ಬೀಜಿಂಗ್: ಚೀನಾದಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾ ವೈರಸ್ (ಕೊವಿಡ್–19) ಸೋಂಕು ತಗುಲಿರುವ ಹೊಸ ಪ್ರಕರಣಗಳು ದಾಖಲಾಗಿಲ್ಲ.

ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಕ್ರಮ ಕೈಗೊಳ್ಳಲಾಗುತ್ತಿದ್ದು, ಚೀನಾದಲ್ಲಿ ಸೋಂಕಿನ ಪ್ರಮಾಣ ಕಳೆದ ಕೆಲವು ವಾರಗಳಿಂದ ಕಡಿಮೆಯಾಗಿದೆ.

ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ವುಹಾನ್ ನಗರದಲ್ಲಿ ಅದನ್ನು ಹರಡದಂತೆ ನಿಯಂತ್ರಿಸುವಲ್ಲಿ ಕೊನೆಗೂ ಯಶಸ್ವಿಯಾಗಿರುವ ಚೀನಾವನ್ನು ವಿಶ್ವ ಆರೋಗ್ಯ ಸಂಘಟನೆಯೂ (ಡಬ್ಲ್ಯುಎಚ್‌ಒ) ಶ್ಲಾಘಿಸಿದೆ.

ಇದನ್ನೂ ಓದಿ:ಕೊರೊನಾ ವೈರಸ್ | ಚೀನಾ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ

‘ವಿಶ್ವದ ಇತರ ಪ್ರದೇಶಗಳಿಗೆ ವುಹಾನ್ ಒಂದು ಭರವಸೆಯಾಗಿ ಪರಿಣಮಿಸಿದೆ’ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.

5.6 ಕೋಟಿ ಜನರಿರುವ ವುಹಾನ್ ಮತ್ತು ಸುತ್ತಲಿನ ಹುಬೈ ಪ್ರಾಂತ್ಯದಲ್ಲಿ ಜನವರಿ ಕೊನೆಯಿಂದ ಬಂದ್ ವಾತಾವರಣ ಇದ್ದು, ಇದೀಗ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣದ ಮೇಲಿನ ನಿರ್ಬಂಧವನ್ನು ತುಸುವೇ ಸಡಿಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಆದಾಗ್ಯೂ, ಇತರ ದೇಶಗಳಿಂದ ಬಂದವರಿಂದ ಸೋಂಕು ಹರಡುವುದನ್ನು ತಡೆಯಲು ನಿರ್ಬಂಧಗಳನ್ನು ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.