ಲಾಹೋರ್: ಸ್ಥಳೀಯ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿರುವ ಭಾರತೀಯ ಸಿಖ್ ಮಹಿಳೆಯನ್ನು ಬಂಧಿಸಿ ಗಡೀಪಾರು ಮಾಡಬೇಕೆಂದು ಕೋರಿ ಸಿಖ್ ಸಮುದಾಯದವರೇ ಆದ ಮಾಜಿ ಶಾಸಕರೊಬ್ಬರು ಬುಧವಾರ ಪಾಕಿಸ್ತಾನದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಪಂಜಾಬ್ ವಿಧಾನಸಭೆಯ ಮಾಜಿ ಸದಸ್ಯೆ ಮಹಿಂದರ್ ಪಾಲ್ ಸಿಂಗ್ ಅವರು ಲಾಹೋರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಸರಬ್ಜೀತ್ ಕೌರ್ (48) ಪಾಕಿಸ್ತಾನಕ್ಕೆ ಬಂದ ನಂತರ ಕಣ್ಮರೆಯಾಗಿದ್ದರು. ಅವರು ಗೂಢಚಾರಿಣಿ ಆಗಿರಬಹುದು ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ.

ಅಪರಾಧ ಹಿನ್ನೆಲೆ ಹೊಂದಿದ್ದರೂ ಭಾರತ ಸರ್ಕಾರ ಕೌರ್ಗೆ ಪಾಕ್ಗೆ ತೆರಳಲು ಅನುಮತಿ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

‘ಆಕೆಯ ವೀಸಾ ಅವಧಿ ಮುಗಿದ ನಂತರ ಪಾಕಿಸ್ತಾನದಲ್ಲಿ ಉಳಿಯುವುದು ಕಾನೂನುಬಾಹಿರ ಕೃತ್ಯವಾಗಿದೆ. ಏಕೆಂದರೆ, ಈ ವಿಷಯವು ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ’ಎಂದು ಅವರು ಹೇಳಿದ್ದಾರೆ.

ಕೌರ್ ಅವರನ್ನು ಬಂಧಿಸಿ ಗಡೀಪಾರು ಮಾಡಲು ಕಾನೂನು ಜಾರಿ ಸಂಸ್ಥೆಗಳಿಗೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಗುರುನಾನಕ್ ಜನುಮಸ್ಥಾನ, ನಂಕಾನಾ ಸಾಹಿಬ್ನಲ್ಲಿ ಗುರುನಾನಕ್ ಅವರ ಜನ್ಮ ದಿನಾಚರಣೆಗೆ ಸಂಬಂಧಿಸಿದ ಉತ್ಸವಗಳಲ್ಲಿ ಭಾಗವಹಿಸಲು ಈ ತಿಂಗಳ ಆರಂಭದಲ್ಲಿ ಭಾರತದಿಂದ ವಾಘಾ ಗಡಿಯ ಮೂಲಕ ಲಾಹೋರ್ಗೆ ಪ್ರವೇಶಿಸಿದ್ದ 2,000 ಸಿಖ್ ಯಾತ್ರಿಕರಲ್ಲಿ ಕೌರ್ ಕೂಡ ಒಬ್ಬರು.

ನವೆಂಬರ್ 13ರಂದು, ಪಾಕ್ಗೆ ಭೇಟಿ ನೀಡಿದ್ದ ಭಾರತೀಯ ಸಿಖ್ಖರು ಬಳಿಕ ಸ್ವದೇಶಕ್ಕೆ ಮರಳಿದ್ದರು. ಆದರೆ, ಕೌರ್ ಮಾತ್ರ ನಾಪತ್ತೆಯಾಗಿದ್ದರು. ನಂತರ, ನವೆಂಬರ್ 4ರಂದು ಲಾಹೋರ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.

ಯಾತ್ರಿಕರು ನಂಕಾನಾ ಸಾಹಿಬ್ಗೆ ಹೋಗಿದ್ದಾಗ ಕೌರ್ ಆ ಗುಂಪಿನಿಂದ ಹೊರಬಂದು ಹುಸೇನ್ ಜೊತೆಗೆ ಶೇಖುಪುರ ತಲುಪಿದ್ದರು.

ಈ ನಡುವೆ, ಪೊಲೀಸರು ಶೇಖುಪುರದ ಫಾರೂಕಾಬಾದ್ನಲ್ಲಿರುವ ತಮ್ಮ ಮನೆಯ ಮೇಲೆ ದಾಳಿ ನಡೆಸಿ, ಮದುವೆಯನ್ನು ಕೊನೆಗೊಳಿಸುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿ ಕಳೆದ ವಾರ, ಕೌರ್ ಮತ್ತು ಹುಸೇನ್ ಲಾಹೋರ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಸಂದರ್ಭ ನ್ಯಾಯಮೂರ್ತಿ ಫಾರೂಕ್ ಹೈದರ್ ಅರ್ಜಿದಾರರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು.

ಪೊಲೀಸ್ ಅಧಿಕಾರಿಯೊಬ್ಬರು ದಂಪತಿಗೆ ಅನಗತ್ಯ ಕಿರುಕುಳ ನೀಡಿದ್ದಾರೆ. ಮದುವೆಯನ್ನು ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಕೌರ್ ಅರ್ಜಿಯಲ್ಲಿ ತಿಳಿಸಿದ್ದರು.

ತನ್ನ ಪತಿ ಪಾಕಿಸ್ತಾನದ ಪ್ರಜೆಯಾಗಿದ್ದು, ತನ್ನ ವೀಸಾವನ್ನು ವಿಸ್ತರಿಸಲು ಮತ್ತು ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಪಡೆಯಲು ಇಲ್ಲಿನ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇನೆ ಎಂದು ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.