ಹೂಸ್ಟನ್: ಮತದಾನದ ಹಕ್ಕು, ಪರಿಸರ ಸಂರಕ್ಷಣೆ ಹಾಗೂ ಸಂತಾನೋತ್ಪತಿ ಹಕ್ಕುಗಳ ಕುರಿತು ದಿಟ್ಟ ನಾಯಕತ್ವ ಪ್ರದರ್ಶಿಸಿದ ಭಾರತ ಮೂಲದ ಅರಿಜೋನಾ ಸೆನೆಟರ್ ಪ್ರಿಯಾ ಸುಂದರೇಶನ್ ಅವರನ್ನು ಪ್ರತಿಷ್ಠಿತ ‘ಗೇಬ್ರಿಯೆಲ್ ಗಿಫರ್ಡ್ಸ್ ರೈಸಿಂಗ್ ಸ್ಟಾರ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಅರಿಜೋನಾದ 18ನೇ ಜಿಲ್ಲೆಯ ಸೆನೆಟರ್ ಆಗಿರುವ ಪ್ರಿಯಾ ಅವರು, ರಾಜ್ಯ ರಾಜಕೀಯದಲ್ಲಿ ಪ್ರಬಲ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಗರ್ಭಪಾತ ನಿಷೇಧಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.

ಭಾರತ ಮೂಲದ ಪ್ರಿಯಾ ಅವರು ಕಾನೂನು ಹಾಗೂ ಸುಸ್ಥಿರ ವಿಷಯದಲ್ಲಿ ವೃತ್ತಿ ನಡೆಸುತ್ತಿದ್ದಾರೆ. 2006ರಲ್ಲಿ ಎಂಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಮುಗಿಸಿದ್ದು, 2011ರಲ್ಲಿ ಅರಿಜೊನಾ ವಿಶ್ವವಿದ್ಯಾಲಯದಿಂದ ನೈಸರ್ಗಿಕ ಸಂಪನ್ಮೂಲ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.