ಒಟ್ಟಾವಾ: ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾದಕವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಒಪಿಂದರ್ ಸಿಂಗ್ ಸಿಯಾನ್ ಎಂಬಾತನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯು ಭಾರತ ಸಂಜಾತ ಕೆನಡಾ ಪ್ರಜೆಯಾಗಿದ್ದು, ಐರಿಶ್ ಗ್ಯಾಂಗ್ನ ಪಾತಕಿಗಳ ಜತೆ ಸೇರಿ ಕೃತ್ಯ ಎಸಗುತ್ತಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಮಾದಕವಸ್ತು ನಿಯಂತ್ರಣ ಪ್ರಾಧಿಕಾರವು (ಡಿಇಎ) ನೆವಾಡದಲ್ಲಿ ಕಳೆದ ತಿಂಗಳು ಒಪಿಂದರ್ನನ್ನು ಬಂಧಿಸಿದೆ. ಈತ ಚೀನಾದಿಂದ ಮಾದಕವಸ್ತುಗಳನ್ನು ಪಡೆದು ಅದನ್ನು ಲಾಸ್ ಏಂಜಲೀಸ್ನ ಬಂದರಿನ ಮೂಲಕ ಆಸ್ಟ್ರೇಲಿಯಾಗೆ ತಲುಪಿಸಲು ಟರ್ಕಿ ಹಾಗೂ ಅಮೆರಿಕದ ಕ್ರಿಮಿನಲ್ ತಂಡಗಳಿಗೆ ಸಹಾಯ ಮಾಡುತ್ತಿದ್ದ ಎಂದು ತಿಳಿಸಿದೆ.

ಮಾದಕವಸ್ತು ಸಾಗಣೆಯಲ್ಲಿ ನಿರತವಾಗಿರುವ ಐರಿಶ್ ಗ್ಯಾಂಗ್ ಜತೆಗೆ ಮಾತ್ರವಲ್ಲದೇ, ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ‘ಬ್ರದರ್ಸ್ ಕೀಪರ್ಸ್’ ಎಂಬ ಪಾತಕಿಗಳ ಸಂಘಟನೆಯೊಂದಿಗೂ ಒಪಿಂದರ್ ನಂಟು ಹೊಂದಿದ್ದಾನೆಂದೂ ವರದಿಗಳಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.