ಅಮೆರಿಕ ಅಧ್ಯಕ್ಷ ಜೋ ಬೈಡನ್, ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊಹಮ್ಮದ್ ಯೂನುಸ್ ಅವರೊಂದಿಗೆ ಚರ್ಚಿಸಿ, ಚಿನ್ಮಯಿ ದಾಸ್ ಬಿಡುಗಡೆಗೆ ಒತ್ತಾಯಿಸಬೇಕು
ಖಂಡೇರಾವ್ ಕಂಡ್, ಅಧ್ಯಕ್ಷ, ಫೌಂಡೇಷನ್ ಫಾರ್ ಇಂಡಿಯಾ ಆ್ಯಂಡ್ ಇಂಡಿಯನ್ ಡೆಸ್ಪೊರಾ ಸ್ಟಡೀಸ್ (ಎಫ್‌ಐಐಡಿಎಸ್)
ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಚಿವಾಲಯವು ಡಿ.11ಕ್ಕೆ ಮಾಹಿತಿ ನೀಡಲಿದೆ
ಶಶಿ ತರೂರ್, ಮುಖ್ಯಸ್ಥ, ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ
ಬಾಂಗ್ಲಾದೇಶವು ಭಾರತಕ್ಕೆ ಸೇರಿಲ್ಲ. ಬೇರೆ ದೇಶದ ಬಗ್ಗೆ ಭಾರತ ಸರ್ಕಾರವು ಗಮನ ಹರಿಸುತ್ತದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ವಿಚಾರದಲ್ಲಿ ಭಾರತ ಸರ್ಕಾರದ ನೀತಿಗಳನ್ನು ನಾವು ಪಾಲಿಸುತ್ತೇವೆ
ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ, ಪಶ್ಚಿಮ ಬಂಗಾಳ
ಚಿನ್ಮಯಿ ಕೃಷ್ಣದಾಸ್ ಅವರನ್ನು ನ್ಯಾಯಯುತ ಮಾರ್ಗದಲ್ಲಿ ಬಂಧಿಸಲಾಗಿಲ್ಲ. ಅವರನ್ನು ಕೂಡಲೇ ಬಿಡುಗಡೆ ಮಾಡಿ. ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿ
ಶೇಖ್ ಹಸೀನಾ, ಮಾಜಿ ಪ್ರಧಾನಿ (ಅವಾಮಿ ಲೀಗ್ ಪಕ್ಷದ ‘ಎಕ್ಸ್’ ಖಾತೆಯಿಂದ ಮಾಡಲಾದ ಪೋಸ್ಟ್)