ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆ ಖಂಡಿಸಿ ವಿಶ್ವದ ಹಲವೆಡೆ ಆಕ್ರೋಶ ಭುಗಿಲೆದ್ದಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇರಾನ್ ಮೇಲೆ ಇಸ್ರೇಲ್–ಅಮೆರಿಕ ಜಂಟಿಯಾಗಿ ದಾಳಿ ನಡೆಸಲು ಭಾರತ ಚಿಮ್ಮು ಹಲಗೆಯ ರೀತಿಯಲ್ಲಿ ಕೆಲಸ ಮಾಡಿದಿಯೇ?, ಭಾರತ ಇಸ್ರೇಲ್ನ ಪ್ರಮುಖ ಕಾರ್ಯತಂತ್ರದ ಪಾಲುದಾರನಾಗುತ್ತಿದೆಯೇ? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಗೆಯ ಚರ್ಚೆಗಳು ನಡೆಯುತ್ತಿವೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಇಸ್ರೇಲ್ಗೆ ಹೋಗುತ್ತಾರೆ. ಅದಾಗಿ 24 ತಾಸಿನಲ್ಲಿ ಅಫ್ಗಾನಿಸ್ತಾನವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತದೆ. ಅದಾದ ಕೆಲವೇ ಗಂಟೆಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡುತ್ತವೆ. ಈ ಹಿಂದೆ ಇಸ್ರೇಲ್, ಇರಾನಿನ ಮೇಲೆ ದಾಳಿ ಮಾಡಿದಾಗ ಪಾಕಿಸ್ತಾನ ಅದರ ಬೆಂಬಲಕ್ಕೆ ನಿಂತಿತ್ತು’ ಎಂದು ಹೂಡಿಕೆ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಇಸ್ರೇಲ್ ಚರಿತ್ರೆಯಿಂದ ಪಾಠ ಕಲಿತು ಬಿಟ್ಟಿತ್ತು. ತನ್ನ ಆಪ್ತ ಮಿತ್ರನನ್ನು ಕರೆಸಿಕೊಂಡು ಇರಾನ್ ದೇಶದ ಬಗೆಗಿನ ಮಾಹಿತಿ ಕೊಡಲು, ಓಮನ್ ದೇಶದ ಜೊತೆಗಿನ ಮತ್ತು ಅಫ್ಗಾನ್ ಜೊತೆಗಿನ ಭಾರತದ ಸ್ನೇಹವನ್ನು ಬಳಸಿಕೊಂಡಿದೆ ಎಂದು ರಂಗಸ್ವಾಮಿ ಪ್ರತಿಪಾದಿಸಿದ್ದಾರೆ.

‘ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಗಾನಿಸ್ತಾನಕ್ಕೆ ಹೋಗಿ ತಾಲಿಬಾನಿಯರೊಂದಿಗೆ ಮಾತುಕತೆ ನಡೆಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಫ್ಗಾನ್, ಪಾಕ್ ಮೇಲೆ ಬಾಂಬ್ ದಾಳಿ ನಡೆಸಿದೆ. ಪಾಕ್ ಇರಾನ್ಗೆ ಸಹಾಯ ಮಾಡುವುದು ದೂರದ ಮಾತು, ತನ್ನ ಮನೆ ಉಳಿಸಿಕೊಳ್ಳಲು ಪರದಾಡುತ್ತಿದೆ. ಓಮನ್ ದೇಶದ ಜೊತೆಗೆ ಭಾರತ ಉತ್ತಮ ಸಂಬಂಧ ಹೊಂದಿದೆ. ಅಲ್ಲಿನ ಬಂದರಿನಲ್ಲಿ ನಮ್ಮ ನೌಕಪಡೆ ಇರಲು ಅಲ್ಲಿನ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅಲ್ಲಿಂದ 800 ಕಿಲೋಮೀಟರ್ ದೂರದಲ್ಲಿರುವ ಇರಾನ್ನ ಚಲನವಲನಗಳ ಬಗ್ಗೆ ಭಾರತದ ಸಶಸ್ತ್ರ ನೌಕಾಪಡೆ ಮಾಹಿತಿ ಸಂಗ್ರಹಿಸಿ ಇಸ್ರೇಲ್ಗೆ ರವಾನೆ ಮಾಡಿದೆ. ಒಂದು ರೀತಿಯಲ್ಲಿ ಇಸ್ರೇಲ್ನ ದಾಳಿಗೆ ಭಾರತ ಚಿಮ್ಮು ಹಲಗೆಯ ರೀತಿಯಲ್ಲಿ ಕೆಲಸ ಮಾಡಿದೆ’ ಎಂದು ಹೇಳಿದ್ದಾರೆ.

‘ಮೇಲ್ನೋಟಕ್ಕೆ ಇರಾನ್ನ ಅಣುಸ್ಥಾವರ ಹೆಚ್ಚು ಅಪಾಯಕಾರಿ. ಹೀಗಾಗಿ ಇರಾನ್ ಮೇಲೆ ದಾಳಿ ಅನಿವಾರ್ಯ ಎನ್ನಲಾಗಿದೆ. ನಿಜವಾದ ಕಾರಣ ತೈಲ. ಇಲ್ಲಿ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಹುನ್ನಾರವಿದೆ. ಒಂದು ತೈಲದ ಮೇಲಿನ ನಿಯಂತ್ರಣ, ಎರಡು ಚೀನಾ ಮೇಲೆ ನಿಯಂತ್ರಣ. ಇರಾನ್ನ ಬಹುತೇಕ ತೈಲ ರಫ್ತುಗುವುದು ಚೀನಾಕ್ಕೆ ಎನ್ನುವುದು ನಿಮಗೆ ತಿಳಿದಿರಲಿ. ಇರಾನ್ ಸುತ್ತಮುತ್ತಲಿನ ಎಲ್ಲಾ ಮುಸ್ಲಿಂ ದೇಶಗಳನ್ನೂ ಅಮೆರಿಕ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಆ ದೇಶಗಳ ನೆಲವನ್ನು ಬಳಸಿಕೊಂಡು ಇರಾನ್ ಮೇಲೆ ದಾಳಿ ಮಾಡಲಾಗುತ್ತಿದೆ. ಹೀಗಾಗಿ ಇರಾನ್ ಕೋಪದಿಂದ ಬಹರೈನ್, ದುಬೈ, ಅಬುಧಾಬಿ ಮೇಲೆ ಕೂಡ ದಾಳಿ ಮಾಡುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

ಸದ್ಯಕ್ಕೆ ಚೀನಾದ ನಡೆ ಗೊತ್ತಿಲ್ಲ. ಚೀನಾ ಯಾವ ದೇಶವನ್ನೂ ಮಿತ್ರ ಅಥವಾ ಶತ್ರು ಎಂದು ನೋಡುವುದಿಲ್ಲ. ಲಾಭ ಮತ್ತು ನಷ್ಟ ಅಷ್ಟೇ ಮುಖ್ಯ. ಭಾರತದ ಕಥೆಯೂ ಇದೇ ಆಗಿದೆ. ನಿನ್ನೆ ತನಕ ಅಮೆರಿಕದಿಂದ ದೂರವಿದ್ದ ಭಾರತ ಆಕಸ್ಮಿಕವಾಗಿ ಇಸ್ರೇಲ್ ಕಾರಣದಿಂದ ಅಪರೋಕ್ಷವಾಗಿ ಅಮೆರಿಕ ಪಾಳಯದಲ್ಲಿದೆ. ಚೀನಾ ಅಖಾಡಕ್ಕೆ ಇಳಿದರೆ ಅದು ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾಗುವುದು ಪಕ್ಕಾ. ಚೀನಾ ಏನು ಮಾಡುತ್ತೆ ಎನ್ನುವುದು ನಿರ್ಣಾಯಕ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿವೆ. ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ಇದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಸ್ಥಿತಿ ಮನೆ ಮಾಡಿದೆ.

ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಖಮೇನಿ ಎಂಬ ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ ಹತನಾಗಿದ್ದಾನೆ’ ಎಂದು ಟ್ರಂಪ್ ತನ್ನ ಸಾಮಾಜಿಕ ಜಾಲತಾಣ ‘ಟ್ರೂಥ್ ಸೋಶಿಯಲ್’ನಲ್ಲಿ ಬರೆದುಕೊಂಡಿದ್ದಾರೆ.
.ಇಸ್ರೇಲ್, ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ.ಖಮೇನಿ ಹತ್ಯೆಗೆ ಖಂಡನೆ: ಪಾಕ್ನಲ್ಲಿ ಅಮೆರಿಕ ರಾಯಭಾರ ಕಚೇರಿ ಧ್ವಂಸ; 10 ಸಾವು.ಖಮೇನಿ ಹತ್ಯೆ ಬಳಿಕವೂ ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ.ಯಾವೆಲ್ಲಾ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಮೆರಿಕದ ವಾಯುನೆಲೆಗಳಿವೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.