ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಗುಂಡಿಕ್ಕಿ ಭಾರತ ಮೂಲದ ವೃದ್ಧನ ಕೊಲೆ

Published 15 ಫೆಬ್ರುವರಿ 2024, 16:11 IST
Last Updated 15 ಫೆಬ್ರುವರಿ 2024, 16:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತ ಮೂಲದ ಪ್ರವೀಣ್‌ ರಾವ್‌ಜಿ ಭಾಯ್‌ ಪಟೇಲ್‌ ಎಂಬ 73 ವರ್ಷದ ಮೋಟೆಲ್‌ (ರಸ್ತೆ ಪಕ್ಕದ ಹೋಟೆಲ್‌) ಮಾಲೀಕನನ್ನು ಗ್ರಾಹಕನೊಬ್ಬ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಕಳೆದ ವಾರ ಅಮೆರಿಕದ ಅಲಾಬಾಮ ರಾಜ್ಯದಲ್ಲಿ ನಡೆದಿದೆ.

ಪ್ರವೀಣ್‌ ಅವರು ಶೆಫೀಲ್ಡ್‌ನಲ್ಲಿ ಹಿಲ್‌ಕ್ರೆಸ್ಟ್‌ ಎಂಬ ಮೋಟೆಲ್‌ಅನ್ನು ನಡೆಸುತ್ತಿದ್ದರು. ಕೋಣೆಯೊಂದರ ವಿಚಾರವಾಗಿ ಗ್ರಾಹಕ ಮತ್ತು ಪ್ರವೀಣ್‌ ನಡುವೆ ಜಗಳವಾದ ಸಂಬಂಧ ಈ ಕೊಲೆ ನಡೆದಿದೆ.

‘ಫೆಬ್ರುವರಿ 8ರಂದು ಪ್ರವೀಣ್‌ ಅವರನ್ನು ವಿಲಿಯಂ ಜೆರೆಮಿ ಮೂರ್‌ ಎಂಬಾತ ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಶೆಫೀಲ್ಡ್‌ ಪೊಲೀಸ್‌ ಮುಖ್ಯಸ್ಥ ರಿಕಿ ಟೆರಿ ಹೇಳಿದ್ದಾರೆ’ ಎಂದು ಡಬ್ಲ್ಯುಎಎಫ್‌ಎಪ್‌ ಸುದ್ದಿ ವಾಹಿನಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT