ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಅಮೆರಿಕನ್ನರು ಬಳಸುವ ಪ್ರಮುಖ 5 ಭಾಷೆಗಳಲ್ಲಿ ಹಿಂದಿ

Last Updated 5 ಆಗಸ್ಟ್ 2021, 3:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿರುವ ಏಷ್ಯಾ ಮೂಲದವರು ಮಾತನಾಡುವ ಪ್ರಮುಖ ಐದು ಭಾಷೆಗಳಲ್ಲಿ ಹಿಂದಿ ಸಹ ಒಂದು ಎಂದು ತಜ್ಞರೊಬ್ಬರು ಹೇಳಿದ್ದಾರೆ.

ಏಷ್ಯಾ ಅಮೆರಿಕನ್ನರ ಪೈಕಿ ಮೂರನೇ ಎರಡರಷ್ಟು ಜನರು ವಲಸಿಗರಾಗಿದ್ದು, ಅವರಲ್ಲಿ ಶೇ.52ರಷ್ಟು ಜನರು ಇಂಗ್ಲಿಷ್‌ ಭಾಷೆಯ ಸೀಮಿತ ಪ್ರಾವಿಣ್ಯತೆ (ಎಲ್‌ಇಪಿ) ಹೊಂದಿದ್ದಾರೆ. ಏಷ್ಯಾ ಅಮೆರಿಕನ್‌ ಸಮುದಾಯಗಳ ನಡುವೆ ಎಲ್‌ಇಪಿ ದರದಲ್ಲಿ ವ್ಯತ್ಯಾಸವಿದೆ. ಈ ಸಮುದಾಯಗಳು ಮಾತನಾಡುವ ಪ್ರಮುಖ ಐದು ಭಾಷೆಗಳು; ಚೈನೀಸ್‌, ಟ್ಯಾಗಲಾಗ್‌, ವಿಯೆಟ್ನಾಮೀಸ್‌, ಕೋರಿಯನ್‌ ಹಾಗೂ ಹಿಂದಿ ಎಂದು 'ಏಷ್ಯಯನ್‌ ಅಮೆರಿಕನ್‌ ಅಡ್ವಾನ್ಸಿಂಗ್‌ ಜಸ್ಟಿಸ್‌ (ಎಎಜೆಸಿ)' ಅಧ್ಯಕ್ಷ ಜಾನ್‌ ಯಾಂಗ್‌ ತಿಳಿಸಿದ್ದಾರೆ.

ಚೀನಾದಿಂದ ವಲಸೆ ಬಂದಿರುವವರ ಪೈಕಿ ಶೇ.66ರಷ್ಟು ಜನರಿಗೆ ಇಂಗ್ಲಿಷ್‌ನಲ್ಲಿ ಸೀಮಿತಿ ಪ್ರಾವಿಣ್ಯತೆ ಇದೆ. ಫಿಲಿಪ್ಪೀನ್ಸ್‌ನ ಶೇ.35, ವಿಯೆಟ್ನಾಂನ ಶೇ.72, ಕೊರಿಯಾದ ಶೇ.64 ಹಾಗೂ ಭಾರತದ ಶೇ.29ರಷ್ಟು ಜನರಲ್ಲಿ ಇಂಗ್ಲಿಷ್‌ ಭಾಷೆಯ ಕೊರತೆಯನ್ನು ಗುರುತಿಸಿದ್ದಾರೆ.

ಏಷ್ಯಾ ಅಮೆರಿಕನ್ನರ ಪೈಕಿ ಬರ್ಮಾದಿಂದ ಬಂದವರಲ್ಲಿ ಎಲ್‌ಇಪಿ ದರವು ಅತಿ ಹೆಚ್ಚು ಶೇ.79ರಷ್ಟಿದೆ. ಏಷ್ಯಾ ಅಮೆರಿಕನ್‌ ಸಮುದಾಯದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಇಂಗ್ಲಿಷ್‌ನಲ್ಲಿ ಸಂವಹನ ನಡೆಸುವಾಗ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಜಾನ್‌ ಯಾಂಗ್‌ ಸಂಸತ್ತಿನ ಸದಸ್ಯರಿಗೆ ತಿಳಿಸಿದ್ದಾರೆ.

ಹಲವು ತಪ್ಪು ತಿಳಿವಳಿಕೆಗಳು ಹಾಗೂ ಹಾದಿ ತಪ್ಪಿಸುವ ಸಮೀಕ್ಷೆಗಳಿಂದಾಗಿ ಏಷ್ಯಾ ಅಮೆರಿಕನ್ನರ ಎಲ್‌ಇಪಿ ವಿಚಾರಗಳನ್ನು ಕಡೆಗಣಿಸಲಾಗಿದೆ. ಕೋವಿಡ್‌ ಸಾಂಕ್ರಾಮಿಕದಲ್ಲಿ ಈ ಸಮುದಾಯಗಳು ಕಠಿಣ ಹಣಕಾಸು ಪರಿಸ್ಥಿತಿಯನ್ನು ಎದುರಿಸಿವೆ ಎಂದಿದ್ದಾರೆ.

ಕೋವಿಡ್‌–19 ವ್ಯಾಪಿಸಲು ಏಷ್ಯಾ ಮೂಲದ ಅಮೆರಿಕನ್ನರು ಕಾರಣವೆಂದು ಕೆಂಡಕಾರುವ ಸನ್ನಿವೇಶಗಳು ಕಂಡು ಬಂದಿವೆ. ಕಪ್ಪು ವರ್ಣೀಯರು ಮತ್ತು ಏಷ್ಯಾ ಅಮೆರಿಕನ್ನರು ಅತಿ ಹೆಚ್ಚು ದ್ವೇಷಪೂರಿತ ಆಕ್ರೋಶಗಳ ಸಂತ್ರಸ್ತರಾಗಿದ್ದಾರೆ ಎಂದು ಯಾಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT