ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾಪಟ್ಟಿ: ಗುಂಡಿನ ದಾಳಿ, 20 ಸಾವು

Published 26 ಜನವರಿ 2024, 15:57 IST
Last Updated 26 ಜನವರಿ 2024, 15:57 IST
ಅಕ್ಷರ ಗಾತ್ರ

ರಫಾ (ಗಾಜಾ ಪಟ್ಟಿ): ಮಾನವೀಯ ನೆರವು ಪಡೆಯಲು ಗಾಜಾಪಟ್ಟಿಯಲ್ಲಿ ಸಾಲಿನಲ್ಲಿ ನಿಂತಿದ್ದ ಪ್ಯಾಲೆಸ್ಟೀನ್‌ ಜನರ ಗುಂಪಿನ ಮೇಲೆ ಇಸ್ರೇಲ್‌ನ ಸೇನೆಯು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಸತ್ತಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಆರೋಪಿಸಿದೆ.

ಈ ಕುರಿತಂತೆ ವರದಿ ನಿರೀಕ್ಷಿಸಲಾಗಿದೆ ಎಂದು ಇಸ್ರೇಲ್‌ ಸೇನೆಯು ಪ್ರತಿಕ್ರಿಯಿಸಿದೆ. ಪ್ರತ್ಯಕ್ಷದರ್ಶಿಗಳು ಹಾಗೂ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಗಾಜಾ ನಗರದ ದಕ್ಷಿಣ ಭಾಗದಲ್ಲಿ ಈ ಘಟನೆ ನಡೆದಿದೆ. ಜನರ ಗುಂಪು ಆಹಾರದ ನೆರವು ಸ್ವೀಕರಿಸಲು ಸೇರಿತ್ತು.

ಗುಂಡಿನ ದಾಳಿ ಬಳಿಕ ಜನರು ರಕ್ಷಣೆಗಾಗಿ ಓಡುತ್ತಿರುವುದು, ಕೆಲವರು ನೆರವಿನ ಬಾಕ್ಸ್‌ಗಳನ್ನು ಹಿಡಿದು ಧಾವಿಸುತ್ತಿರುವುದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಕತ್ತೆ, ಕುದುರೆ ಗಾಡಿಗಳ ಮೇಲೆ ಕರೆದೊಯ್ಯುತ್ತಿವ ದೃಶ್ಯಗಳಿರುವ ವಿಡಿಯೊಗಳು ಅನ್‌ಲೈನ್‌ನಲ್ಲಿ ಹರಿದಾಡುತ್ತಿವೆ.  

ಗಾಯಾಳುಗಳನ್ನು ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ನಾವುಗಳು ಆಹಾರದ ಬಾಕ್ಸ್‌ ಪಡೆಯಲು ಕಾಯುತ್ತಿದ್ದಾಗ ಏಕಾಏಕಿ ಗುಂಡಿನ ದಾಳಿಯನ್ನು ನಡೆಸಲಾಯಿತು’ ಎಂದು ಗಾಯಾಳು ಮೊಹಮ್ಮದ್‌ ಅಲ್‌ ರೀಫಿ ಅವರು ಪ್ರತಿಕ್ರಿಯಿಸಿದರು.

ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್‌ ಅಲ್‌ ಖಿದ್ರಾ ಅವರು, ‘ಗುಂಡಿನ ದಾಳಿಯಿಂದ 20 ಜನರು ಸತ್ತಿದ್ದಾರೆ ಹಾಗೂ ಇತರೆ 150 ಜನರು ಗಾಯಗೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT