ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣವನ್ನು ಎಡಿಟ್ ಮಾಡಿ, 2021ರ ಕ್ಯಾಪಿಟಲ್ ಗಲಭೆಗೆ ಕುಮ್ಮಕ್ಕು ನೀಡಿದಂತೆ ಬಿಂಬಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಬಿಸಿ ಅಧಿಕಾರಿಗಳನ್ನು ಬ್ರಿಟನ್ ಸಂಸತ್ನ ಸಂಸ್ಕೃತಿ, ಮಾಧ್ಯಮ, ಕ್ರೀಡಾ ಸಮಿತಿಯು ಸೋಮವಾರ ವಿಚಾರಣೆಗೆ ಒಳಪಡಿಸಿತು.

ಈ ವೇಳೆ ಬಿಬಿಸಿ ಮುಖ್ಯಸ್ಥ ಸಮೀರ್ ಶಾ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಸಿಯು ತಡವಾಗಿ ಪ್ರತಿಕ್ರಿಯಿಸಿತು. ಸಂಸ್ಥೆಯು ತ್ವರಿತಗತಿಯಲ್ಲಿ ಪ್ರತಿಕ್ರಿಯಿಸಬೇಕಿತ್ತು’ ಎಂದು ವಿಷಾದಿಸಿದರು.

ಸಂಸ್ಥೆಯು ನಿಷ್ಪಕ್ಷಪಾತ ಧೋರಣೆಯನ್ನು ಕಡೆಗಣಿಸುತ್ತಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದರು.

ಪ್ರಕರಣ ಏನು?:

ಟ್ರಂಪ್ ಅವರ ಭಾಷಣವನ್ನು ಎಡಿಟ್ ಮಾಡಿ, 2021ರ ಕ್ಯಾಪಿಟಲ್ ಗಲಭೆಗೆ ಕುಮ್ಮಕ್ಕು ನೀಡಿದಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿ, ಬಿಬಿಸಿಯ ಮುಖ್ಯಸ್ಥರಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಟ್ರಂಪ್ ಅವರಲ್ಲಿಯೂ ಸಂಸ್ಥೆಯು ಕ್ಷಮೆಯಾಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.