ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿಮಾನ ಬಳಕೆ ಅವಕಾಶಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ನಕಾರ: ಮಗು ಸಾವು, ಆರೋಪ

Published 21 ಜನವರಿ 2024, 16:07 IST
Last Updated 21 ಜನವರಿ 2024, 16:07 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಡಾರ್ನಿಯರ್ ವಿಮಾನದ ಬಳಕೆಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವಕಾಶ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ, ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮಾಲ್ಡೀವ್ಸ್‌ನ 14 ವರ್ಷದ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಭಾರತದ ಡಾರ್ನಿಯರ್ ವಿಮಾನವನ್ನು ಬಳಸಿಕೊಂಡು, ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಲ್ಲಿ ಆ ಮಗು ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ.  

ಪಾರ್ಶ್ವವಾಯು ಮತ್ತು ಬ್ರೇನ್ ಟ್ಯೂಮರ್ ಕಾಯಿಲೆಗೆ ತುತ್ತಾಗಿದ್ದ ಬಾಲಕನನ್ನು ಚಿಕಿತ್ಸೆಗಾಗಿ ದ್ಪೀಪ ಪ್ರದೇಶ ಗಾಫ್ ಅಲಿಫ್ ವಿಲ್ಲಿಂಗಿಲ್ಲಿಯಿಂದ ರಾಜಧಾನಿ ಮಾಲೆಗೆ ಕರೆದೊಯ್ಯಲು ವಿಮಾನ ನೀಡುವಂತೆ ಬಾಲಕನ ಕುಟುಂಬಸ್ಥರು ಬುಧವಾರ ರಾತ್ರಿ ಕೋರಿದ್ದರು. 

ಆದರೆ, ಗುರುವಾರ ಬೆಳಿಗ್ಗೆವರೆಗೆ ದೇಶದ ವಿಮಾನಯಾನ ಅಧಿಕಾರಿಗಳು ಉತ್ತರಿಸಲೇ ಇಲ್ಲ. ಅಷ್ಟರಲ್ಲಾಗಲೇ ಮಗು ಮೃತಪಟ್ಟಿದೆ ಎಂದು ಅಲ್ಲಿನ ಮಾಧ್ಯಮಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಈ ಘಟನೆ ಬಳಿಕ ಮಗು ಮೃತಪಟ್ಟಿರುವ ಆಸ್ಪತ್ರೆ ಹೊರಗೆ ಭಾರಿ ಪ್ರತಿಭಟನೆ ನಡೆದಿದೆ. 

‘ಭಾರತದ ಕುರಿತಾದ ಅಧ್ಯಕ್ಷರ ದ್ವೇಷವನ್ನು ತಣಿಸಲು ದೇಶದ ಜನರು ತಮ್ಮ ಪ್ರಾಣ ಕೊಡಬೇಕಾಗಿಲ್ಲ’ ಎಂದು ಮಾಲ್ಡೀವ್ಸ್ ಸಂಸದ ಮೀಕೆಲ್ ನಸೀಂ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಈ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT