ವಾಷಿಂಗ್ಟನ್: ಅಮೆರಿಕದಲ್ಲಿ ಜನನದ ಆಧಾರದಲ್ಲಿ ಪೌರತ್ವ ನೀಡುವ ನಿಯಮವನ್ನು ರದ್ದುಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಸಿಯಾಟಲ್ ರಾಜ್ಯದ ಫೆಡರಲ್ ನ್ಯಾಯಾಲಯ ತಡೆ ನೀಡಿದೆ. ಆದಾಗ್ಯೂ, ಸಾಕಷ್ಟು ಗರ್ಭಿಣಿಯರು, ವಿಶೇಷವಾಗಿ ಭಾರತ ಮೂಲದವರು ಅವಧಿಪೂರ್ವ ಪ್ರಸವಕ್ಕಾಗಿ ಆಸ್ಪತ್ರೆಗಳಿಗೆ ಜಮಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ವರದಿಗಳಿಗೆ ಸಂಬಂಧಿಸಿದಂತೆ ನ್ಯೂಜೆರ್ಸಿಯಲ್ಲಿರುವ ಹೃದ್ರೋಗ ತಜ್ಞ ಡಾ. ಅವಿನಾಶ್ ಗುಪ್ತಾ ಅವರು ಮಾತನಾಡಿದ್ದಾರೆ.

'ಸಿಸೇರಿಯನ್ ಮಾಡಿಸಿಕೊಳ್ಳಲು ಬಯಸಿದ್ದರೆ, ಹೆರಿಗೆ ದಿನಾಂಕವನ್ನು ನಿಗದಿಗಿಂತ ಒಂದು ವಾರ ಅಥವಾ ಅದಕ್ಕಿಂತಲೂ ಕಡಿಮೆ ದಿನಗಳ ಮಟ್ಟಿಗೆ ಮರುಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ಈಗಷ್ಟೇ ಏಳು ಅಥವಾ ಎಂಟು ತಿಂಗಳ ಗರ್ಭಿಣಿಯರಾಗಿದ್ದರೆ, ಅದಕ್ಕಿಂತಲೂ ಬೇಗನೆ ಹೆರಿಗೆ ಮಾಡಿಸಿಕೊಳ್ಳುವುದು ಸರಿಯಲ್ಲ. ಅದು ತಾಯಿ ಅಥವಾ ಶಿಶುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಶಿಶುವು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲೇ ಕೊನೆಯುಸಿರೆಳೆಯಬಹುದು. ಇದು ದುಷ್ಕೃತ್ಯವಾಗಿರುವುದರಿಂದ, ಅಮೆರಿಕದಲ್ಲಿರುವ ಯಾವ ಪ್ರಸೂತಿ ತಜ್ಞರೂ ಅದನ್ನು ಒಪ್ಪುವುದಿಲ್ಲ ಎಂದುಕೊಂಡಿದ್ದೇನೆ. ಮಗುವಿಗೆ 18 ವರ್ಷ ತುಂಬುವವರೆಗೆ ಅವರೇ ಜವಾಬ್ದಾರರಾಗಿರುವುದರಿಂದ, ಯಾರೂ ಅಂತಹ ದುಸ್ಸಾಹಸ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಿರುವ ಟ್ರಂಪ್, ಜನ್ಮದತ್ತ ಪೌರತ್ವ ನಿಯಮ ರದ್ದು ಆದೇಶವನ್ನು ಮೊದಲ ದಿನವೇ ಪ್ರಕಟಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಲವು ರಾಜ್ಯಗಳು, ನ್ಯಾಯಾಲದ ಮೊರೆ ಹೋಗಿವೆ.
.ಹುಟ್ಟಿನಿಂದ ಸಿಗುವ ಪೌರತ್ವ ರದ್ದು ಮಾಡಿದ ಟ್ರಂಪ್: ಭಾರತೀಯ ವಲಸಿಗರಿಗೆ ಸಮಸ್ಯೆ.ಜನ್ಮದತ್ತ ಪೌರತ್ವ ನಿಯಮ ರದ್ದು: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್ ತಡೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.