ವಾಷಿಂಗ್ಟನ್, ಅಮೆರಿಕ: ‘ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ವ್ಯಾಪಕವಾಗಿ ಹಾನಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಯುದ್ಧ ನಡೆಸಲು ಕೈ ಜೋಡಿಸುವಂತೆ ಇಸ್ರೇಲ್ ಒತ್ತಾಯಪಡಿಸಿತ್ತು ಎಂಬ ಆರೋಪವನ್ನು ನಿರಾಕರಿಸಿದ್ದಾರೆ.

‘ಇರಾನ್ನಲ್ಲಿ ಬಹುತೇಕ ಎಲ್ಲವೂ ನಾಶವಾಗಿವೆ’ ಎಂದು ಸಂಘರ್ಷದ ಬಳಿಕ ಮೊದಲ ಬಾರಿಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದ್ದಾರೆ.

ಜರ್ಮನಿಯ ಛಾನ್ಸೆಲರ್ ಫ್ರಿಡ್ರಿಚ್ ಮೆರ್ಝ್ ಅವರು ಕೂಡ ಈ ವೇಳೆ ಹಾಜರಿದ್ದರು.

‘ಮಿತ್ರಪಡೆ ಇಸ್ರೇಲ್ ಸೇನೆಯು ಇರಾನ್ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸಿದೆ ಎಂದು ಗೊತ್ತಾದ ಬಳಿಕ ಅಮೆರಿಕ ಕೂಡ ಕೈ ಜೋಡಿಸಿತು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸೋಮವಾರ ಹೇಳಿಕೆ ನೀಡಿದ್ದರು. ಆದರೆ, ಈ ವಾದವನ್ನು ಟ್ರಂಪ್ ತಳ್ಳಿಹಾಕಿದ್ದಾರೆ.

‘ಇರಾನ್ ನಮ್ಮ ಮೇಲೆ ದಾಳಿ ಇಡುವ ಮೊದಲು ನಾವೇ ಪ್ರಹಾರ ಮಾಡಿದೆವು’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

‘ಪರಮಾಣು ಮಾತುಕತೆ ನಡೆಯುತ್ತಿರುವ ರೀತಿ ಗಮನಿಸಿದ್ದೆ. ಅವರೇ(ಇರಾನ್) ನಮ್ಮ ಮೇಲೆ ದಾಳಿ ನಡೆಸಲಿದ್ದಾರೆ ಎನ್ನುವುದು ಇದರಿಂದ ಗೊತ್ತಾಗಿತ್ತು. ಅದಕ್ಕೆ ನಾನು ಅವಕಾಶವನ್ನೇ ಮಾಡಿಕೊಡಲಿಲ್ಲ’ ಎಂದು ಒವಲ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ತಿಳಿಸಿದ್ದಾರೆ.

ಮಾತುಕತೆ ಸಾಧ್ಯವಿಲ್ಲ: ‘ಇರಾನ್ನ ವಾಯುಪಡೆ, ನೌಕಾಪಡೆ ಸಂಪೂರ್ಣ ನಾಶವಾಗಿದೆ. ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಪ್ರಮುಖ ಎಲ್ಲ ನಾಯಕರನ್ನು ಹತ್ಯೆ ಮಾಡಲಾಗಿದೆ. ಹೀಗಾಗಿ ಯುದ್ಧವೂ ತಾನಾಗಿಯೇ ಕೊನೆಯಾಗಲಿದ್ದು, ಇನ್ನು ಮಾತುಕತೆ ನಡೆಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಸ್ಪೇನ್ಗೆ ಬೆದರಿಕೆ: ಇರಾನ್ ಮೇಲೆ ದಾಳಿ ನಡೆಸಲು ತನ್ನ ಸೇನಾ ನೆಲೆಗಳನ್ನು ಬಳಸಲು ಸ್ಪೇನ್ ಅವಕಾಶ ನೀಡದ ಕುರಿತು ಟ್ರಂಪ್ ಕಿಡಿಕಾರಿದ್ದು, ಆ ದೇಶದ ಜೊತೆಗೆ ಎಲ್ಲ ರೀತಿಯ ವ್ಯಾಪಾರ– ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

‘ನಾವು ಸ್ಪೇನ್ನೊಂದಿಗೆ ಎಲ್ಲ ವ್ಯಾಪಾರ ಕಡಿತಗೊಳಿಸಲಿದ್ದೇವೆ. ಆ ದೇಶದ ಜೊತೆಗೆ ಯಾವುದೇ ವ್ಯವಹಾರವಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.