ವಾಷಿಂಗ್ಟನ್/ಬೀಜಿಂಗ್: ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿರುವ ಚೀನಾಕ್ಕೆ ತಿರುಗೇಟು ನೀಡಲು ಮುಂದಾಗಿರುವ ಡೊನಾಲ್ಡ್ ಟ್ರಂಪ್ ಆಡಳಿತ, ಚೀನಾದ ಸರಕುಗಳಿಗೆ ಹೆಚ್ಚುವರಿಯಾಗಿ ಹೆಚ್ಚುವರಿಯಾಗಿ ಶೇ 50ರಷ್ಟು ಸುಂಕ ವಿಧಿಸಲು ನಿರ್ಧರಿಸಿದೆ.

ಏಪ್ರಿಲ್ 9ರಿಂದ ಇದು ಜಾರಿಗೊಳ್ಳಲಿದ್ದು, ಚೀನಾ ಸರಕುಗಳ ಮೇಲಿನ ಸುಂಕವು ಶೇ 104ರಷ್ಟಾಗಲಿದೆ ಎಂದು ಶ್ವೇತಭವನ ತಿಳಿಸಿದೆ.

‘ಹಿತಾಸಕ್ತಿ ರಕ್ಷಿಸಲು ಕ್ರಮ’: ಚೀನಾ ಮೇಲೆ ಹೆಚ್ಚುವರಿಯಾಗಿ ಶೇಕಡ 50ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ, ತನ್ನ ಹಿತಾಸಕ್ತಿಗಳನ್ನು ಹಾಗೂ ಹಕ್ಕುಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ.

ಟ್ರಂಪ್ ಅವರು ಕಳೆದ ವಾರ ಘೋಷಿಸಿದ ಸುಂಕಗಳಿಗೆ ಪ್ರತಿಯಾಗಿ ತಾನೂ ಸುಂಕ ವಿಧಿಸುವುದಾಗಿ ಚೀನಾ ಹೇಳಿತ್ತು. ಇದಾದ ನಂತರದಲ್ಲಿ ಟ್ರಂಪ್ ಅವರು ಚೀನಾ ಮೇಲೆ ಹೆಚ್ಚುವರಿಯಾಗಿ ಸುಂಕ ವಿಧಿಸಲಾಗುವುದು ಎಂದು ಸೋಮವಾರ ಹೇಳಿದ್ದರು.

ದೊಡ್ಡ ತಪ್ಪು: ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ಸುಂಕ ವಿಧಿಸುವ ಚೀನಾ ಕ್ರಮವು ‘ದೊಡ್ಡ ತಪ್ಪು’ ಎಂದು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಅವರು ಸಿಎನ್ಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ವ್ಯಾಪಾರ ಕೊರತೆ ಹೊಂದಿರುವ ದೇಶ ನಮ್ಮದು. ಹೀಗಾಗಿ, ನಮ್ಮ ಮೇಲೆ ಚೀನಾ ದೇಶವು ಸುಂಕ ಹೆಚ್ಚಿಸುವುದರಿಂದ ನಾವು ಕಳೆದುಕೊಳ್ಳುವುದು ಏನಿದೆ? ಅವರು ನಮ್ಮಲ್ಲಿಗೆ ರಫ್ತು ಮಾಡುವ ಪ್ರಮಾಣಕ್ಕೆ ಹೋಲಿಸಿದರೆ, ನಾವು ಅವರ ದೇಶಕ್ಕೆ ರಫ್ತು ಮಾಡುವುದು ಐದನೆಯ ಒಂದರಷ್ಟು ಮಾತ್ರ’ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಮೇಲೆ ಶೇ 25ರಷ್ಟು ಸುಂಕ ವಿಧಿಸಲು ಚಿಂತನೆ

ಬ್ರಸೆಲ್ಸ್: ಅಮೆರಿಕದಿಂದ ಆಮದಾಗುವ ಉತ್ಪನ್ನಗಳ ಮೇಲೆ ಗರಿಷ್ಠ ಶೇಕಡ 25ರಷ್ಟು ಸುಂಕ ವಿಧಿಸಲು ಐರೋಪ್ಯ ಒಕ್ಕೂಟ ಆಲೋಚಿಸಿದೆ. ಆದರೆ ಅಮೆರಿಕದ ಬರ್ಬನ್ ವಿಸ್ಕಿಯ ಮೇಲೆ ಸುಂಕ ವಿಧಿಸದೆ ಇರುವ ಸಾಧ್ಯತೆ ಇದೆ. ಬರ್ಬನ್ ವಿಸ್ಕಿಗೆ ಸುಂಕ ವಿಧಿಸಿದರೆ ಅದಕ್ಕೆ ಪ್ರತಿಯಾಗಿ ಅಮೆರಿಕವು ಯುರೋಪಿನ ವೈನ್ ಮತ್ತು ಮದ್ಯಸಾರದ ಮೇಲೆ ಹೆಚ್ಚು ಸುಂಕ ವಿಧಿಸಬಹುದು ಎಂಬ ಕಾರಣಕ್ಕೆ ಒಕ್ಕೂಟವು ಈ ಆಲೋಚನೆ ಮಾಡಿದೆ. ಯುರೋಪಿನ ಪ್ರಮುಖ ವೈನ್ ರಫ್ತುದಾರರಾದ ಫ್ರಾನ್ಸ್ ಮತ್ತು ಇಟಲಿಯ ಒತ್ತಡಕ್ಕೆ ಮಣಿದ ಒಕ್ಕೂಟವು ಸುಂಕ ವಿಧಿಸುವ ಪಟ್ಟಿಯಿಂದ ಬರ್ಬನ್ ವಿಸ್ಕಿ ಕೈಬಿಡಲು ತೀರ್ಮಾನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.