ಬೀಜಿಂಗ್: ಟಿಯಾಂಜಿನ್ ಮೂಲದ ಔಷಧ ತಯಾರಕ ಕಂಪನಿ 'ಕ್ಯಾನ್‌ಸಿನೊ ಬಯಾಲಜಿಸ್' ಉಸಿರಾಟದ ಮೂಲಕವೇ ಪಡೆಯಬಹುದಾದ ವಿಶ್ವದ ಮೊದಲ ಕೋವಿಡ್–19 ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಚೀನಾದ ಔಷಧ ನಿಯಂತ್ರಕಗಳು ಅನುಮೋದನೆ ನೀಡಿವೆ ಎಂದು ವರದಿಯಾಗಿದೆ.

ಬೂಸ್ಟರ್ ಲಸಿಕೆ ರೀತಿಯಲ್ಲಿ ತುರ್ತು ಬಳಕೆಗೆ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು ಅನುಮತಿ ನೀಡಿದೆ ಎಂದು ಕಂಪನಿಯು ಹಾಂಗ್‌ಕಾಂಗ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಭಾನುವಾರ ಹೇಳಿಕೆ ನೀಡಿದೆ.

ಲಸಿಕೆಗೆ ಅನುಮೋದನೆ ಸಿಗುತ್ತಿದ್ದಂತೆಯೇ ಕಂಪನಿಯ ಷೇರು ಮೌಲ್ಯ ಸೋಮವಾರ ಶೇ 7 ರಷ್ಟು ಏರಿಕೆ ಕಂಡಿವೆ.

ನೆಬ್ಯುಲೈಸರ್ ಮೂಲಕ ಹಾಕಬಹುದಾದ ಈ ಲಸಿಕೆಯನ್ನು ಸೂಜಿ ಇಲ್ಲದೆ ತುಂಬಾ ಸುಲಭವಾಗಿ ವಿತರಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ, ಲಸಿಕೆಯೆ ಯಾವಾಗಿನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಅಮೆರಿಕ, ಕ್ಯೂಬಾ, ಕೆನಡಾ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ಉಸಿರಾಟದ ಮೂಲಕ ಪಡೆಯಬಹುದಾದ ಲಸಿಕೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಚೀನಾ 2020ರಿಂದ ಇಲ್ಲಿಯವರೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ, ಇಂಜೆಕ್ಷನ್ ಮೂಲಕ ಪಡೆಯಬಹುದಾದ ಎಂಟು ಲಸಿಕೆಗಳಿಗೆ ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.