ಹಾಂಗ್‌ಕಾಂಗ್:ಹಾಂಗ್‌ಕಾಂಗ್ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣಿಕರ ಕ್ವಾರಂಟೈನ್ ಅವಧಿಯನ್ನು ಮೂರು ವಾರಗಳಿಗೆಶುಕ್ರವಾರ ವಿಸ್ತರಿಸಿದೆ. ಹೊಸ ಸ್ವರೂಪದ ಕೊರೊನಾ ವೈರಸ್ ಪ್ರಸರಣವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಅತ್ಯಗತ್ಯವಾಗಿದೆ ಎಂದು ಸರ್ಕಾರ ಹೇಳಿದೆ.

‘ಈ ಹಿಂದೆ ವಿದೇಶ ಪ್ರಯಾಣ ಮಾಡಿದವರಿಗೆ 14 ದಿನ (2 ವಾರಗಳ) ಕ್ವಾರಂಟೈನ್ ಅವಧಿಯನ್ನು ನಿಗದಿ ಮಾಡಲಾಗಿತ್ತು. ಆದರೆ ತಜ್ಞರ ಸಲಹೆ ಮೇರೆಗೆ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಲಾಗಿದೆ. ಹಾಗಾಗಿ ಅಂತರರಾಷ್ಟ್ರೀಯ ಪ್ರಯಾಣಿಕರು ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ ಮೂರು ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು’ ಎಂದು ಹಾಂಗ್‌ಕಾಂಗ್ ಸರ್ಕಾರ ಹೇಳಿದೆ.

ಚೀನಾ, ಮಕಾವ್ ಮತ್ತು ತೈವಾನ್‌ನಿಂದ ಆಗಮಿಸುವವರಿಗೆ ಮಾತ್ರ ಈ ನಿರ್ಬಂಧಗಳಿಂದ ವಿನಾಯತಿ ನೀಡಲಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಕಳೆದ 21 ದಿನಗಳ ಕಾಲ ವಾಸವಿದ್ದವರು ಹಾಂಗ್‌ಕಾಂಗ್‌ಗೆ ಆಗಮಿಸದಂತೆ ನಿರ್ಬಂಧವನ್ನು ವಿಧಿಸಲಾಗಿದೆ. ಅಲ್ಲದೆ ಬ್ರಿಟನ್ ವಿಮಾನಗಳನ್ನು ಕೂಡ ಗುರುವಾದಿಂದ ರದ್ದು ಮಾಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.