ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ನ ಚೊಚ್ಚಲ ಉಪಗ್ರಹ ಉಡಾವಣೆ ಮಾಡಿದ ಚೀನಾ

ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಗೆ ಒತ್ತು
Last Updated 6 ನವೆಂಬರ್ 2019, 7:41 IST
ಅಕ್ಷರ ಗಾತ್ರ

ಖಾರ್ಟೊಮ್‌: ತನ್ನ ರಾಷ್ಟ್ರದ ಮೊಟ್ಟ ಮೊದಲ ಉಪಗ್ರಹವನ್ನು ಚೀನಾ ಉಡಾವಣೆ ಮಾಡಿರುವುದಾಗಿ ಈಶಾನ್ಯ ಆಫ್ರಿಕಾದ ಸುಡಾನ್‌ ಮಂಗಳವಾರ ಹೇಳಿಕೊಂಡಿದೆ.

ಮಿಲಿಟರಿ, ಆರ್ಥಿಕತೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸಲು ಅನುವಾಗುವ ಉಪಗ್ರಹವನ್ನು ಚೀನಾ ಉಡಾವಣೆ ಮಾಡಿರುವುದಾಗಿ ಸುಡಾನ್‌ನ ಸಾವರಿನ್‌ ಕೌನ್ಸಿಲ್‌ ಮುಖ್ಯಸ್ಥ ಜನರಲ್‌ ಅಬ್ದೆಲ್‌ ಫತಾಹ್‌ ಅಲ್‌–ಬುರ್ಹನ್‌ ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪ್ರಕಟಿಸಿದ್ದಾರೆ.

ಉತ್ತರ ಚೀನಾದ ಷಾಂಕ್ಸಿ ಪ್ರಾಂತ್ಯದಿಂದ ಭಾನುವಾರ ಉಪಗ್ರಹ ಉಡಾವಣೆ ಮಾಡಿರುವುದಾಗಿ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಮಿಲಿಟರಿ ಅವಶ್ಯಕತೆಗಳಿಗಾಗಿ ದೇಶದಲ್ಲಿನ ನೈಸರ್ಗಿ ಸಂಪನ್ಮೂಲಗಳ ಪತ್ತೆ ಕಾರ್ಯ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯಲ್ಲಿ ಅಭಿವೃದ್ಧಿ ಗುರಿ ಸಾಧನೆಗಾಗಿ ಈ ಉಪಗ್ರಹ ಉಡಾವಣೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಚೀನಾ ಈ ಯೋಜನೆಯ ಪಾಲುದಾರನಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಸುಡಾನ್‌ನಿಂದಲೇ ಉಪಗ್ರಹ ನಿಯಂತ್ರಣ ನಡೆಸಲಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಸುಡಾನ್‌ ಆರ್ಥಿಕ ಹಿಂಜರಿತದಲ್ಲಿ ಸಿಲುಕಿದ್ದು, ದಶಕದಿಂದಲೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದೆ.

ಬ್ಯಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗಾಗಿಯೇ ಓಮರ್‌ ಅಲ್‌–ಬಶೀರ್‌ ನೇತೃತ್ವದ ಸುಡಾನ್‌ ಸರ್ಕಾರ 2013ರಲ್ಲಿ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೇಸ್‌ ರಿಸರ್ಚ್‌ ಆ್ಯಂಡ್‌ ಏರೋಸ್ಪೇಸ್‌(ISRA) ಆರಂಭಿಸಿದೆ. ಮೂವತ್ತು ವರ್ಷ ಸುಡಾನ್‌ ಅಧ್ಯಕ್ಷರಾಗಿ ಬಶೀರ್‌ ಅವರನ್ನು ಪದಚ್ಯುತಿಗೊಳ್ಳುವಂತೆ ಏಪ್ರಿಲ್‌ನಲ್ಲಿ ಅಲ್ಲಿನ ಸೇನೆ ಒತ್ತಡ ಹೇರಿತು. ಬಶೀರ್‌ ಆಡಳಿತದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT