ಮಾಸ್ಕೊ: ಇರಾನ್, ಉಕ್ರೇನ್ ಸಂಘರ್ಷ ಸೇರಿದಂತೆ ಇತರೆ ವಿಷಯಗಳ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ತಿಳಿಸಿದೆ.

ಇರಾನ್ ಕುರಿತು ಚರ್ಚಿಸುವಾಗ ಎಲ್ಲ ಬಿಕ್ಕಟ್ಟುಗಳನ್ನು ರಾಜಕೀಯ ಹಾಗೂ ರಾಜತಾಂತ್ರಿಕ ವಿಧಾನದ ಮೂಲಕ ಬಗಹರಿಸುವ ಅಗತ್ಯವನ್ನು ಪುಟಿನ್ ಒತ್ತಿ ಹೇಳಿದ್ದಾರೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ವಕ್ತಾರ ತಿಳಿಸಿದ್ದಾರೆ.

ಜೂನ್ 22ರಂದು ಅಮೆರಿಕವು ಇರಾನ್ನ ಮೂರು ಪರಮಾಣು ಘಟಕಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ಆ ಮೂಲಕ ಇಸ್ರೇಲ್-ಇರಾನ್ ಯುದ್ಧದಲ್ಲಿ ನೇರವಾಗಿ ಮಧ್ಯ ಪ್ರವೇಶ ಮಾಡಿತ್ತು.

ಮಾತುಕತೆಯ ವೇಳೆ ಉಕ್ರೇನ್ ಜೊತೆಗಿನ ಸಂಘರ್ಷವನ್ನು ಬೇಗನೇ ಕೊನೆಗೊಳಿಸಲು ಟ್ರಂಪ್ ಒತ್ತಿ ಹೇಳಿದರು. ಈ ವೇಳೆ ಚರ್ಚೆಗೆ ಸಿದ್ಧರಾಗಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ. ಆದರೆ ಉಕ್ರೇನ್ನಲ್ಲಿ ಮೂಲ ಕಾರಣವನ್ನು ನಿರ್ಮೂಲನೆ ಮಾಡುವತ್ತ ತನ್ನ ಗುರಿಯನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ.

ಉಕ್ರೇನ್ ನ್ಯಾಟೊ ಒಕ್ಕೂಟವನ್ನು ಸೇರುವುದನ್ನು ರಷ್ಯಾ ವಿರೋಧಿಸುತ್ತಲೇ ಬಂದಿದೆ. ಅಲ್ಲದೆ ಉಕ್ರೇನ್ನಿಂದ ಎದುರಾಗುವ ಬೆದರಿಕೆಯ ವಿರುದ್ಧ 2022ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತ್ತು ಎಂದು ಹೇಳಿಕೊಂಡಿದೆ.
.ಇರಾನ್ ವಿದೇಶಾಂಗ ಸಚಿವರ ಭೇಟಿ: ಬೆಂಬಲ ವ್ಯಕ್ತಪಡಿಸಿದ ರಷ್ಯಾ ಅಧ್ಯಕ್ಷ ಪುಟಿನ್.ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಗೆ: ಟ್ರಂಪ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.