ಇಸ್ಲಾಮಾಬಾದ್: ಪಾಕಿಸ್ತಾನವು ಆರ್ಥಿಕ ಸಂಕಷ್ಟದಸುಳಿಯಲ್ಲಿ ಸಿಲುಕಿದ್ದು, ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು₹ 5.4 ರಷ್ಟುಮತ್ತು ಹೈ-ಸ್ಪೀಡ್ ಡೀಸೆಲ್ (ಎಚ್ಎಸ್ಡಿ) ದರವನ್ನು₹ 2.54 ರಷ್ಟು ಹೆಚ್ಚಿಸಿದೆ.

ತೆಹ್ರೀಕ್-ಐ-ಇನ್ಸಾಫ್ ಸರ್ಕಾರವು ಪಾಕಿಸ್ತಾನದಲ್ಲಿ ಗುರುವಾರ ಇಂಧನ ದರ ಏರಿಕೆ ಮಾಡಿರುವ ಬಗ್ಗೆ ಡಾನ್ ವರದಿ ಮಾಡಿದೆ.ಸದ್ಯ ದೇಶದಲ್ಲಿಪ್ರತಿ ಲೀಟರ್ ಪೆಟ್ರೋಲ್ಗೆ₹ 118.09 ಮತ್ತುಪ್ರತಿ ಲೀಟರ್ ಡೀಸೆಲ್ಗೆ ₹116.5 ಇದೆ ಎಂದೂ ಉಲ್ಲೇಖಿಸಿದೆ.

ಇದೇರೀತಿ ಸೀಮೆಎಣ್ಣೆ ಮತ್ತು ಲೈಟ್-ಡೀಸೆಲ್ ಕ್ರಮವಾಗಿ₹1.39 ಮತ್ತು ₹1.27 ಹೆಚ್ಚಳಗೊಂಡಿವೆ. ಪರಿಷ್ಕೃತ ದರದಂತೆ ಸೀಮೆಎಣ್ಣೆ ಬೆಲೆ ₹ 87.14 ಹಾಗೂ ಲೈಟ್-ಡೀಸೆಲ್ ದರ ₹ 84.67 ಆಗಿದೆ.

ಪ್ರಧಾನ ಮಂತ್ರಿಗಳ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕ (ಎಸ್ಎಪಿಎಂ) ಶಹಬಾಜ್ ಗಿಲ್, ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರದ (ಒಜಿಆರ್ಎ) ಶಿಫಾರಸುಗಳಆಧಾರದಲ್ಲಿ ಬೆಲೆಯನ್ನು ಹೆಚ್ಚಿಸದೆ ಸಾರ್ವಜನಿಕರಿಗೆ ʼಭಾರಿನೆರವುʼ ನೀಡಲು ಪ್ರಧಾನಿ ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ದರವನ್ನು ಪ್ರತಿ ಲೀಟರ್ಗೆ₹ 11.4 ಹೆಚ್ಚಿಸುವಂತೆ ಒಜಿಆರ್ಎ ಶಿಫಾರಸು ಮಾಡಿತ್ತು ಎಂದುಗಿಲ್ ತಿಳಿಸಿದ್ದಾರೆ. ಮುಂದುವರಿದು, ʼಪ್ರಧಾನಿಯವರುಸಾರ್ವಜನಿಕರ ಹಿತದೃಷ್ಟಿಯಿಂದ ಒಜಿಆರ್ಎಶಿಫಾರಸುಗಳಿಗೆ ವಿರುದ್ಧವಾಗಿ, ಪ್ರತಿ ಲೀಟರ್ಗೆ 5.40 ರೂ.ಗಳನ್ನು ಮಾತ್ರವೇ ಹೆಚ್ಚಿಸಲು ಅನುಮೋದಿಸಿದ್ದಾರೆʼಎಂದು ಟ್ವೀಟ್ ಮಾಡಿದ್ದಾರೆ.

ಒಜಿಆರ್ಎ ಶಿಫಾರಸಿನಂತೆ ತೈಲ ಬೆಲೆ ಹೆಚ್ಚಿಸದೆ,ಸಾರ್ವಜನಿಕರಿಗೆ ಗರಿಷ್ಠ ನೆರವು ನೀಡುವುದರಿಂದಬೀಳಲಿರುವ ಹೊರೆಯನ್ನು ಸರ್ಕಾರವೇ ಹೊರಲಿದೆ ಎಂದೂ ಗಿಲ್ ಹೇಳಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ, ಅಂತರರಾಷ್ಟ್ರೀಯ ಮಾರುಕಟ್ಟೆ ದರಕ್ಕನುಗುಣವಾಗಿ ತೈಲ ಬೆಲೆ ಹೆಚ್ಚಿಸದೆ ಸರ್ಕಾರದ ಬಳಿ ʼಬೇರೆ ಆಯ್ಕೆ ಇಲ್ಲʼ ಎಂದಿದ್ದಾರೆ.

ಕಳೆದ15 ದಿನಗಳಲ್ಲಿ ಪೆಟ್ರೋಲ್ ಬೆಲೆಯನ್ನು ಎರಡನೇ ಸಲ ಹೆಚ್ಚಿಸಲಾಗಿದೆ. ಸರ್ಕಾರ, ಈ ತಿಂಗಳ (ಜುಲೈ) ಆರಂಭದಲ್ಲಿ ಎಲ್ಲಾ ರೀತಿಯ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಶೇ.4.7 ರಷ್ಟು ಹೆಚ್ಚಿಸಿತ್ತು.

ಇವನ್ನೂ ಓದಿ
*ಇಮ್ರಾನ್ ಖಾನ್ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿಯಾಗಲಿದೆ: ಭುಟ್ಟೊ
*ಪಾಕ್ನಲ್ಲಿ ಕೋವಿಡ್ ನಾಲ್ಕನೇ ಅಲೆಯ ಲಕ್ಷಣ: ಸಚಿವ ಉಮರ್ ಎಚ್ಚರಿಕೆ
*ಬಾಂಗ್ಲಾದಲ್ಲಿ ಪಾಕ್ ನಡೆಸಿದ ನರಮೇಧವನ್ನು ವಿಶ್ವಸಂಸ್ಥೆ ಗುರುತಿಸಬೇಕು:ಶೌಕತ್ ಅಲಿ
*ಟಿವಿ ಲೈವ್ ಕಾರ್ಯಕ್ರಮದಲ್ಲೇ ಸಂಸದನ ಕೆನ್ನೆಗೆ ಹೊಡೆದ ಮಹಿಳೆ
*ಪಾಕ್ ರಾಜತಾಂತ್ರಿಕರ ಕಾರ್ಯನಿರ್ವಹಣೆ: ಇಮ್ರಾನ್ಖಾನ್ ಟೀಕೆಗೆ ಆಕ್ಷೇಪ
*ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಬರೆದ ಪತ್ರದಲ್ಲೇನಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.