ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Israel Hamas War | ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸಿದ ಹಮಾಸ್

Published 26 ಮೇ 2024, 15:10 IST
Last Updated 26 ಮೇ 2024, 15:10 IST
ಅಕ್ಷರ ಗಾತ್ರ

ದಿರ್ ಅಲ್–ಬಲಾಹ(ಗಾಜಾ ಪಟ್ಟಿ): ಇಸ್ರೇಲ್‌ ಗುರಿಯಾಗಿಸಿಕೊಂಡು ಹಮಾಸ್‌ ಭಾನುವಾರ ರಾಕೆಟ್‌ ದಾಳಿ ನಡೆಸಿದ್ದು, ಟೆಲ್‌ಅವಿವ್‌ನಲ್ಲಿ ವೈಮಾನಿಕ ದಾಳಿಯ ಸೈರನ್‌ಗಳು ಮೊಳಗಿದವು.

ಜನವರಿಯಿಂದ ಈಚೆಗೆ ಹಮಾಸ್‌ ನಡೆಸಿದ ದೀರ್ಘ ದಾಳಿ ಇದಾಗಿದ್ದರೂ, ಯಾವುದೇ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿ ದಾಖಲಾಗಿಲ್ಲ. ಬಂಡುಕೋರರು ಯುದ್ಧ ಆರಂಭಿಸಿದಾಗಿನಿಂದಲೂ ಸಣ್ಣ ಪ್ರಮಾಣದಲ್ಲಿ ಗಾಜಾದ ಸುತ್ತಮುತ್ತಲ ಪ್ರದೇಶಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ಹಮಾಸ್‌ನ ಮಿಲಿಟರಿ ವಿಭಾಗವು ಈ ದಾಳಿಯನ್ನು ನಡೆಸಿರುವುದಾಗಿ ಹೇಳಿಕೊಂಡಿದೆ.

‘ಸೇನೆಯು ಈಚೆಗೆ ದಾಳಿ ನಡೆಸಿದ ದಕ್ಷಿಣ ಗಾಜಾದ ರಫಾ ಪ್ರದೇಶದಿಂದ ಉಡಾವಣೆಯಾಗಿರುವ ಎಂಟು ಸ್ಫೋಟಕಗಳು ದೇಶ ಪ್ರವೇಶಿಸಿದ್ದು, ಹಲವು ರಾಕೆಟ್‌ಗಳನ್ನು ಗಡಿಯಲ್ಲೇ ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

ಮಾನವೀಯ ನೆರವು ಹೊತ್ತು ಬಂದಿರುವ ಟ್ರಕ್‌ಗಳಿಗೆ ಪ್ರವೇಶಾವಕಾಶ ನೀಡಲಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT