ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಪ್ರವಾಸಿ ತಾಣ ಬೋಂಡಿ ಬೀಚ್ನಲ್ಲಿ ಭಾನುವಾರ ಸಂಭವಿಸಿದ ಭೀಕರ ಹತ್ಯಾಕಾಂಡದಲ್ಲಿ 14 ವರ್ಷದ ಬಾಲಕಿಯೂ ಸೇರಿ 16 ಅಮಾಯಕರು ಮೃತಪಟ್ಟಿದ್ದಾರೆ.

ಮನಸೋಇಚ್ಚೇ ಗುಂಡಿನ ದಾಳಿ ನಡೆಸಿ ಹತ್ಯಾಕಾಂಡ ನಡೆಸಿದ ಇಬ್ಬರು ಉಗ್ರರ ಗುರುತನ್ನು ಆಸ್ಟ್ರೇಲಿಯಾದ ಪೊಲೀಸರು ಬಹಿರಂಗಪಡಿಸಿದ್ದಾರೆ.

ಗುಂಡಿನ ದಾಳಿ ನಡೆಸಿದವರು ಅಪ್ಪ, ಮಗ ಎಂದು ಹೇಳಿರುವ ಪೊಲೀಸರು, 50 ವರ್ಷದ ಸಾಜೀದ್ ಅಕ್ರಮ್ ಹಾಗೂ ಆತನ ಮಗ 25 ವರ್ಷದ ನವೀದ್ ಅಕ್ರಮ್ ಅಮಾಯಕರ ಸಾವಿಗೆ ಕಾರಣರು ಎಂದು ತಿಳಿಸಿದ್ದಾರೆ.

ಸಾಜೀದ್ ಅಕ್ರಮ್, ನವೀದ್ ಅಕ್ರಮ್ ಇಬ್ಬರು ಪಾಕಿಸ್ತಾನ ಮೂಲದವರು ಎಂದು ಅನೇಕ ವರದಿಗಳು ತಿಳಿಸಿದ್ದು, ಆದರೆ ಆಸ್ಟ್ರೇಲಿಯಾ ಪೊಲೀಸರು ಖಚಿತಪಡಿಸಿಲ್ಲ. ಸಾಜೀದ್ ಅಕ್ರಮ್ 1998 ರಲ್ಲಿ ಉದ್ಯೋಗದ ವಿಸಾ ಅಡಿ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದ, ಅವರು ಇಸ್ಲಾಂ ರಾಷ್ಟ್ರದವರು ಎಂದು ಮಾತ್ರ ತಿಳಿಸಿದ್ದಾರೆ.

ದಾಳಿಯ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು ಸಾಜೀದ್ ಅಕ್ರಮ್ನನ್ನು ಹತ್ಯೆಗೈದಿದ್ದಾರೆ. ಇನ್ನೂ ಕೆಲವರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಆದರೆ, ಪೊಲೀಸರು ಅವುಗಳನ್ನು ನಿರಾಕರಿಸಿದ್ದು, ಅಪ್ಪ–ಮಗ ಇಬ್ಬರೇ ದಾಳಿ ಮಾಡಿದವರು ಎಂದು ತಿಳಿಸಿದ್ದಾರೆ.

ಈ ಭಯಾನಕ ದಾಳಿಗೆ ಕಾರಣ ಏನೂ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.

ಬೋಂಡಿ ಬೀಚ್ನಲ್ಲಿ ನಡೆದ ಗುಂಡಿನ ದಾಳಿಯನ್ನು ಆಸ್ಟ್ರೇಲಿಯಾ ಸರ್ಕಾರ ಭಯೋತ್ಪಾದನಾ ಕೃತ್ಯ ಎಂದು ಘೋಷಣೆ ಮಾಡಿದ್ದು, ದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಪೊಲೀಸರು ನಡೆಸಿದ ಪ್ರತಿ ದಾಳಿ ಯಲ್ಲಿ ಒಬ್ಬ ದಾಳಿಕೋರ ಮೃತಪಟ್ಟಿ ದ್ದಾನೆ. ಇನ್ನೊಬ್ಬನನ್ನು ಬಂಧಿಸಲಾಗಿದೆ. ಘಟನೆಯಲ್ಲಿ 29 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
.ಆಸ್ಟ್ರೇಲಿಯಾ: ‘ಹನುಕ್ಕಾ ಹಬ್ಬ’ ಆಚರಣೆ ವೇಳೆ ಗುಂಡಿನ ದಾಳಿ; 16 ಜನ ಸಾವು.ಆಸ್ಟ್ರೇಲಿಯಾ ಪ್ರವಾಸದಲ್ಲಿ ಪತಿ ತರುಣ್ ಸುಧೀರ್ ಜತೆ ಸುಂದರ ಕ್ಷಣ ಕಳೆದ ನಟಿ ಸೋನಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.