳಿಯಿಂದ ಪ್ರತಿಭಟನಕಾರರು ಮೃತಪಟ್ಟಿದ್ದಾರೆ ಎಂಬುದನ್ನು ಹಸನ್ ಅಲ್ಲಗಳೆದಿದ್ದಾರೆ.

ಪಾಕಿಸ್ತಾನದ ಹಲವೆಡೆ ಪ್ರತಿಭಟನೆ: ಖಮೇನಿ ಅವರ ಹತ್ಯೆ ಖಂಡಿಸಿ ಇಸ್ಲಾ ಮಾಬಾದ್, ಲಾಹೋರ್ ಸೇರಿ ಪಾಕಿಸ್ತಾನದ ಹಲವೆಡೆ ಭಾನುವಾರ ಪ್ರತಿಭಟನೆಗಳು ನಡೆದಿವೆ.

ಇಸ್ಲಾಮಾಬಾದ್ನಲ್ಲಿ ಪ್ರತಿಭಟನೆಗೆ ತೆಹ್ರೀಕ್ –ಇ–ಜೆಫಾರಿಯಾ ಪಾಕಿಸ್ತಾನ್ ಕರೆ ನೀಡಿ, ಅಮೆರಿಕ ರಾಯಭಾರ ಕಚೇರಿಗೆ ನುಗ್ಗಲು ಮುಂದಾಗಿತ್ತು. ಪೊಲೀಸರು ತಡೆದರು.

‘ಪಾಕಿಸ್ತಾನದ ಉತ್ತರಭಾಗದಲ್ಲಿರುವ ಸ್ಕರ್ದು ನಗರದಲ್ಲಿ ವಿಶ್ವಸಂಸ್ಥೆಗೆ ಸೇರಿದ ಕಚೇರಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ’ ಎಂದು ಸ್ಥಳೀಯ ಸರ್ಕಾರದ ವಕ್ತಾರ ಶಬ್ಬಿರ್ ಮಿರ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಹಲವು ಬಹುರಾಷ್ಟ್ರೀಯ ಕಂಪನಿಗಳು ವಿಮಾನ ಸಂಚಾರ ಕೈಗೊಳ್ಳದಂತೆ ಸಿಬ್ಬಂದಿಗೆ ತಿಳಿಸಿವೆ. ಕಚೇರಿ ಮತ್ತು ಕಂಪನಿಗಳ ಭದ್ರತೆ ಹೆಚ್ಚಳ ಮಾಡುತ್ತಿವೆ.

ಅಮೆರಿಕ ನಾಗರಿಕರಿಗೆ ಎಚ್ಚರಿಕೆ: ಇಸ್ಲಮಾಬಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಕರಾಚಿ ಮತ್ತು ಲಾಹೋರ್ ಕಚೇರಿಗಳ ಬಳಿ ನಡೆದ ಪ್ರತಿಭಟನೆಗಳ ವರದಿ ಪಡೆಯುತ್ತಿದ್ದೇವೆ. ಇಸ್ಲಮಾಬಾದ್ ಮತ್ತು ಪೇಶಾವರ ಕಚೇರಿಗಳ ಭದ್ರತೆ ಹೆಚ್ಚಿಸಲಾಗಿದೆ ’ ಎಂದು ಹೇಳಿದೆ.

‘ಪಾಕಿಸ್ತಾನದಲ್ಲಿರುವ ಅಮೆರಿಕ ಪ್ರಜೆಗಳು ಎಚ್ಚರದಿಂದ ಇರಬೇಕು. ಮನೆ, ಹೋಟೆಲ್ಗಳಿಂದ ಹೊರಗೆ ಹೋಗುವವರು ಪ್ರವಾಸ ಮಾಹಿತಿ ನೀಡುವಂತೆ’ ಸೂಚಿಸಲಾಗಿದೆ ಎಂದು ತಿಳಿಸಿದೆ.

ಇರಾಕ್ನಲ್ಲೂ ಪ್ರತಿಭಟನೆ: ಇರಾನ್ ಮೇಲಿನ ದಾಳಿ ಹಾಗೂ ಆಯತೊಲ್ಲಾ ಖಮೇನಿ ಹತ್ಯೆ ಖಂಡಿಸಿ ಇರಾಕ್ನಲ್ಲೂ ಭಾನುವಾರ ಪ್ರತಿಭಟನೆಗಳು ನಡೆದವು. ರಾಜಧಾನಿ ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ಇರಾನ್ ಬೆಂಬಲಿಗರನ್ನು ಅಶ್ರುವಾಯು ಮತ್ತು ಗ್ರನೇಡ್ಗಳನ್ನು ಸಿಡಿಸಿ ಪೊಲೀಸರು ಚದುರಿಸಿದರು. ಶಿಯಾ ಸಮುದಾಯದ ಪ್ರತಿಭಟನಕಾರರು ‘ಇಸ್ರೇಲ್ ಸರ್ವನಾಶ ಅಮೆರಿಕ ಸರ್ವನಾಶ’ ಎನ್ನುವ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.