ಗಾಜಾ ಪಟ್ಟಿ: ‘ಹಮಾಸ್ನ ಸಶಸ್ತ್ರ ವಿಭಾಗದ ಮುಖ್ಯಸ್ಥ ಎಂದು ಹೇಳಲಾದ ಮೊಹಮ್ಮದ್ ಸಿನ್ವರ್ನನ್ನು ಹತ್ಯೆ ಮಾಡಲಾಗಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದ್ದಾರೆ.

ಗಾಜಾಪಟ್ಟಿ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಈತ ಹತನಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಆದರೆ ಇದನ್ನು ಹಮಾಸ್ ದೃಢಪಡಿಸಿಲ್ಲ.

2023ರ ಅಕ್ಟೋಬರ್ 7ರಂದು ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ದಾಳಿಯ ಪ್ರಮುಖ ಸೂತ್ರದಾರ ಯಾಹ್ಯಾ ಸಿನ್ವರ್ನ ಕಿರಿಯ ಸಹೋದರನೇ ಮೊಹಮ್ಮದ್ ಸಿನ್ವರ್. ಈ ಕೃತ್ಯಕ್ಕೆ ಮೊಹಮ್ಮದ್ ಅಣ್ಣನಿಗೆ ನೆರವಾಗಿದ್ದ. ಇಸ್ರೇಲ್ ಪಡೆಗಳು 2024ರ ಅಕ್ಟೋಬರ್ನಲ್ಲಿ ಯಾಹ್ಯಾ ಸಿನ್ವರ್ನ ಹತ್ಯೆ ಮಾಡಿದ್ದವು.

ಸಂಸತ್ತಿನಲ್ಲಿ ಭಾಷಣ ಮಾಡಿದ ನೆತನ್ಯಾಹು, ಸಿನ್ವರ್ ಹತ್ಯೆಯನ್ನು ಪ್ರಸ್ತಾಪಿಸಿದರು. ‘ನಾವು 10 ಸಾವಿರ ಭಯೋತ್ಪಾದಕರನ್ನು ಕೊಂದಿದ್ದೇವೆ. ಮೊಹಮ್ಮದ್, ಇಸ್ಮಾಯಿಲ್, ಯಾಹ್ಯಾ ಸಿನ್ವರ್ ಮತ್ತು ಮೊಹಮ್ಮದ್ ಸಿನ್ವರ್ ಅವರನ್ನು ಕೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.