ಸಿಡೋರ್ಜೊ: ಇಂಡೊನೇಷ್ಯಾದಲ್ಲಿ ಕುಸಿದು ಬಿದ್ದ ಶಾಲೆ ಕಟ್ಟಡದ ಅವಶೇಷಗಳಡಿಯಿಂದ ಮೂವರು ಬಾಲಕರ ಶವಗಳನ್ನು ಶುಕ್ರವಾರ ಹೊರತೆಗೆಯಲಾಗಿದೆ. 55 ವಿದ್ಯಾರ್ಥಿಗಳು ಇನ್ನೂ ಪತ್ತೆಯಾಗದ ಕಾರಣ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಜಾವ ದ್ವೀಪದ ಪೂರ್ವ ಭಾಗದಲ್ಲಿರುವ ಸಿಡೋರ್ಜೊದಲ್ಲಿ ಶತಮಾನದಷ್ಟು ಹಳೆಯದಾದ ಅಲ್ ಖೋಜಿನಿ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯ ಪ್ರಾರ್ಥನಾ ಮಂದಿರದ ಕಟ್ಟಡವು ಸೋಮವಾರ ಕುಸಿದಿತ್ತು.

ರಕ್ಷಣಾ ಸಿಬ್ಬಂದಿಯು ಸಾಮಾನ್ಯ ವಿಧಾನದ ಮೂಲಕ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಆದರೆ, ಯಾವ ವಿದ್ಯಾರ್ಥಿಯ ಸುಳಿವೂ ಸಿಕ್ಕಿರಲಿಲ್ಲ. ಹೀಗಾಗಿ, ಮಂಗಳವಾರ ಯಂತ್ರೋಪಕರಣಗಳ ಮೂಲಕ ರಕ್ಷಣಾ ಕಾರ್ಯ ಕೈಗೊಂಡರು.

ಎಂಟು ವಿದ್ಯಾರ್ಥಿಗಳು ಮೃತಪಟ್ಟಿರುವುದು ದೃಢಪಟ್ಟಿದ್ದು, 105 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅನೇಕರ ತಲೆಗೆ ಗಾಯವಾಗಿದ್ದು, ಮೂಳೆಗಳು ಮುರಿದಿವೆ.

ವಿದ್ಯಾರ್ಥಿಗಳ ಪೈಕಿ 7ರಿಂದ 12ನೇ ತರಗತಿ ವಿದ್ಯಾರ್ಥಿಗಳಾಗಿದ್ದು, 12ರಿಂದ 19ರ ವಯೋಮಾನದವರಾಗಿದ್ದಾರೆ. ಕಟ್ಟಡದ ಇನ್ನೊಂದು ಭಾಗದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.